ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಯ್ನಾಡಿಗೆ ಅಭಿನಂದನ್: ಬೆಳಿಗ್ಗೆಯಿಂದ ನಡೆದದ್ದೇನು? ಪೂರ್ಣ ವಿವರ ಇಲ್ಲಿದೆ

|
Google Oneindia Kannada News

ಶ್ರೀನಗರ, ಮಾರ್ಚ್ 01 : ಪಾಕಿಸ್ತಾನದ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಇಂದು ಬಿಡುಗಡೆ ಮಾಡಿದ್ದು, ವಾಘಾ ಗಡಿಯ ಮೂಲಕ ಅವರು ಮತ್ತೆ ತಾಯ್ನೆಲ ಪ್ರವೇಶಿಸಿದ್ದಾರೆ. ರಾತ್ರಿ 9:25ಕ್ಕೆ ಸರಿಯಾಗಿ ವಾಘಾ ಗಡಿ ಮೂಲಕ ಅವರು ಭಾರತ ಪ್ರವೇಶಿಸುತ್ತಿದ್ದಂತೆಯೇ ನೆರೆದಿದ್‌ದ ಸಹಸ್ರಾರು ಜನ ಜಯಘೋಷ ಕೂಗಿದರು.

ಅಭಿನಂದನ್ ಅವರನ್ನು ಸ್ವಾಗತಿಸಲು ಅವರ ಪೋಷಕರು, ವಾಯು, ಭೂ, ನೌಕಾಸೇನೆಯ ಮುಖ್ಯಸ್ಥರು, ವಾಯುಸೇನೆಯ ಸಿಬ್ಬಂದಿ ಸೇರಿದಂದೆ ಸಾವಿರಾರು ಜನ ವಾಘಾ ಗಡಿಯಲ್ಲಿ ಜಮಾಯಿಸಿದ್ದರು.

IAF to recieve Abhinandan Varthaman at Wagah border today: LIVE UPDATES

ಸೇನಾ ಹೀರೋ ಅಭಿನಂದನ್ ಬೇಷರತ್ ಬಿಡುಗಡೆಗೆ 7 ಕಾರಣಸೇನಾ ಹೀರೋ ಅಭಿನಂದನ್ ಬೇಷರತ್ ಬಿಡುಗಡೆಗೆ 7 ಕಾರಣ

ಮಿಗ್ 21 ಬೈಸನ್ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರು ಫೆಬ್ರವರಿ 27ರಂದು ಪಾಕ್ ಸೇನೆಯ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ, ಇತರ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು.

Newest FirstOldest First
12:06 AM, 2 Mar

ಅಮೃತಸರದಲ್ಲಿ ವೈದ್ಯಕೀಯ ಚಿಕಿತ್ಸೆ ಬಳಿಕ ಅಭಿನಂದನ್ ಅವರನ್ನು ದೆಹಲಿಗೆ ಇಂದೇ ಕರೆದುಕೊಂಡು ಹೋಗಲಾಗುತ್ತದೆ. ಮತ್ತು ಅವರು ನಾಳೆ ಸೇನೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಆಗಿ ಮಾತುಕತೆ ನಡೆಸಲಿದ್ದಾರೆ. ಅವರಿಗೆ ನಾಳೆಯೂ ದೆಹಲಿಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಲಿವೆ.
10:11 PM, 1 Mar

ಪ್ರಾಥಮಿಕ ಆರೋಗ್ಯ ಪರೀಕ್ಷೆ, ಚಿಕಿತ್ಸೆ ಬಳಿಕ ಅಮೃತಸರದಿಂದ ದೆಹಲಿಗೆ ಅಭಿನಂದನ್ ಅವರು ವಿಶೇಷ ವಿಮಾನದಲ್ಲಿ ತೆರಳಲಿದ್ದಾರೆ. ಅಲ್ಲಿ ವಾಯುಸೇನೆಯ ಹಿರಿಯ ಅಧಿಕಾರಿಗಳನ್ನು ಅಭಿನಂದನ್ ಅವರು ಎದುರುಗೊಳ್ಳಲಿದ್ದಾರೆ.
9:36 PM, 1 Mar

ಅಮೃತಸರದಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಒಳಗಾಗಲಿರುವ ಅಭಿನಂದನ್. ಅಲ್ಲಿಂದ ಅವರನ್ನು ದೆಹಲಿಗೆ ಕರೆದುಕೊಂಡು ಹೋಗಲಾಗುತ್ತದೆ.
9:32 PM, 1 Mar

ಸೇನಾ ವಾಹನದಲ್ಲಿ ಅಭಿನಂದನ್ ಅವರನ್ನು ಅಮೃತಸರದ ಕಡೆಗೆ ಭಾರತೀಯ ಸೇನೆಯು ಕರೆದುಕೊಂಡು ಹೋಯಿತು. ಗಡಿಯಲ್ಲಿ ಜೈ ಹಿಂದ್ ಮತ್ತು ಭಾರತ ಮಾತಾ ಕೀ ಜೈ ಘೊಷಣೆಗಳು ಮೊಳಗಿದವು.
9:25 PM, 1 Mar

ಬಿಎಸ್‌ಎಫ್‌ ಅಧಿಕಾರಿಗಳು ಅಭಿನಂದನ್ ಅವರನ್ನು ಬರಮಾಡಿಕೊಂಡರು. ಬಿಎಸ್‌ಎಫ್‌ ಅಧಿಕಾರಿಗಳು ಅಭಿನಂದನ್ ಅವರನ್ನು ಅಪ್ಪಿಕೊಂಡು ಮರಳಿ ದೇಶಕ್ಕೆ ಸ್ವಾಗತಿಸಿದರು.
9:22 PM, 1 Mar

ಪಾಕಿಸ್ತಾನದ ಸೈನಿಕರ ಕಾವಲು ಹಾಗೂ ಸೈನ್ಯಾಧಿಕಾರಿ ಅವರೊಂದಿಗೆ ವಾಘಾ ಗಡಿಯಲ್ಲಿ ಅಭಿನಂದನ್ ಅವರು ಭಾರತ ಪ್ರವೇಶಿಸಲು ಕಾಯುತ್ತಿದ್ದಾರೆ.
9:18 PM, 1 Mar

ಹಸ್ತಾಂತರಕ್ಕೆ ಮುನ್ನಾ ಅಭಿನಂದನ್ ಅವರ ಕಡೆಯಿಂದ ಪಾಕಿಸ್ತಾನದ ಸೇನೆಯ ಕುರಿತು 90 ಸೆಕೆಂಡ್ ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವ ಪಾಕಿಸ್ತಾನ.
Advertisement
9:14 PM, 1 Mar

ಅಭಿನಂದನ್ ಅವರ ಹಸ್ತಾಂತರಕ್ಕೆ ಚಾಲನೆ ಗೌರವದೊಂದಿಗೆ ಪಾಕ್ ಬೀಳ್ಕೊಡುಗೆ.
8:56 PM, 1 Mar

ಅಭಿನಂದನ್ ಹಸ್ತಾಂತರ ವಿಳಂಬ.
6:04 PM, 1 Mar

ಪಾಕಿಸ್ತಾನದ ಬೀಟಿಂಗ್ ದಿ ರಿಟ್ರೀಟ್ ಮಕ್ತಾಯವಾಗಿದ್ದು, ಯಾವುದೇ ಕ್ಷಣದಲ್ಲಿ ಅಭಿನಂದನ್ ವರ್ಧಮಾನ್ ಅವರು ಭಾರತವನ್ನು ಪ್ರವೇಶಿಸಲಿದ್ದಾರೆ.
5:29 PM, 1 Mar

ಭಾರತದ ವಲಸೆ ಕಚೇರಿ ತಲುಪಿದ ಪೈಲಟ್ ಅಭಿನಂದನ್
5:22 PM, 1 Mar

ಬೀಟಿಂಗ್ ರೀಟ್ರೀಟ್ ಪಾಕಿಸ್ತಾನದಲ್ಲಿ ಆರಂಭವಾಗಿದ್ದು, ಬಳಿಕ ಭಾರತಕ್ಕೆ ಅಭಿನಂದನ್ ಹಸ್ತಾಂತರ
Advertisement
5:04 PM, 1 Mar

ಮೊದಲು ಬಿಎಸ್‌ಎಫ್‌ಗೆ ಅಭಿನಂದನ್‌ ಅವರನ್ನು ಹಸ್ತಾಂತರಿಸಲಿರುವ ಪಾಕ್
5:00 PM, 1 Mar

ವಾಘಾ ಗಡಿಯಲ್ಲಿ ಅಭಿನಂದನ್‌ಗೆ ಜೈಕಾರ, ಭಾರತ ಬಾವುಟ ಹಿಡಿದು ಕಾತುರದಿಂದ ಕಾಯುತ್ತಿರುವ ಭಾರತೀಯರು
4:53 PM, 1 Mar

ವಾಘಾ ಗಡಿಯಲ್ಲಿ ಅಭಿನಂದನ್ ವರ್ಧಮಾನ್‌ಗೆ ವೈದ್ಯಕೀಯ ಪರೀಕ್ಷೆ
4:38 PM, 1 Mar

ಪಾಕ್‌ನಿಂದ ಅಭಿನಂದನ್ ಹಸ್ತಾಂತರ ಪ್ರಕ್ರಿಯೆ ಮುಕ್ತಾಯ
4:34 PM, 1 Mar

ಮೊದಲಿಗೆ ಪಾಕ್ ರೇಂಜರ್ಸ್‌ಗಳಿಗೆ ಅಭಿನಂದನ್ ಹಸ್ತಾಂತರ, ಬಳಿಕ ನೇರವಾಗಿ ಅಮೃತಸರಕ್ಕೆ ತೆರಳಲಿರುವ ಅಭಿನಂದನ್
4:32 PM, 1 Mar

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸ್ವಾಗತಕ್ಕೆ ಐಎಎಫ್ ಹಾಗೂ ಸೇನಾಧಿಕಾರಿಗಳು ಸಜ್ಜು
4:30 PM, 1 Mar

ಕೆಲವೇ ಕ್ಷಣಗಳಲ್ಲಿ ಅಟಾರಿ ಗಡಿ ತಲುಪಲಿರುವ ಅಭಿನಂದನ್
4:19 PM, 1 Mar

ಸಾವಿರಾರು ಭಾರತೀಯರ ಹಾರೈಕೆಗೆ ಫಲ. ಕೊನೆಗೂ ತಾಯ್ನಾಡು ತಲುಪಿದ ವಿಂಗ್ ಕಮಾಂಡರ್ ಅಭಿನಂದನ್
4:18 PM, 1 Mar

ವಾಘಾ ಗಡಿಗೆ ಆಗಮಿಸಿದ ಹೆಮ್ಮೆಯ ಹೀರೋ ಅಭಿನಂದನ್ ವರ್ಧಮಾನ್
4:11 PM, 1 Mar

ಯಾವುದೇ ಕ್ಷಣದಲ್ಲಿ ಅಭಿನಂದನ್ ಆಗಮಿಸಲಿದ್ದು, ವಾಘಾ ಗಡಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ
3:53 PM, 1 Mar

ಅಭಿನಂದನ್ ಆಗಮನದ ಹಿನ್ನಲೆಯಲ್ಲಿ ವಾಘಾ ಗಡಿಯಲ್ಲಿ ಬಿಗಿಭದ್ರತೆ
3:41 PM, 1 Mar

ಮೂರೂ ಸೇನಾ ಮುಖಂಡರೊಂದಿಗೆ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಳ್ ಅವರೊಂದಿಗೆ ಭದ್ರತೆಯ ಕುರಿತು ಪರಿಶೀಲನೆ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
3:31 PM, 1 Mar

ರೆಡ್‌ ಕ್ರಾಸ್ ಒಂದು ತಟಸ್ಥ ಸಂಸ್ಥೆ. ಅದು ಇಡಿ ವಿಶ್ವದ ಶಾಂತಿ ಬಯಸುವ ಸಂಸ್ಥೆ. ಆದ್ದರಿಂದ ಇಂಡಿಯನ್ ರೆಡ್ ಕ್ರಾಸ್ ಮೂಲಕ ಅಭಿನಂದನ್ ಅವರನ್ನು ಹಸ್ತಾಂತರಿಸಲಾಗುತ್ತಿದೆ.
3:26 PM, 1 Mar

ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಒಮ್ಮೆ ವಾಘಾ ಗಡಿ ಬಳಿ ಮತ್ತು ಮುಂದೆ ದೆಹಲಿಯಲ್ಲೂ ಅಭಿನಂದನ್ ಅವರನ್ನು ಸಂಪೂರ್ಣವಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.
3:08 PM, 1 Mar

ಅಭಿನಂದನ್ ಭಾರತಕ್ಕೆ ವಾಪಸ್ಸಾಗುತ್ತಿದ್ದಂತೆಯೇ ಮಾಧ್ಯಮಗಳಿಗಾಗಲೀ, ಸಾರ್ವಜನಿಕರಿಗಾಗಲೀ ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ.
3:06 PM, 1 Mar

ವಾಘಾ ಗಡಿಗೆ ಆಗಮಿಸುತ್ತಿದ್ದಂತೆಯೇ ಅಭಿನಂದನ್ ಅವರನ್ನು ಅಭಿನಂದಿಸುವ ಸೇನಾಧಿಕಾರಿಗಳು ಅವರ ಬಳಿ ಮಾಹಿತಿ ಸಂಗ್ರಹಿಸಲಿದ್ದಾರೆ. ಪಾಕಿಸ್ತಾನದಲ್ಲಿ ಏನೆಲ್ಲ ಆಯಿತು ಎಂಬ ಬಗ್ಗೆ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇದನ್ನು ಸೇನಾ ಭಾಷೆಯಲ್ಲಿ ಡಿ ಬ್ರೀಫಿಂಗ್ ಎಂದು ಕರೆಯಲಾಗುತ್ತದೆ.
3:04 PM, 1 Mar

ವಾಘಾ ಗಡಿಗೆ ಆಗಮಿಸಿದ ನಂತರ ಅಮೃತಸರ ವಿಮಾನ ನಿಲ್ದಾಣಕ್ಕೆ ತೆರಳಲಿರುವ ಅಭಿನಂದನ್. ಸಂಜೆಯೊಳಗೆ ಅಲ್ಲಿಂದ ದೆಹಲಿಗೆ ತೆರಳಲಿರುವ ವಿಂಗ್ ಕಮಾಂಡರ್
3:02 PM, 1 Mar

ಇನ್ನು ಅರ್ಧಗಂಟೆಯೊಳಗೆ ಭಾರತಕ್ಕೆ ಆಗಮಿಸಲಿರುವ ವಿಂಗ್ ಕಮಾಂಡರ್ ಅಭಿನಂದನ್
READ MORE

English summary
Wing Commander Abhinandan Varthaman who has detained by Pakistan army on Feb 27 to be releasing today at Wagah border today: LIVE UPDATES in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X