ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರನೆಲೆ ಧ್ವಂಸ LIVE: ‌ಗಡಿಯಲ್ಲಿ ಮುಂದುವರಿದ ಗುಂಡಿನ ದಾಳಿ

|
Google Oneindia Kannada News

ಶ್ರೀನಗರ, ಫೆಬ್ರವರಿ 27: ಪುಲ್ವಾಮಾ ದಾಳಿ ಮತ್ತು ನಂತರ ಉಗ್ರ ನೆಲೆ ಧ್ವಂಸ ಈ ಎರಡು ಘಟನೆಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಏರ್ಪಾಡಾಗಿದೆ.

ಅದಕ್ಕೆ ಪೂರಕ ಎಂಬಂತೆ ಮಂಗಳವಾರ ಸಂಜೆ ಮತ್ತು ಬುಧವಾರ ಬೆಳಿಗ್ಗೆ ಪಾಕಿಸ್ತಾನ ಗಡಿನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ, ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿದೆ. ಐವರು ಭಾರತೀಯ ಸೈನಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

'ಈಗ ನಿಮ್ಮ ಸರದಿ, ನಮ್ಮ ಅಚ್ಚರಿ ಎದುರಿಸಲು ಸಿದ್ಧರಾಗಿ' : ಪಾಕಿಸ್ತಾನ'ಈಗ ನಿಮ್ಮ ಸರದಿ, ನಮ್ಮ ಅಚ್ಚರಿ ಎದುರಿಸಲು ಸಿದ್ಧರಾಗಿ' : ಪಾಕಿಸ್ತಾನ

ಇತ್ತ ಭಾರತ-ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ತಲೆದೂರಿದ್ದರೆ, ಅತ್ತ ಭಾರತೀಯವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಚೀನಾ ಪ್ರವಾಸದಲ್ಲಿದ್ದಾರೆ. ಪಾಕಿಸ್ತಾನದ ಕುಚುಕು ಸ್ನೇಹಿತ ಚೀನಾದ ಮುಂದೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ಮಾಡಿರುವ ವೈಮಾನಿಕ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.

Attack on terror camp LIVE: war like situation between India and pakistan

ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?

ಈ ಎಲ್ಲಾ ಬೆಳವಣಿಗೆಗಳ ಲೈವ್ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

Newest FirstOldest First
2:28 PM, 28 Feb

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತುಕತೆಗೆ ಇಮ್ರಾನ್ ಖಾನ್ ಸಿದ್ದ - ಶಾ ಮಹ್ಮೂದ್ ಖುರೇಷಿ, ಪಾಕ್ ವಿದೇಶಾಂಗ ಸಚಿವ ಹೇಳಿಕೆ
10:53 AM, 28 Feb

ಉಗ್ರನಿಗ್ರಹದ ಹಾದಿಯಲ್ಲಿ ಭಾರತದೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದ ಅಮೆರಿಕ
10:52 AM, 28 Feb

ಅಮೆರಿಕ ಸ್ಟೇಟ್ ಸೆಕ್ರೇಟರಿ ಮೈಕ್ ಪೊಂಪಿಯೋ ಜೊತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಳ್ ಮಾತುಕತೆ.
10:50 AM, 28 Feb

ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯನ್ನು, ಒಟ್ಟಾರೆ ಭಯೋತ್ಪಾದನೆ ಹತ್ತಿಕ್ಕಲು ಕಠಿಣ ಕ್ರಮ ಕೈಗೊಳ್ಳಿ: ಪಾಕಿಸ್ತಾನಕ್ಕೆಜಪಾನ್ ವಿದೇಶಾಂಗ ಸಚಿವ ಟೊರೋ ಕೊನೋ ಖಡಕ್ ವಾರ್ನಿಂಗ್
9:47 AM, 28 Feb

ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಸಂಪುಟ ಸಭೆ
9:34 AM, 28 Feb

ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸಂಚಾರ ಸ್ಥಗಿತಗೊಳಿಸಿದ ಪಾಕ್
8:56 AM, 28 Feb

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಬೆಳಗ್ಗೆ ಸುಮಾರು 6 ಗಂಟೆಯ ಸುಮಾರಿಗೆ ಗುಂಡಿನ ದಾಳಿ ನಡೆದಿದೆ.
Advertisement
8:32 AM, 28 Feb

ಮೂರು ದಿನದಲ್ಲಿ 20 ನೇ ಬಾರಿ ಕದನವಿರಾಮ ಉಲ್ಲಂಘಿಸಿದ ಪಾಕಿಸ್ತಾನ
7:12 AM, 28 Feb

ಜಮ್ಮುಕಾಶ್ಮೀರದ ಪೂಂಚ್ ಸೆಕ್ಟರ್ ನಲ್ಲಿ ಕದನವಿರಾಮ ಉಲ್ಲಂಘಿಸಿ, ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ.
7:08 AM, 28 Feb

ಪಾಕಿಸ್ತಾನದಲ್ಲಿ ಇಂದು ಸಹ ವಿಮಾನ ಹಾರಾಟ ರದ್ದುಮಾಡಲಾಗಿದೆ.
7:07 AM, 28 Feb

ಭಾರತ-ಪಾಕ್ ಗಡಿಯಲ್ಲಿ ಇಂದು ಸಹ ಗುಂಡಿನ ದಾಳಿ ಮುಂದುವರಿದಿದೆ.
4:47 PM, 27 Feb

ವಿಶ್ವದ ಇತಿಹಾಸದಲ್ಲಿ ನಡೆದ ಎಲ್ಲಾ ಯುದ್ಧಗಳೂ ತಪ್ಪು ಲೆಕ್ಕಾಚಾರದಿಂದ ನಡೆದವು. ಯುದ್ಧ ಶುರು ಮಾಡುವವರಿಗೆ ಅದು ಎಲ್ಲಿ ಕೊನೆಯಾಗುತ್ತದೆ ಎಂಬುದು ಗೊತ್ತಿರುವುದಿಲ್ಲ- ಇಮ್ರಾನ್ ಖಾನ್, ಪಾಕ್ ಪ್ರಧಾನಿ
Advertisement
4:39 PM, 27 Feb

ಯುದ್ಧ ಆರಂಭವಾದರೆ ನಂತರದ ಸ್ಥಿತಿ ನನ್ನ ಕೈಯಲ್ಲೂ ಇಲ್ಲ, ಪ್ರಧಾನಿ ನರೇಂದ್ರ ಮೋದಿ ಕೈಯಲ್ಲೂ ಇರುವುದಿಲ್ಲ. ಭಯೋತ್ಪಾದನೆಯ ಬಗ್ಗೆ ಯಾವುದೇ ರೀತಿಯ ಮಾತುಕತೆಗೂ ನಾವು ಸಿದ್ಧರಿದ್ದೇವೆ. ನಾವು ಕುಳಿತು ಮಾತನಾಡಬೇಕು- ಇಮ್ರಾನ್ ಖಾನ್, ಪಾಕಿಸ್ತಾನ ಪ್ರಧಾನಿ
3:58 PM, 27 Feb

ಭಾರತೀಯ ಪೈಲಟ್ ಬಿಡುಗಡೆಗೆ ಭಾರತವು ರಾಜತಾಂತ್ರಿಕ ಮಾರ್ಗವನ್ನು ಅನುಸರಿಸುತ್ತದೋ ಅಥವಾ ವಿಶ್ವಸಂಸ್ಥೆ ಮೂಲಕ ಯತ್ನಿಸುತ್ತದೋ ಎಂಬ ಪ್ರಶ್ನೆ ಉದ್ಭವಿಸಿದೆ. ಪೈಲಟ್ ತನ್ನ ಸುಪರ್ದಿಯಲ್ಲಿ ಇರುವ ಬಗ್ಗೆ ಹೇಳಿಕೊಂಡಿರುವ ಪಾಕಿಸ್ತಾನ. ಈ ಬಗ್ಗೆ ಅಧಿಕೃತವಾಗಿ ಭಾರತಕ್ಕೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ.
3:43 PM, 27 Feb

ಈ ವರೆಗೆ ಒಬ್ಬರು ಪೈಲಟ್ ನಾಪತ್ತೆ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರು ಭಾರತೀಯ ಪೈಲಟ್ ಗಳು ಸೆರೆ ಸಿಕ್ಕಿದ್ದಾರೆ ಎನ್ನುತ್ತಿರುವ ಪಾಕ್ ಅಧಿಕಾರಿಗಳು.
3:34 PM, 27 Feb

ಪಾಕಿಸ್ತಾನ ವಾಯುಸೇನೆಯ ಯುದ್ಧ ವಿಮಾನವನ್ನು ಭಾರತೀಯ ವಾಯುಸೇನೆ ಹೊಡೆದುರುಳಿಸಿದೆ. ಈ ಪ್ರಯತ್ನದಲ್ಲಿ ನಮ್ಮ ಮಿಗ್ 21 ಕಳೆದುಕೊಂಡಿದ್ದೇವೆ. ಪೈಲಟ್ ಈ ಕಾರ್ಯಾಚರಣೆಯಲ್ಲಿ ನಾಪತ್ತೆಯಾಗಿದ್ದಾರೆ. ತನ್ನ ಸುಪರ್ದಿಯಲ್ಲಿ ಪೈಲಟ್ ಇರುವುದಾಗಿ ಪಾಕ್ ಹೇಳಿಕೊಂಡಿದೆ. ನಾವು ವಾಸ್ತವ ನಿರ್ಧರಿಸುತ್ತಿದ್ದೇವೆ: ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್
2:48 PM, 27 Feb

3:15 ಕ್ಕೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಲಿರುವ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಜಯ್ ಗೋಖಲೆ
2:42 PM, 27 Feb

ದೇಶದ ಜನರ ವಿಶ್ವಾಸಕ್ಕಾಗಿ ಕೆಲವೇ ಕ್ಷಣದಲ್ಲಿ ಪಾಕಿಸ್ತಾನದ ಜನತೆಯನ್ನುದ್ದೇಶಿ ಮಾತನಾಡಲಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್
2:40 PM, 27 Feb

ಯಾವುದಕ್ಕೂ ಯುದ್ಧ ಪರಿಹಾರವಲ್ಲ, ಶಾಂತಿ ಕಾಯ್ದುಕೊಳ್ಳೋಣ- ಪಾಕಿಸ್ತಾನ ಸೇನೆ
2:35 PM, 27 Feb

ಕಳೆದ 24 ಗಂಟೆಗಳನ್ನು ಅವಲೋಕಿಸಿದರೆ ಇಂಥ ಪರಿಸ್ಥಿತಿಯಲ್ಲಿ ಒಂದು ವಾರ ಕಳೆಯುವುದೂ ಕಷ್ಟ. ಅಮೆರಿಕ ಸೇನೆ ಅಬ್ಬೊಟಾಬಾದ್ ನಲ್ಲಿದ್ದ ಒಸಾಮಾ ಬಿನ್ ಲಾಡೆನ್ ನನ್ನು ಹಿಡಿಯುವುದಾದರೆ, ಆ ಕೆಲಸವನ್ನು ಮ್ಮಿಂದ ಮಾಡುವುದಕ್ಕೆ ಯಾಕೆ ಸಾಧ್ಯವಾಗಬಾರದು?- ಅರುಣ್ ಜೇಟ್ಲಿ, ವಿತ್ತ ಸಚಿವ
1:37 PM, 27 Feb

ಸಭೆಯಲ್ಲಿ ಕೇಂದ್ರ ಗೃಹ ಸಚಿವರ ಕಾರ್ಯದರ್ಶಿ ರಾಜೀವ್ ಗೌಬಾ, ಗುಪ್ತಚರ ದಳದ ನಿರ್ದೇಶಕ ರಾಜೀವ್ ಜೈನ್ ಭಾಗವಹಿಸಿದ್ದರು.
1:34 PM, 27 Feb

ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಳ್ ಅವರೂ ಭಾಗಿಯಾಗಿದ್ದು, ದೇಶದ ಭದ್ರತೆಯ ಕುರಿತು ಮಾಹಿತಿ ನೀಡಿದ್ದಾರೆ. ಗಡಿ ಭದ್ರತಾ ಪಡೆ ಪೂರ್ಣ ಪ್ರಮಾಣದಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ಕೆಲವು ದಿನಗಳ ವರೆಗೆ ಗಡಿಯಲ್ಲಿ ಹೆಚ್ಚಿನ ಸೇನೆ ನಿಯೋಜಿಸುವ ಮಾತುಕತೆ ನಡೆದಿದೆ.
1:22 PM, 27 Feb

ದೆಹಲಿಯಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಯುವ ಉತ್ಸವನ್ನು ಅರ್ಧದಲ್ಲೇ ಬಿಟ್ಟು ಹೋದ ಪ್ರಧಾನಿ ಮೋದಿ. ಅವಸರ ಅವಸರವಾಗಿ ಹೊರಟ ಮೋದಿ
1:18 PM, 27 Feb

ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಭದ್ರತೆ ಕುರಿತು ಉನ್ನತ ಮಟ್ಟದ ಸಭೆ
1:14 PM, 27 Feb

ಯಲಹಂಕ ವಾಯುನೆಲೆಯಿಂದ ಗ್ವಾಲಿಯರ್‌ಗೆ 53 ಏರ್‌ಜೆಟ್‌ಗಳ ರವಾನೆ
12:51 PM, 27 Feb

ಭಾರತದ ಎರಡು ಯುದ್ಧ ವಿಮಾನಗಳನ್ನು ಪಾಕಿಸ್ತಾನ ಇಂದು ಬೆಳಿಗ್ಗೆ ಹೊಡೆದುರುಳಿಸಿದೆ: ಪಾಕ್ ಸೇನೆಯ ವಕ್ತಾರ ಮೆ.ಜ.ಆಸಿಫ್ ಘಾಫೂರ್ ಹೇಳಿಕೆ
12:50 PM, 27 Feb

ಲಾಹೋರ್, ಮುಲ್ತಾನ್, ಫೈಸಲಾಬಾದ್, ಸಿಯಾಲ್ ಕೋಟ್ ಮತ್ತು ಇಸ್ಲಾಮಾಬಾದ್ ಗಳಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸಿದ ಪಾಕಿಸ್ತಾನ
12:16 PM, 27 Feb

ಬುದ್ಗಾಮ್ ನಲ್ಲಿ ಪತನವಾಗಿದ್ದು ಮಿಗ್-17 ವಿಮಾನ. ಇದು ಸರಕು ಸಾಗಣೆ ವಿಮಾನ. ಮೊದಲಿಗೆ ಮಾಧ್ಯಮಗಳು ಮಿಗ್ 21 ಎಂದು ತಪ್ಪು ಮಾಹಿತಿ ನೀಡಿದ್ದವು.
12:07 PM, 27 Feb

ಪಾಕಿಸ್ತಾನದ F-16ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಭಾರತೀಯ ಸೇನೆ. ಪ್ಯಾರಾಚ್ಯೂಟ್ ಬಳಸಿ ಪರಾರಿಯಾದ ಪೈಲೆಟ್
12:03 PM, 27 Feb

ಪಾಕಿಸ್ತಾನದ ಯುದ್ಧವಿಮಾನವನ್ನು ಹೊಡೆದುರಳಿಸಿದ ಭಾರತೀಯ ಸೇನೆ
READ MORE

English summary
After Indian Air Force's Air strike on Jaish e Mohammed terror group in Pakistan, the neighbouring country violates ceasefire. War like situation between both countries. Here are LIVE updates in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X