• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕಿಸ್ತಾನದಿಂದ ಭಾರೀ ಶೆಲ್ಲಿಂಗ್; ಕದನ ವಿರಾಮ ಉಲ್ಲಂಘನೆ

|

ಪಾಕಿಸ್ತಾನವು 2003ನೇ ಇಸವಿಯಲ್ಲಿ ಭಾರತದಲ್ಲಿ ಮಾಡಿಕೊಂಡಿದ್ದ ಕದನ ವಿರಾಮದ ಉಲ್ಲಂಘನೆ ಮಾಡಿದೆ. ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಮೂರು ಸಲ ಉಲ್ಲಂಘಿಸಿದೆ ಎಂದು ಭಾರತೀಯ ಸೇನಾ ವಕ್ತಾರರು ತಿಳಿಸಿದ್ದಾರೆ. ಬೆಳಗ್ಗೆ 10.30ರ ಸಮಯದಲ್ಲಿ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿ, ಅಪ್ರಚೋದಿತ ದಾಳಿ ನಡೆಸಿದೆ.

ಭಾರೀ ಪ್ರಮಾಣದ ಶೆಲ್ಲಿಂಗ್ ಆಗಿದೆ. ಗಡಿ ನಿಯಂತ್ರಣ ರೇಖೆ ಬಳಿ ನೌಶೇರಾ ಹಾಗೂ ಸುಂದರ್ ಬನಿ ವಲಯದಲ್ಲಿ ಸಣ್ಣ ಗಾತ್ರದ ಶಸ್ತ್ರಾಸ್ತ್ರ ಬಳಸಿ ಗುಂಡು ಹಾರಿಸಲಾಗಿದೆ. ಈ ದಾಳಿಗೆ ತಕ್ಕ ಪ್ರತ್ಯುತ್ತರವನ್ನು ಭಾರತೀಯ ಸೇನೆಯು ಕೂಡ ನೀಡಿದೆ. ಮಂಗಳವಾರ ರಾತ್ರಿಯಿಂದ ಬುಧವಾರ ನಸುಕಿನ ತನಕ ಗಡಿ ನಿಯಂತ್ರಣ ರೇಖೆಯ ಸುಂದರ್ ಬನಿ ವಲಯದಲ್ಲಿ ಪಾಕಿಸ್ತಾನ ಗುಂಡಿನ ದಾಳಿ ನಡೆಸಿದೆ.

ಭಾರತದ ಮೇಲೆ ಮತ್ತೊಂದು ದಾಳಿಗೆ ಸಜ್ಜಾಗಿದ್ದಾರೆ ಪಾಕ್‌ ಉಗ್ರರು!

ಬಾಲಕೋಟ್ ನಲ್ಲಿನ ಜೈಶ್-ಇ-ಮೊಹ್ಮದ್ ಉಗ್ರ ನೆಲೆ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿದ ನಂತರ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಹೆಚ್ಚಾಗಿದೆ. ಅಂತರರಾಷ್ಟ್ರೀಯ ಗಡಿಯಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಶನಿವಾರ ಭೇಟಿ ನೀಡಿದ್ದರು. ಮರುದಿನ ಸಾಂಬಾ ಹಾಗೂ ರತ್ನುಚಕ್ ಪ್ರದೇಶಗಳ ವಿವಿಧೆಡೆ ಭೇಟಿ ನೀಡಿದ್ದರು.

English summary
Pakistan violated the 2003 ceasefire agreement with India in Jammu and Kashmir’s Rajouri district thrice on Wednesday, a defence spokesperson said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X