RCB vs LSG: ತವರಿನಲ್ಲಿ ಆರ್‌ಸಿಬಿ ಬ್ಯಾಟರ್‌ಗಳ ಮೇಲೆ 'ಮಾಯೆ' ತೋರದ ಯುವ ವೇಗಿ; ಬೆಂಗಳೂರು ಚಿಂತೆ ಹೆಚ್ಚಿಸಿದ ವಿದೇಶಿ ಪ್ಲೇಯರ್ಸ
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ 17ನೇ ಆವೃತ್ತಿ ಐಪಿಎಲ್‌ನ 15ನೇ ಪಂದ್ಯದಲ್ಲಿ ಗೆಲುವು ದಾಖಲಿಸುವ ಆರ್‌ಸಿಬಿ ಆಸೆ ಕಮರಿದೆ. ತವರಿನಲ್ಲಿ ಆರ್‌ಸಿಬಿ ಹೀನಾಯ ಪ್ರದರ್ಶನವನ್ನು ಮುಂದುವರೆಸಿದೆ. ದುಬಾರಿ ಬೆಲೆಗೆ ಖರೀದಿಸಿದ ಸ್ಟಾರ್ ಆಟಗಾರರು ತಂಡದ ಚಿಂತೆಯನ್ನು ಹೆಚ್ಚಿಸಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ ಏನೆಲ್ಲಾ ಆಯಿತು ನೋಡೋಣ..
ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ 28 ರನ್ ಸೋಲು ಕಂಡಿದೆ. ಈ ಸೋಲು ನಿಜಕ್ಕೂ ಆರ್‌ಸಿಬಿ ತಂಡದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಸ್ಟಾರ್ ಆಟಗಾರರು ತಂಡದಲ್ಲಿದ್ದರೂ ಸಹ ಇನ್ನು ಒನ್ ಮ್ಯಾನ್ ಶೋ ನಡೆಯುತ್ತಲೇ ಇದೆ. ಪ್ರದರ್ಶನ ನೀಡದೆ ಆಟಗಾರರು ತಂಡಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ.

-ಟಾಸ್ ಗೆದ್ದು ಬೌಲಿಂಗ್ ನಿರ್ಧಾರ
ಟಾಸ್ ಗೆದ್ದು ಬೌಲಿಂಗ್ ಮಾಡುವ ಆರ್‌ಸಿಬಿ ನಾಯಕ ಫಾಫ್ ಡುಪ್ಲೇಸಿಸ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಬೌಲರ್‌ಗಳು ಎಡವಿದ್ದಾರೆ. ಮೊದಲ ಪವರ್ ಪ್ಲೇನಲ್ಲಿ 64 ರನ್ ನೀಡಿ ಕೇವಲ 1 ವಿಕೆಟ್ ಪಡೆಯಲು ಅಷ್ಟೇ ಸ್ಟಾರ್ ಬೌಲರ್‌ಗಳು ಸಫಲರಾದರು. ಇನ್ನು ಮಿಡ್ಲ್ ಓವರ್‌ಗಳಲ್ಲಿ 87 ರನ್ ನೀಡಿ ಎರಡು ವಿಕೆಟ್ ಪಡೆದಿದ್ದೇ ದೊಡ್ಡ ಸಾಧನೆ ಆಯಿತು. ಡೆತ್ ಓವರ್‌ನ 19 ಹಾಗೂ 20 ಓವರ್ ದುಬಾರಿ ಆಗಿದ್ದೇ ಪಂದ್ಯದ ಸೋಲಿಗೆ ಪ್ರಮುಖ ಕಾರಣ.
-ಲಯಕ್ಕೆ ಪರದಾಡಿದ ಬೌಲರ್ಸ್
ಆರ್‌ಸಿಬಿ ತಂಡದ ವೇಗದ ಬೌಲರ್‌ಗಳಾದ ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್, ಕ್ಯಾಮರೂನ್ ಗ್ರೀನ್ ಲಯ ಬದ್ಧ ದಾಳಿಯನ್ನು ಸಂಘಟಿಸುವಲ್ಲಿ ಪರದಾಟ ನಡೆಸಿದರು. ದುಬಾರಿ ಬೆಲೆಗೆ ತಂಡಕ್ಕೆ ಸೇರಿಕೊಂಡ ಕ್ಯಾಮರೂನ್ ಗ್ರೀನ್ ಕೇವಲ 2 ಓವರ್ ಬೌಲ್ ಮಾಡಿ 12.50ರ ಸರಾಸರಿಯಲ್ಲಿ 25 ರನ್ ನೀಡಿ ಕೈ ಸುಟ್ಟುಕೊಂಡರು. ರೀಸ್ ಟೋಪ್ಲಿ9.75ರ ಸರಾಸರಿಯಲ್ಲಿ ರನ್ ನೀಡಿದರೆ, ಸಿರಾಜ್ 11.75ರ ಸರಾಸರಿಯಲ್ಲಿ ರನ್ ನೀಡಿದರು. ಕರ್ನಾಟಕದ ಸ್ಟಾರ್ ಬೌಲರ್ ವಿಜಯಕುಮಾರ್ ವೈಶಾಖ ಕಳೆದ ಪಂದ್ಯಗಳಲ್ಲಿ ತಮ್ಮ ಸ್ಲೋವರ್ ಒನ್ ಎಸೆತಗಳಿಂದ ಕಾಟ ನೀಡಿದ್ದರು. ಅವರನ್ನು ಏಕೆ ಹೊರಗಿಟ್ಟರು ಎಂಬು ತಿಳಿಯದ ಪ್ರಶ್ನೆ ಆಗಿದೆ.

-ಕ್ಯಾಚ್ ಬಿಟ್ಟು ಕೈ ಸುಟ್ಟುಕೊಂಡ ಆರ್‌ಸಿಬಿ
ಆರ್‌ಸಿಬಿಯ ಫೀಲ್ಡಿಂಗ್ ಕಳಪೆಯಾಗಿತ್ತು. 16.3ನೇ ಓವರ್‌ನಲ್ಲಿ ನಿಕೋಲಸ್ ಪೂರನ್ ಅವರ ಕ್ಯಾಚ್‌ನ್ನು ವಿಕೆಟ್ ಕೀಪರ್ ಅನುಜ್ ರಾವತ್ ಕೈ ಚೆಲ್ಲಿದರು. ಇವರು ಕೊನೆಯ ವರೆಗೂ ಬ್ಯಾಟಿಂಗ್ ಮಾಡಿ ಅಬ್ಬರಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ನೆರವಾದರು. ಇನ್ನಿಂಗ್ಸ್ ಆರನೇ ಓವರ್‌ನಲ್ಲೂ ಒಂದು ಕ್ಯಾಚ್ ಕೈಚೆಲ್ಲಲಾಗಿತ್ತು. ಆದರೆ ಕ್ಯಾಚ್ ಬಿಟ್ಟ ನಂತರದ ಎಸೆತದಲ್ಲಿ ರಾಹುಲ್ ಔಟ್ ಆದರು. ಹೀಗಾಗಿ ಈ ಕ್ಯಾಚ್ ಬಿಟ್ಟಿದ್ದು ಹೆಚ್ಚಿನ ಪರಿಣಾಮ ಬೀರಲಿಲ್ಲ.
-ಪಟಪಟನೆ ಬಿದ್ದ ವಿಕೆಟ್
ಮೊದಲ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೇಸಿಸ್ 40 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಆದರೆ ಉಳಿದ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಲಿಲ್ಲ. ಮೊದಲ ವಿಕೆಟ್ ಪತನವಾಗುತ್ತಿದ್ದಂತೆ ಪಟಪಟನೆ ವಿಕೆಟ್‌ಗಳು ಬೀಳುತ್ತಲೆ ಸಾಗಿದವು. ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡುವಲ್ಲಿ ಸ್ಟಾರ್ ಬ್ಯಾಟರ್ ವಿಫಲರಾದರು. ಅಲ್ಲದೆ ಗಂಟೆಗೆ 155ಕ್ಕೂ ಹೆಚ್ಚು ವೇಗವಾಗಿ ಬರುತ್ತಿದ್ದ ಮಯಾಂಕ್ ಯಾದವ್ ಎಸೆತವನ್ನು ಎದುರಿಸಲು ಅಂತಾರಾಷ್ಟ್ರೀಯ ಬ್ಯಾಟರ್‌ಗಳು ತಿಣುಕಾಡಿದರು.
-ಅವಕಾಶ ಬಳಸಿಕೊಳ್ಳದ ಯಂಗ್ ಸ್ಟರ್ಸ್
ಸತತ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವ ರಜತ್ ಪಟಿದಾರ್‌ಗೆ ಲಖ್ನೋ ವಿರುದ್ಧದ ಪಂದ್ಯದಲ್ಲೂ ಅವಕಾಶ ನೀಡಲಾಯಿತು. ಆದರೆ ಇವರ ಇನ್ನಿಂಗ್ಸ್ 29 ರನ್‌ಗಳಿಗೆ ಸೀಮಿತವಾಯಿತು. ಮೊದಲ ಪಂದ್ಯದಲ್ಲಿ ತಂಡಕ್ಕೆ ನೆರವಾಗಿದ್ದ ಅನುಜ್ ರಾವತ್ ಬ್ಯಾಟ್ ಮೌನಕ್ಕೆ ಶರಣಾದಂತೆ ಕಾಣುತ್ತಿದೆ. ಮಯಾಂಕ್ ದಗಾರ್ ಬರುತ್ತಿದಂತೆ ಪ್ಯಾಡ್ ಬಿಚ್ಚಬೇಕಾಯಿತು.

- ಮಿಡ್ಲ್ ಆರ್ಡರ್‌ನ ಸ್ಟಾರ್ ಆಟಗಾರರು ಸಿಂಗಲ್ ಡಿಜಿಟ್‌ನಲ್ಲಿ ಔಟ್
ಮಿಡ್ಲ್ ಆರ್ಡರ್‌ನಲ್ಲಿ ರನ್ ಮಹಲ್ ಕಟ್ಟಬೇಕಿದ್ದ ಫಾರೇನ್ ಪ್ಲೇಯರ್ಸ್ ನಿರಾಸೆಯ ಕಡಲಿನಲ್ಲಿ ಪ್ರಯಾಣ ಮಾಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಅನುಭವ ಹೊಂದಿರುವ ಗ್ಲೇನ್ ಮ್ಯಾಕ್ಸ್‌ವೆಲ್ ಹಾಗೂ ಕ್ಯಾಮರೂನ್ ಗ್ರೀನ್ ಜವಾಬ್ದಾರಿಯನ್ನು ಮರೆತು ಬಿಟ್ಟರು. ಈ ಇಬ್ಬರು ವೇಗಿಗಳು ಆಟ ಸಿಂಗಲ್ ಡಿಜಿಟ್‌ನಲ್ಲೇ ಕೊನೆಯಾಯಿತು. ಅಲ್ಲದೆ ಯುವ ವೇಗಿಯ ದಾಳಿಯನ್ನು ಎದುರಿಸದೇ ಈ ಸ್ಟಾರ್‌ಗಳು ಪೆವಿಲಿಯನ್ ಸೇರಿದರು.
- ವಿಲ್ ಜಾಕ್ಸ್, ಲಾಕಿ ಆಡಿಸುವುದು ಯಾವಾಗ?
ಬ್ಯಾಟಿಂಗ್‌ನಲ್ಲಿ ಆರ್‌ಸಿಬಿ ಸತತ ವೈಫಲ್ಯ ಅನುಭವಿಸುತ್ತಾ ಇದ್ದರೂ ಸಹ ಇನ್ನು ವಿಲ್ ಜಾಕ್ಸ್ ಅವರನ್ನು ಏಕೆ ಕಣಕ್ಕೆ ಇಳಿಸುತ್ತಿಲ್ಲ ಎಂಬ ಪ್ರಶ್ನೆಗಳು ಕಾಡುತ್ತಿವೆ. ಇವರು ಟಾಪ್ ಆರ್ಡರ್‌ನಲ್ಲಿ ಅಬ್ಬರದ ಆಟಕ್ಕೆ ಹೆಸರುವಾಸಿ. ಇನ್ನು ಡೆತ್ ಓವರ್‌ಗಳಲ್ಲಿ ತನ್ನ ವಿಭಿನ್ನ ವೇರಿಯೇಷನ್‌ಗಳ ಮೂಲಕವೇ ಎದುರಾಳಿಗೆ ಕಾಡುವ ಲಾಕಿ ಫಾರ್ಗ್ಯುಸನ್ ಅವರಿಗೆ ಅವಕಾಶ ನೀಡಬೇಕಿತ್ತು. ಇವರಿಬ್ಬರಿಗೆ ಇನ್ನು ಅವಕಾಶ ನೀಡುವುದು ಯಾವಾಗ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಆರ್‌ಸಿಬಿ ಇನ್ನಾದ್ರೂ ವಿದೇಶಿ ಆಟಗಾರರ ಮೇಲಿನ ಮೋಹವನ್ನು ಬಿಟ್ಟು ದೇಶಿಯ ಆಟಗಾರರಿಗೆ ಮಣೆ ಹಾಕಬೇಕಿದೆ. ತಂಡದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪೋಷಿಸಬೇಕಿದೆ. ಇಲ್ಲವಾದಲ್ಲಿ ಕಪ್ ಗೆಲುವಿನ ಕನಸು ದೂರ ಸರಿಯುತ್ತದೆ.












Click it and Unblock the Notifications