WTC Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಂಡ ಪ್ರಕಟ: ಸೂರ್ಯಕುಮಾರ್ ಯಾದವ್‌ಗೆ ಶಾಕ್!
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಮಂಗಳವಾರ ಬಿಸಿಸಿಐ ಆಯ್ಕೆ ಸಮಿತಿ 15 ಸದಸ್ಯರ ಬಳಗವನ್ನು ಹೆಸರಿಸಿದೆ. ಸೂರ್ಯಕುಮಾರ್ ಯಾದವ್‌ರನ್ನು ತಂಡದಿಂದ ಕೈಬಿಟ್ಟಿದ್ದು, ಶಾರ್ದೂಲ್ ಠಾಕೂರ್ ಮತ್ತು ಅಜಿಂಕ್ಯ ರಹಾನೆ ಟೆಸ್ಟ್ ತಂಡಕ್ಕೆ ವಾಪಸಾಗಿದ್ದಾರೆ.
ಜೂನ್ 7ರಿಂದ 11ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರತಿಷ್ಟಿತ ಕಪ್‌ಗಾಗಿ, ಇಂಗ್ಲೆಂಡ್‌ನ ಓವಲ್‌ನಲ್ಲಿ ಸೆಣೆಸಲಿವೆ. ಆಸ್ಟ್ರೇಲಿಯಾ ಈಗಾಗಲೇ ಬಲಿಷ್ಠ ತಂಡವನ್ನು ಹೆಸರಿಸಿದೆ.

ನಂಬರ್ 1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್‌ರನ್ನು ಟೆಸ್ಸ್ ತಂಡದಿಂದ ಕೈಬಿಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆದುಕೊಂಡಿದ್ದರು ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಅಲ್ಲದೆ ಏಕದಿನ ಸರಣಿ ಮತ್ತು ಐಪಿಎಲ್‌ನಲ್ಲಿ ಕೂಡ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಅವರನ್ನು ಅವಕಾಶ ಕಳೆದುಕೊಂಡಿದ್ದಾರೆ.
WTC ಫೈನಲ್‌ಗೆ ಭಾರತ ತಂಡ ಪ್ರಕಟ#wtcfinal #teamindiasquad #worldtestchampionshipfinal #australia #teamindia #cricketlovers pic.twitter.com/ZOTr8Wt5tV
— myKhel Kannada (@MykhelKannada) April 25, 2023
ಐಪಿಎಲ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಅಜಿಂಕ್ಯ ರಹಾನೆ ಮತ್ತೆ ಭಾರತ ತಂಡಕ್ಕೆ ವಾಪಸಾಗಿದ್ದಾರೆ. 2023ರ ಐಪಿಎಲ್‌ನಲ್ಲಿ 5 ಪಂದ್ಯಗಳನ್ನು ಆಡಿರುವ ರಹಾನೆ, 52.25 ಸರಾಸರಿಯಲ್ಲಿ ಮತ್ತು 199.04 ಸ್ಟ್ರೈಕ್‌ರೇಟ್‌ನಲ್ಲಿ 209 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕ ಕೂಡ ಸೇರಿದೆ. ರಹಾನೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಇಂಗ್ಲೆಂಡ್‌ನಲ್ಲಿ ಆಡಿದ ಅನುಭವ ಕೂಡ ಇರುವುದರಿಂದ ಅವರನ್ನು ಆಯ್ಕೆ ಮಾಡಲಾಗಿದೆ.
ಅವಕಾಶ ಪಡೆದ ಶಾರ್ದೂಲ್ ಠಾಕೂರ್
ಶ್ರೇಯಸ್ ಅಯ್ಯರ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಕೂಡ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅಲಭ್ಯರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲವನ್ನು ಹೆಚ್ಚಿಸಲು ಅಜಿಂಕ್ಯ ರಹಾನೆಗೆ ಅವಕಾಶ ನೀಡಲಾಗಿದೆ.
ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಕೂಡ ಭಾರತ ಟೆಸ್ಟ್ ತಂಡಕ್ಕೆ ವಾಪಸಾಗಿದ್ದಾರೆ. ಇಂಗ್ಲೆಂಡ್‌ನ ಪಿಚ್‌ನಲ್ಲಿ ಶ್ರೇಯಸ್ ಅಯ್ಯರ್ ಪರಿಣಾಮಕಾರಿಯಾಗುವ ಸಾಮರ್ಥ್ಯ ಹೊಂದಿದ್ದಾರೆ ಮಾತ್ರವಲ್ಲದೆ ಬ್ಯಾಟಿಂಗ್ ಕೂಡ ಮಾಡುವ ಸಾಮರ್ಥ್ಯ ಹೊಂದಿರುವದನ್ನು ಪರಿಗಣಿಸಿ ಅವರಿಗೆ ಅವಕಾಶ ನೀಡಲಾಗಿದೆ. ಇವರಿಬ್ಬರನ್ನು ಹೊರತುಪಡಿಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಗೆದ್ದಿದ್ದ ತಂಡವನ್ನೆ ಉಳಿಸಿಕೊಳ್ಳಲಾಗಿದೆ.
ವಿಶ್ವ ಟೆಸ್ಟ್ ಚಾಂಪಿಯ್‌ಶಿಪ್ ಫೈನಲ್‌ಗೆ ಭಾರತ ತಂಡ:
| ರೋಹಿತ್ ಶರ್ಮಾ (ನಾಯಕ) |
| ಶುಭಮನ್ ಗಿಲ್ |
| ಚೇತೇಶ್ವರ ಪೂಜಾರ |
| ವಿರಾಟ್ ಕೊಹ್ಲಿ |
| ಅಜಿಂಕ್ಯ ರಹಾನೆ |
| ಕೆ ಎಲ್ ರಾಹುಲ್ |
| ಕೆಎಸ್ ಭರತ್ (ವಿಕೆಟ್ ಕೀಪರ್) |
| ರವಿಚಂದ್ರನ್ ಅಶ್ವಿನ್ |
| ರವೀಂದ್ರ ಜಡೇಜಾ |
| ಅಕ್ಷರ್ ಪಟೇಲ್ |
| ಶಾರ್ದೂಲ್ ಠಾಕೂರ್ |
| ಮೊಹಮ್ಮದ್ ಶಮಿ |
| ಮೊಹಮ್ಮದ್ ಸಿರಾಜ್ |
| ಉಮೇಶ್ ಯಾದವ್ |
| ಜಯದೇವ್ ಉನದ್ಕತ್ |












Click it and Unblock the Notifications