• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ತೀವ್ರಗೊಂಡ ಪ್ರತಿಭಟನೆ

|

ಶ್ರೀನಗರ, ಆಗಸ್ಟ್ 10: ಕಾಶ್ಮೀರಕ್ಕೆ ವಿಶೇಷಸ್ಥಾನಮಾನ ಕಲ್ಪಿಸಿದ್ದ ವಿಧಿ 70 ರದ್ದು ಮಾಡಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಶ್ರೀನಗರದಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಯಾವುದೇ ಕಾರಣಕ್ಕೂ ಸಂವಿಧಾನ ವಿಧಿ 370 ರದ್ದತಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಮಹಿಳೆಯರೂ ಸೇರಿ ಹಲವು ಮಂದಿ ಬೀದಿಗಿಳಿದಿದ್ದಾರೆ. ಪ್ರತಿಭಟನೆ ಕಾವು ತೀವ್ರವಾಗುತ್ತಿದ್ದಂತೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.

ಜಮ್ಮು ಕಾಶ್ಮೀರದ ಇತಿಹಾಸ ನೆನಪಿಸಬೇಕಿದೆ, ಆಧುನಿಕ ಜಮ್ಮು ಕಾಶ್ಮೀರ ಹೇಗಾಯಿತು?

ಭಾರತೀಯ ಸರ್ಕಾರವು ದೇಶದ ಎಲ್ಲಾ ರಾಜ್ಯವನ್ನು ಸಂವಿಧಾನದಡಿಗೆ ತರುವ ನಿಟ್ಟಿನಿಂದ ಆರ್ಟಿಕಲ್ 370 ರದ್ದು ಮಾಡಿತ್ತು. ಈಗ ಜಮ್ಮು ಮತ್ತು ಕಾಶ್ಮೀರ ರಾಜ್ಯವಾಗಿರದೆ ಕೇಂದ್ರಾಡಳಿತ ಪ್ರದೇಶವಾಗಿದೆ. ಲಡಾಕ್ ಕೂಡ ಕೇಂದ್ರಾಡಳಿತ ಪ್ರದೇಶವಾಗಿದೆ.

ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಇರಲಿದೆ ಆದರೆ ಲಡಾಕ್‌ನಲ್ಲಿ ವಿಧಾನಸಭೆ ಇರುವುದಿಲ್ಲ.ಈ ನಿರ್ಧಾರದಿಂದ ಪಾಕಿಸ್ತಾನ ಮುನಿಸಿಕೊಂಡಿದ್ದು, ಭಾರತದ ಜೊತೆ ಯಾವುದೇ ವ್ಯವಹಾರವನ್ನು ಹೊಂದುವುದಿಲ್ಲ ಎಂದು ಹೇಳಿದೆ. ಅದರ ಜೊತೆಗೆ ಥಾರ್, ಸಂಜೋತಾ ಎಕ್ಸ್‌ ಪ್ರೆಸ್‌ ರೈಲನ್ನು ಸ್ಥಗಿತಗೊಳಿಸಿದೆ. ಅದರ ಜೊತೆಗೆ ಪಾಕಿಸ್ತಾನ ಏರೋಸ್ಪೇಸ್‌ನಲ್ಲಿ ಭಾರತದ ವಿಮಾನಕ್ಕೆ ನಿರ್ಬಂಧವನ್ನೂ ಕೂಡ ಹೇರಿದೆ.

English summary
Indian troops fire tear gas as mass protests erupt in Srinagar,S ome demonstrators were carrying black flags and placards saying We want freedom and Abrogation of Article 370 is not acceptable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X