• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ವಿರುದ್ಧ ಪ್ರತಿಭಟಸಿದ ಕಾಶ್ಮೀರಿ ಫಸಲ್ ಗೃಹಬಂಧನ

|

ಶ್ರೀನಗರ, ಆಗಸ್ಟ್ 14: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ರೂಪವಾಗಿ ಐಎಎಸ್ ಹುದ್ದೆ ತೊರೆದು ರಾಜಕಾರಣಿಯಾಗಿದ್ದ ಷಾ ಫಸಲ್ ಸದ್ಯ ಗೃಹಬಂಧನಕ್ಕೊಳಗಾಗಿದ್ದಾರೆ.

ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದ ಷಾ ಫಸಲ್ ಅವರು ಕಾಶ್ಮೀರದ ಪ್ರತ್ಯೇಕತಾವಾದಿ ಪಕ್ಷ ಹುರಿಯತ್ ಕಾನ್ಫರೆನ್ಸ್ ಸೇರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ನಂತರ ಅಲ್ಲಗೆಳೆದಿದ್ದರು.

ಐಎಎಸ್ ಹುದ್ದೆ ತೊರೆದ ಷಾ ಫಸಲ್ ಚುನಾವಣಾ ಕಣಕ್ಕೆ ಎಂಟ್ರಿ

ಮೂಲಗಳ ಪ್ರಕಾರ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಷಾ ಫಸಲ್ ಬಂಧಿಸಲಾಗಿದ್ದು, ಸದ್ಯ ಅವರನ್ನು ಗೃಹ ಬಂಧನದಲ್ಲಿಡಲಾಗಿದೆ.

ದೇಶದಲ್ಲಿರುವ 20 ಕೋಟಿಗೂ ಅಧಿಕ ಮುಸ್ಲಿಮರು ತಲೆ ಎತ್ತಿ ಬಾಳುವಂಥ ಪರಿಸ್ಥಿತಿ ನಿರ್ಮಿಸಬೇಕಿದೆ. ಬಹುಸಂಖ್ಯಾತರ ದಬ್ಬಾಳಿಕೆಯಿಂದ ಮುಸ್ಲಿಮರು ಎರಡನೇ ದರ್ಜೆ ನಾಗರಿಕರಾಗಿದ್ದಾರೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯಾಕಾಂಡವನ್ನು ಖಂಡಿಸಿ ನಾನು ರಾಜೀನಾಮೆ ನೀಡಿದೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಕೇಂದ್ರದ ವಿರುದ್ಧ ಪ್ರತಿಭಟನಾರ್ಥವಾಗಿ ಐಎಎಸ್ ಹುದ್ದೆ ತ್ಯಜಿಸಿದ ಕಾಶ್ಮೀರಿ ಷಾ ಫಸಲ್

2010ನೇ ಸಾಲಿನ ಐಎಎಸ್ ಅಧಿಕಾರಿ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಮೊದಲ ಕಾಶ್ಮೀರಿಯಾಗಿದ್ದಾರೆ.

English summary
Civil servant turned politician Shah Faesal was arrested, while he was trying to leave the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X