ಜಮ್ಮು ಕಾಶ್ಮೀರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿರುವ ಬಿಜೆಪಿ
ಶ್ರೀನಗರ, ಡಿಸೆಂಬರ್ 22: ಜಮ್ಮು ಮತ್ತು ಕಾಶ್ಮೀರದಲ್ಲಿನ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಫಾರೂಕ್ ಅಬ್ದುಲ್ಲಾ ನೇತೃತ್ವದ ಗುಪ್ಕರ್ ಮೈತ್ರಿಕೂಟಕ್ಕಿಂತ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿದ ನಂತರ ನಡೆಯುತ್ತಿರುವ ಚುನಾವಣೆಯಲ್ಲಿ ಈಗ ಗುಪ್ಕರ್ ಬಿಜೆಪಿಗಿಂತಲೂ ಹೆಚ್ಚಿನ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಕಾಶ್ಮೀರ ಭಾಗದಲ್ಲಿ ಪ್ರಾದೇಶಿಕ ಪಕ್ಷಗಳು ಮುನ್ನಡೆ ಸಾಧಿಸಿದರೆ, ಜಮ್ಮು ಪ್ರದೇಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.

70 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 21ರಲ್ಲಿ ಕಾಂಗ್ರೆಸ್ ಮುಂದಿದೆ.ಈಗ 280 ಸ್ಥಾನಗಳಿಗೆ ಮತ ಎಣಿಕೆಯನ್ನು ಮಾಡಲಾಗುತ್ತಿದೆ.ಎಲೆಕ್ಟ್ರಾನಿಕ್ ಮತದಾನ ಯಂತ್ರಗಳು ಅಥವಾ ಇವಿಎಂಗಳಿಗೆ ಬದಲಾಗಿ ಮತಪತ್ರಗಳನ್ನು ಚುನಾವಣೆಯಲ್ಲಿ ಬಳಸಿದ್ದರಿಂದಾಗಿ ಎಣಿಕೆ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಲಿದೆ.
25 ದಿನಗಳ ಅವಧಿಯಲ್ಲಿ ಎಂಟು ಹಂತಗಳಲ್ಲಿ ನಡೆದ ಮತದಾನ ಡಿಸೆಂಬರ್ 19 ಕ್ಕೆ ಕೊನೆಗೊಂಡಿತು. ಜಮ್ಮು ಮತ್ತು ಕಾಶ್ಮೀರ ಎನ್‌ಸಿ: 56, ಸ್ವತಂತ್ರ-43, ಜಮ್ಮು ಮತ್ತು ಕಾಶ್ಮೀರ ಪಿಡಿಪಿ 26, ಜೆಕೆಎಪಿ-10, ಜೆಕೆಪಿಸಿ-6, ಜೆಕೆಪಿಎಂ 3 ಸ್ಥಾನಗಳಲ್ಲಿ ಮುಂದಿದೆ.
ನವೆಂಬರ್ 28ರಿಂದ ಡಿಸೆಂಬರ್ 19ರವರೆಗೆ ಚುನಾವಣೆ ನಡೆದಿದ್ದು, 450 ಮಹಿಳೆಯರು ಸೇರಿದಂತೆ 4,181 ಅಭ್ಯರ್ಥಿಗಳು 280 ಸೀಟುಗಳಿಗೆ ಸ್ಪರ್ಧಿಸಿದ್ದಾರೆ.












Click it and Unblock the Notifications