• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ, ಇರಾನ್‌ನಲ್ಲಿ ತರಬೇತಿ ಪಡೆದ ಗುರಿಕಾರರ ಗಡಿಯಲ್ಲಿ ನಿಲ್ಲಿಸಿದ ಸೇನೆ

|

ಶ್ರೀನಗರ, ಮೇ 28: ಅಮೆರಿಕ, ಇರಾನ್‌ ನಲ್ಲಿ ಶಸ್ತ್ರಾಸ್ತ್ರ ತರಬೇತಿ ವಿಶೇಷವಾಗಿ ದೂರದ ಗುರಿಯನ್ನು ಹೊಡೆದುರುಳಿಸುವ ತರಬೇತಿ ಪಡೆದ ಸ್ನೈಪರ್‌ಗಳನ್ನು ಭಾರತೀಯ ಸೇನೆಯು ಗಡಿಯಲ್ಲಿ ನಿಲ್ಲಿಸಿದೆ.

ಪುಲ್ವಾಮಾದಲ್ಲಿ ಎನ್‌ಕೌಂಟರ್: ಮೂವರು ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ

ಉಗ್ರರ ನುಸುಳುವಿಕೆಯನ್ನು ತಡೆಯಲು ಈ ಕ್ರಮವನ್ನು ಸೇನೆಯು ಕೈಗೊಂಡಿದ್ದು, ಅಮೆರಿಕ, ಇರಾನ್‌ನಲ್ಲಿ ಸ್ನೈಪರ್‌ ತರಬೇತಿಯನ್ನು ವಿಶೇಷವಾಗಿ ಪಡೆದ ಗುರಿಕಾರರನ್ನೇ ಗಡಿ ನಿಯಂತ್ರಣಾ ರೇಖೆಯ ಬಳಿ ಸೇನೆಯು ಕಾವಲಿಗೆ ನಿಲ್ಲಿಸಿದೆ.

ಜಮ್ಮು-ಕಾಶ್ಮೀರದಲ್ಲಿ IED ಸ್ಫೋಟ, ಓರ್ವ ಸೈನಿಕ ಹುತಾತ್ಮ

ಬ್ಯಾರೆಟ್ಟಾ, 338 ಲ್ಯಾಪುವಾ ಮ್ಯಾಗ್ನಮ್ ಸ್ಕಾರ್ಪಿಯೋ ಟಿಜಿಟಿ, 50 ಕ್ಯಾಲಿಬರ್ ಎಂ 95 ಮಾದರಿಯ ಆಧುನಿಕ ತಂತ್ರಜ್ಞಾನದ ದೂರ ಗುರಿಯನ್ನು ಹೊಡೆದುರುಳಿಸಲು ಬಳಸುವ ಬಂದೂಕುಗಳನ್ನು ಸ್ನೈಪರ್‌ಗಳಿಗೆ ಭಾರತೀಯ ಸೇನೆಯು ನೀಡಿದೆ.

ಈ ಹಿಂದೆ ಭಾರತೀಯ ಸ್ನೈಪರ್‌ಗಳು ರಷ್ಯಾದ ಡ್ರಾಗುನಾವ್ ಅನ್ನು ಬಳಸುತ್ತಿದ್ದರು, ಇದು ಹಳೆಯ ಮಾದರಿಯ ಸ್ನೈಪರ್ ಗನ್ ಆಗಿತ್ತು. ಆದರೆ ಈಗ ನೀಡಲಾಗಿರುವ ಬಂದೂಕುಗಳು ಅಮೆರಿಕದ ನೂತನ ತಂತ್ರಜ್ಞಾನ ಹೊಂದಿರುವ 1800 ಮೀಟರ್ ದೂರದ ಗುರಿಯನ್ನು ಹೊಡೆದುರುಳಿಸುವ ಶಕ್ತಿಯನ್ನು ಹೊಂದಿವೆ.

2016ರಲ್ಲಿ ನಡೆದಿದ್ದೇ ಮೊದಲ ಸರ್ಜಿಕಲ್ ಸ್ಟ್ರೈಕ್: ಸೇನೆ ಹೇಳಿಕೆಯಿಂದ ಕಾಂಗ್ರೆಸ್‌ಗೆ ಮುಜುಗರ

ಗಡಿಯಲ್ಲಿ ಉಗ್ರರ ನುಸುಳುವಿಕೆಯ ಆತಂಕ ಇರುವ ಕಾರಣ ಸ್ನೈಪರ್‌ಗಳನ್ನು ಗಡಿ ನಿಯಂತ್ರಣ ರೇಖೆ ಬಳಿ ನಿಯೋಜಿಸಲಾಗಿದೆ. ಅಲ್ಲದೆ ವಿಶೇಷ ಆಪರೇಷನ್‌ಗಾಗಿ ಅವರನ್ನು ನಿಯೋಜಿಸಲಾಗಿದೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

English summary
Indian army deploys America and Iran specially trained snipers near LOC. They have given new technology riffels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X