ಹೆಂಡತಿ ಒಬ್ಬಳು ಮನೆಯೊಳಗಿದ್ದರೆ.. ದಿನೇಶ್ ಕಾರ್ತಿಕ್ ರೀತಿ ಚಹಾಲ್ ಬಾಳು.. Yuzvendra Chahal
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ, ನನಗದೆ ಕೋಟಿ ರುಪಾಯಿ! ಹೆಂಡತಿಯೊಬ್ಬಳು ಹತ್ತಿರ ಇದ್ದರೆ ನಾನೂ ಒಬ್ಬ ಸಿಪಾಯಿ... ನಾನೂ ಒಬ್ಬ ಸಿಪಾಯಿ... ಹಿಂಗೆ ನಿಮ್ಮ & ನಮ್ಮ ಅಪ್ಪ ಮತ್ತು ತಾತಂದಿರುವ ಈ ಹಾಡು ಹಾಡಿ ಕುಣಿದಾಡಿದ್ದರು. ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು ಬರೆದು, ಮೈಸೂರು ಅನಂತಸ್ವಾಮಿ ಅವರು ಸಂಗೀತ ನೀಡಿ ಹಾಡಿದ್ದ ಈ ಹಾಡು ಸಖತ್ ಫೇಮಸ್ ಆಗಿತ್ತು. ಆದರೆ, ಇದೀಗ ಹೆಂಡತಿ ಒಬ್ಬಳು ಮನೆಯೊಳಗೆ ಒಂಟಿಯಾಗಿದ್ದರೆ ಗಂಡಿದಿರೆಲ್ಲಾ ಭಯ ಪಡುವ ವಾತಾವರಣ ನಿರ್ಮಾಣ ಆಗಿದೆ ಅಂತಿದ್ದಾರೆ ನೆಟ್ಟಿಗರು!
ಹೌದು, ಯುಜ್ವೇಂದ್ರ ಚಹಾಲ್ ರೀತಿಯ ಸ್ಟಾರ್ ಕ್ರಿಕೆಟಿಗನ ಬಾಳಲ್ಲಿ ಅಲ್ಲೋಲ & ಕಲ್ಲೋಲ ಇದೀಗ ಶುರುವಾಗಿದೆ. ಆರ್‌ಸಿಬಿ ಮಾಜಿ ಆಟಗಾರ ಯುಜ್ವೇಂದ್ರ ಚಹಾಲ್ ಬಾಳು ಗೋಳಿನ ಸಂತೆಗೆ ಸೇರಿದೆ. ಒಂದು ಕಡೆ ಯುಜ್ವೇಂದ್ರ ಚಹಾಲ್ ಅವರ ಹೆಂಡತಿ ಡಿವೋರ್ಸ್ ಕೊಟ್ಟು ದೂರ ಆಗಲಿದ್ದಾರೆ ಎನ್ನಲಾಗುತ್ತಿದ್ದರೆ, ಮತ್ತೊಂದ್ಕಡೆ ಚಹಾಲ್ ಜೀವನದಲ್ಲಿ ಕೂಡ ದಿನೇಶ್ ಕಾರ್ತಿಕ್ ರೀತಿ ಘಟನೆ ನಡೆದು ಹೋಯ್ತಾ? ದಿನೇಶ್ ಕಾರ್ತಿಕ್ ಹೆಂಡತಿ ಕೈಕೊಟ್ಟು ಹೋದ ರೀತಿಯಲ್ಲೇ...

ಹೆಂಡತಿ ಕೈಕೊಟ್ಟಿದ್ದಕ್ಕೆ ಕುಡಿತದ ಚಟ?
ಆರ್‌ಸಿಬಿ ಬೆಂಗಳೂರು ತಂಡಕ್ಕೆ ಆಡುತ್ತಾ, ಇಡೀ ದೇಶದ ಗಮನ ಸೆಳೆದ ಯುಜ್ವೇಂದ್ರ ಚಹಾಲ್ ಜೀವನ ಇದೀಗ ಹಳಿ ತಪ್ಪಿದ ರೈಲಿನ ರೀತಿ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗೆ, ಯುಜ್ವೇಂದ್ರ ಚಹಾಲ್ ಜೀವನ ಹಳಿ ತಪ್ಪಲು ಅವರ ಹೆಂಡತಿ ಕಾರಣ, ಅನ್ನೋ ಆರೋಪ ಮಾಡಲಾಗುತ್ತಿದೆ ಸೋಷಿಯಲ್ ಮೀಡಿಯಾದಲ್ಲಿ.
ಯುಜ್ವೇಂದ್ರ ಚಹಾಲ್ ಅವರ ಹೆಂಡತಿ ಇದೀಗ ಡಿವೋರ್ಸ್ ಬಯಸಿದ್ದು, ಚಹಾಲ್ ಅವರ ಮಾನಸಿಕ ಆಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸಿಕ್ಕಾಪಟ್ಟೆ ಕುಡಿತವನ್ನ ಕೂಡ ಕಲಿತಿರುವ ಯುಜ್ವೇಂದ್ರ ಚಹಾಲ್ ಅವರು, ಮನಸ್ಸಿಗೆ ಬಂದಂತೆ ಕುಡಿದು ನಿಲ್ಲೋಕೆ ಆಗದೆ ಪರದಾಡುತ್ತಾ ಹೋಗಿ ಕಾರ್ ಸೀಟ್ ಮೇಲೆ ಕೂತಿರುವ ವಿಡಿಯೋ ವೈರಲ್ ಆಗ್ತಿದೆ.
ದಿನೇಶ್ ಕಾರ್ತಿಕ್ ಹೆಂಡತಿಯ ಮೋಸ...
ಅಲ್ಲದೆ ಇದೇ ವೇಳೆ ದಿನೇಶ್ ಕಾರ್ತಿಕ್ ಅವರ ಜೀವನದ ರೀತಿಯಲ್ಲೇ, ಯುಜ್ವೇಂದ್ರ ಚಹಾಲ್ ಅವರ ಹೆಂಡತಿ ಕೂಡ ಕೈಕೊಟ್ಟು ಹೋಗಿದ್ದಾರಾ? ಅನ್ನೋ ಚರ್ಚೆಯನ್ನೂ ಸೋಷಿಯಲ್ ಮೀಡಿಯಾದಲ್ಲಿ ಮಾಡಲಾಗುತ್ತಿದೆ. ಹೀಗೆ ಚಹಾಲ್ ಅವರ ವಿಚಾರ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಫುಲ್ ವೈರಲ್ ಅಗುತ್ತಿದೆ. ಹಾಗಾದ್ರೆ ದಿನೇಶ್ ಕಾರ್ತಿಕ್ ಹೆಂಡತಿ ಮಾಡಿದ್ದ ಮೋಸ ಎಂತಹದ್ದು? ಮುಂದೆ ಓದಿ.
ಅಂದಹಾಗೆ 2007 ರಲ್ಲಿ ದಿನೇಶ್ ಕಾರ್ತಿಕ್ ಅವರು ತಮ್ಮ ಬಾಲ್ಯದ ಗೆಳತಿ ಜೊತೆಯಲ್ಲಿ ಮದುವೆ ಆಗಿದ್ದರು. ಆಗ ತಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿದ್ರು ದಿನೇಶ್ ಕಾರ್ತಿಕ್. ಹೀಗೆ ಡಿಕೆ ಕ್ರಿಕೆಟ್ ಲೋಕಕ್ಕೆ ಎಂಟ್ರಿ ಕೊಟ್ಟ ನಂತರ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದರು. ಹೀಗಿದ್ದಾಗ ದಿನೇಶ್ ಕಾರ್ತಿಕ್ ಅವರ ಹೆಂಡತಿ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದ ಮುರಳಿ ವಿಜಯ್, ಆಕೆಯ ಜೊತೆಗೆ ಹೋದರು ಎಂಬ ಆರೋಪ ಕೇಳಿಬಂತು. ಆ ನಂತರ ದಿನೇಶ್ ಕಾರ್ತಿಕ್ ಕ್ರಿಕೆಟ್ ಜೀವನ ಕೂಡ ಕುಗ್ಗಿ ಹೋಗಿತ್ತು ಈಗ ಯುಜ್ವೇಂದ್ರ ಚಹಾಲ್ ಜೀವನವನ್ನ ಕೂಡ ಅದೇ ರೀತಿ ಹೋಲಿಕೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಲಾಗುತ್ತಿದೆ.












Click it and Unblock the Notifications