WPL 2027: 5 ತಂಡಗಳ ರಿಟೇನ್, ರಿಲೀಸ್ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ, ಆರ್‌ಸಿಬಿಗೆ ಪೆರ್ರಿ ಕಮ್‌ಬ್ಯಾಕ್‌

WPL 2027: ಡಬ್ಲ್ಯೂಪಿಎಲ್‌ 2027ನೇ ಆವೃತ್ತಿಗೆ ನಡೆಯಲಿರುವ ಮಿನಿ ಹರಾಜಿಗೂ ಮುನ್ನ ಟೂರ್ನಿಯ ಐದೂ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಿಕೊಂಡಿರುವ ಮತ್ತು ಬಿಡುಗಡೆಗೊಳಿಸಿರುವ ಆಟಗಾರ್ತಿಯರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಮುಂದಿನ ಆವೃತ್ತಿಯ ಹರಾಜು ಪ್ರಕ್ರಿಯೆಯು ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ಜರುಗಲಿದೆ.

ಅದರಲ್ಲೂ ಕಳೆದ 2026ರ ಆವೃತ್ತಿಯ ಟೂರ್ನಿ ಆರಂಭಕ್ಕೆ ಕೇವಲ 10 ದಿನಗಳಿರುವಾಗ ವೈಯಕ್ತಿಕ ಕಾರಣಗಳಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದ ಆಸ್ಟ್ರೇಲಿಯಾದ ಆಲ್-ರೌಂಡರ್ ಎಲೀಸ್ ಪೆರ್ರಿ, 2027ರ ಆವೃತ್ತಿಯಲ್ಲಿ ಆಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರಳಲಿದ್ದಾರೆ.

WPL 2027 Auction Full List of Retained and Released Players From All 5 Teams Know Complete details

ಡಬ್ಲ್ಯೂಪಿಎಲ್‌ ಯಾವಾಗಿನಿಂದ ಆರಂಭ?

ಹಾಲಿ ಚಾಂಪಿಯನ್ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ಅವರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಮುಂದಿನ ವರ್ಷ ಜನವರಿ 14ರಿಂದ ಫೆಬ್ರವರಿ 7ರ ವರೆಗೆ ನಡೆಯಲಿರುವ ಲೀಗ್‌ನಲ್ಲಿ ಅವರು ಲಭ್ಯವಿರುವುದನ್ನು ಖಚಿತಪಡಿಸಿದೆ. ಇದು ಬೆಂಗಳೂರು ಅಭಿಮಾನಿಗಳಲ್ಲಿ ಭಾರಿ ಸಂತಸ ಮೂಡಿಸಿದೆ.

ಅಚ್ಚರಿ ಸಂಗತಿ ಎಂದರೆ ಸತತ ಮೂರು ಆವೃತ್ತಿಗಳಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ಯುಪಿ ವಾರಿಯರ್ಸ್ ಈ ಬಾರಿ ಅತ್ಯಂತ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಬರೋಬ್ಬರಿ 9 ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿದೆ. ಇದರಲ್ಲಿ ವೆಸ್ಟ್ ಇಂಡೀಸ್‌ನ ಡಿಯಾಂಡ್ರಾ ಡಾಟಿನ್ ಸೇರಿದಂತೆ ಭಾರತದ ಪ್ರಮುಖ ಆಟಗಾರ್ತಿಯರಾದ ಕಿರಣ್ ನವ್‌ಗಿರೆ, ಆಶಾ ಶೋಭನಾ ಮತ್ತು ಶ್ವೇತಾ ಸೆಹ್ರಾವತ್ ಕೂಡ ಇದ್ದಾರೆ. ಹಾಗಾದ್ರೆ ಫ್ರಾಂಚೈಸಿವಾರು ಬಿಡುಗಡೆಗೊಳಿಸಿದ ಹಾಗೂ ಉಳಿಸಿಕೊಂಡ ಆಟಗಾರ್ತಿಯರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

* ಉಳಿಸಿಕೊಂಡ ಆಟಗಾರ್ತಿಯರು: ಸ್ಮೃತಿ ಮಂಧನಾ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಎಲೀಸ್ ಪೆರ್ರಿ, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲೌರೆನ್ ಬೆಲ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಪ್ರತ್ಯೂಷಾ ಕುಮಾರ್.
* ಬಿಡುಗಡೆಗೊಳಿಸಿದ ಆಟಗಾರ್ತಿಯರು: ಗ್ರೇಸ್ ಹ್ಯಾರಿಸ್, ಲಿನ್ಸೆ ಸ್ಮಿತ್, ಗೌತಮಿ ನಾಯಕ್, ದಯಾಲನ್ ಹೇಮಲತಾ.

ಮುಂಬೈ ಇಂಡಿಯನ್ಸ್

* ರಿಟೇನ್ ಆದವರು: ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ಹೇಲಿ ಮ್ಯಾಥ್ಯೂಸ್, ನಟಾಲಿ ಸೀವರ್, ನಿಕೋಲಾ ಕ್ಯಾರಿ, ರಾಹಿಲಾ ಫಿರ್ದೌಸ್, ಎಸ್. ಸಜನಾ, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್, ವೈಷ್ಣವಿ ಶರ್ಮಾ.
* ಬಿಡುಗಡೆಯಾದವರು: ಜಿ. ಕಮಲಿನಿ, ಮಿಲ್ಲಿ ಇಲ್ಲಿಂಗ್‌ವರ್ತ್, ನಲ್ಲಾ ರೆಡ್ಡಿ, ಪೂನಮ್ ಖೇಮ್ನಾರ್, ಸೈಕಾ ಇಶಾಕ್, ತ್ರಿವೇಣಿ ವಸಿಷ್ಠ.

ಡೆಲ್ಲಿ ಕ್ಯಾಪಿಟಲ್ಸ್

* ರಿಟೇನ್ ಮಾಡಿಕೊಂಡ ಆಟಗಾರ್ತಿಯರು: ಅನಾಬೆಲ್ ಸುದರ್‌ಲ್ಯಾಂಡ್, ಚಿನೆಲ್ಲೆ ಹೆನ್ರಿ, ದಿಯಾ ಯಾದವ್, ಜೆಮಿಮಾ ರೊಡ್ರಿಗಸ್(ನಾಯಕಿ), ಲಾರಾ ವೊಲ್ವಾರ್ಟ್, ಲೂಸಿ ಹ್ಯಾಮಿಲ್ಟನ್, ಮಮತಾ ಮಡಿವಾಳ, ಮರಿಜಾನ್ನೆ ಕಪ್, ಮಿನ್ನು ಮಣಿ, ನಂದಿನಿ ಶರ್ಮಾ, ನಿಕಿ ಪ್ರಸಾದ್, ಶಫಾಲಿ ವರ್ಮಾ, ಶ್ರೀ ಚರಣಿ.
* ಬಿಡುಗಡೆಯಾದವರು: ಲಿಜೆಲ್ ಲೀ, ಅಲಾನಾ ಕಿಂಗ್, ತಾನಿಯಾ ಭಾಟಿಯಾ, ಸ್ನೇಹ್ ರಾಣಾ, ಪ್ರಗತಿ ಸಿಂಗ್, ಎಡ್ಲಾ ಸೃಜನಾ.

ಯುಪಿ ವಾರಿಯರ್ಸ್

* ರಿಟೇನ್ ಆದವರು: ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್, ಕ್ರಾಂತಿ ಗೌಡ್, ಮೆಗ್ ಲ್ಯಾನಿಂಗ್, ಫೋಬೆ ಲಿಚ್‌ಫೀಲ್ಡ್, ಪ್ರತಿಕಾ ರಾವಲ್, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ತಾರಾ ನಾರಿಸ್.
* ಕೈಬಿಟ್ಟ ಆಟಗಾರ್ತಿಯರು: ಕಿರಣ್ ನವ್‌ಗಿರೆ, ಕ್ಲೋಯ್ ಟ್ರಯಾನ್, ಏಮಿ ಜೋನ್ಸ್, ಡಿಯಾಂಡ್ರಾ ಡಾಟಿನ್, ಆಶಾ ಶೋಭನಾ, ಶ್ವೇತಾ ಸೆಹ್ರಾವತ್.

ಗುಜರಾತ್ ಜೈಂಟ್ಸ್

* ಉಳಿದುಕೊಂಡವರು: ಅನುಷ್ಕಾ ಶರ್ಮಾ, ಆಶ್ಲೀ ಗಾರ್ಡ್ನರ್, ಬೆತ್ ಮೂನಿ, ಭಾರತಿ ಫುಲ್ಮಾಲಿ, ಜಾರ್ಜಿಯಾ ವೇರ್‌ಹ್ಯಾಮ್, ಹ್ಯಾಪಿ ಕುಮಾರಿ, ಜಿಂತಿಮಣಿ ಕಲಿತಾ, ಕನಿಕಾ ಅಹುಜಾ, ಕಾಶ್ವಿ ಗೌತಮ್, ಕಿಮ್ ಗಾರ್ತ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್, ಸೋಫಿ ಡಿವೈನ್, ತನುಜಾ ಕನ್ವರ್, ಯಾಸ್ತಿಕಾ ಭಾಟಿಯಾ.
* ಬಿಡುಗಡೆಯಾದವರು: ಡ್ಯಾನಿ ವ್ಯಾಟ್-ಹಾಡ್ಜ್, ಆಯುಷಿ ಸೋನಿ, ಟಿಟಾಸ್ ಸಾಧು, ಶಿವಾನಿ ಸಿಂಗ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+