ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣಿವೆ ರಾಜ್ಯದಲ್ಲಿ ಅಮಿತ್ ಶಾ, ಮೊದಲ ಭೇಟಿಯಲ್ಲೇ ಇತಿಹಾಸ

|
Google Oneindia Kannada News

ಶ್ರೀನಗರ, ಜೂನ್ 27: ಕಳೆದ ಮೂರು ದಶಕಗಳಲ್ಲಿ ಇದೆ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವರು ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲೂ ಬಂದ್ ಆಚರಿಸಿಲ್ಲ. ಈ ಮೂಲಕ ಗೃಹ ಸಚಿವ ಅಮಿತ್ ಶಾ ಅವರು ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ.

ಕಾಶ್ಮೀರಕ್ಕೆ ಗೃಹ ಸಚಿವರು ಭೇಟಿ ನೀಡಿದಾಗಲೆಲ್ಲ ಬಂದ್, ಪ್ರತಿಭಟನೆ, ಗಲಭೆ ಸಾಮಾನ್ಯ ಸಂಗತಿಯಾಗಿತ್ತು. ಪ್ರತ್ಯೇಕತಾವಾದಿ ಸಂಘಟನೆಗಳು ಬಂದ್ ಮೂಲಕ ಸ್ವಾಗತ ಕೋರುತ್ತಿದ್ದವು. ಆದರೆ, ಈ ಬಾರಿ ಎರಡು ದಿನದ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಅವರಿಗೆ ಯಾವುದೇ ಅಹಿತಕರ ಘಟನೆಗಳು ಎದುರಾಗಿಲ್ಲ.

ಹುತಾತ್ಮ ಪೊಲೀಸ್‌ನ ಪತ್ನಿಗೆ ಉದ್ಯೋಗ ಪತ್ರ ನೀಡಿದ ಅಮಿತ್ ಶಾಹುತಾತ್ಮ ಪೊಲೀಸ್‌ನ ಪತ್ನಿಗೆ ಉದ್ಯೋಗ ಪತ್ರ ನೀಡಿದ ಅಮಿತ್ ಶಾ

ಕಣಿವೆ ರಾಜ್ಯಕ್ಕೆ ನೀಡಿರುವ ಮೊದಲ ಭೇಟಿಯಲ್ಲೇ ಮೊದಲ ಭೇಟೆಯಲ್ಲೆ ಅಮಿತ್ ಶಾ ಅವರು ಕಾಶ್ಮೀರದ ಭದ್ರತೆ ಮತ್ತು ಅಭಿವೃದ್ಧಿಯ ವಿಚಾರವಾಗಿ ಹಲವಾರು ಸಭೆಗಳಲ್ಲಿ ಭಾಗವಹಿಸಿದ್ದಾರೆ.

Home Minister visits Jammu and Kashmir No Bandh in 30 years

ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲೀಕ್, ಬಿಜೆಪಿ ಮುಖಂಡರು, ಪಂಚಾಯತ್ ಸದಸ್ಯರಗಳನ್ನು ಅಮಿತ್ ಶಾ ಭೇಟಿ ಮಾಡುತ್ತಿದ್ದಾರೆ. ಅಮರನಾಥ ತೀರ್ಥಯಾತ್ರೆಯ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುವುದು, ಉಗ್ರರನ್ನು ಮಟ್ಟ ಹಾಕಲು ಬೇಕಾದ ಅಗತ್ಯ ಕ್ರಮದ ಬಗ್ಗೆ ಚರ್ಚಿಸಲಿದ್ದಾರೆ.

ರಾಜ್ಯಪಾಲ ಸತ್ಯಪಾಲ್ ಮಲಿಕ್ ತಮ್ಮ ರಾಜಕೀಯ ಸಲಹೆಗಾರ ಮತ್ತು ಹಿರಿಯ ಅಧಿಕಾರಿಗಳ ಜತೆಗೆ ವಿಮಾನ ನಿಲ್ದಾಣಕ್ಕೆ ಹೋಗಿ ಅಮಿತ್ ಶಾ ಅವರನ್ನು ಬರ ಮಾಡಿಕೊಳ್ಳುವ ಮೂಲಕ ಶಿಷ್ಟಾಚಾರವನ್ನು ಬದಿಗೊತ್ತಿದ್ದಾರೆ.

ಅಮಿತ್ ಶಾ ಭೇಟಿಗೂ ಕೆಲವೇ ಗಂಟೆ ಮೊದಲು ಕಾಶ್ಮೀರದಲ್ಲಿ ಎನ್ ಕೌಂಟರ್ ದಾಳಿ ಅಮಿತ್ ಶಾ ಭೇಟಿಗೂ ಕೆಲವೇ ಗಂಟೆ ಮೊದಲು ಕಾಶ್ಮೀರದಲ್ಲಿ ಎನ್ ಕೌಂಟರ್ ದಾಳಿ

ಹುರಿಯತ್ ಕಾನ್ಫರೆನ್ಸ್ ನ ಸೈಯದ್ ಅಲಿ ಶಾ ಗಿಲಾನಿ ಹಾಗೂ ಮಿರ್ವಾಜ್ ಉಮರ್ ಫರೂಕ್ ಅವರು ಈ ಬಾರಿ ಕಾಶ್ಮೀರ ಬಂದ್ ಮಾಡದಿರುವುದು ಅಚ್ಚರಿಯ ವಿಷಯ. ಕೇಂದ್ರ ಗೃಹ ಸಚಿವರ ಪ್ರವಾಸದ ಕುರಿತು ಕೂಡಾ ಹೇಳಿಕೆಗಳನ್ನು ನೀಡುತ್ತಿಲ್ಲ.

ಈ ಹಿಂದಿನ ಸರ್ಕಾರದಲ್ಲಿ ಗೃಹ ಸಚಿರಾಗಿದ್ದ ರಾಜನಾಥ್ ಸಿಂಗ್ ಭೇಟಿ ಸಂದರ್ಭದಲ್ಲಿ ಸೆಪ್ಟೆಂಬರ್ 10, 2017ರಂದು ಕಾಶ್ಮೀರದಲ್ಲಿ ಬಂದ್, ಮುಷ್ಕರ, ಪ್ರತಿಭಟನೆಗೆ ಜಂಟಿ ಪ್ರತ್ಯೇಕತಾವಾದಿಗಳ ಗುಂಪು ಕರೆ ನೀಡಿತ್ತು. ಪ್ರಧಾನಿ ಮೋದಿ ಭೇಟಿ ಸಂದರ್ಭದಲ್ಲೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿತ್ತು.

English summary
Home Minister Amit Shah visited Jammu and Kashmir No Bandh in 30 years neither Hurriyat conference other separatist groups called for a shutdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X