WPL 2027 Auction: ಸಮಯ, ಸ್ಥಳ, ನೇರ ಪ್ರಸಾರ, ಆಟಗಾರ್ತಿಯರು ಹಾಗೂ ಉಳಿದ ಮೊತ್ತದ ವಿವರ

WPL 2027 Auction: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್ 2027) ಹರಾಜು ಪ್ರಕ್ರಿಯೆಗೆ ವೇದಿಕೆ ಸಿದ್ಧಗೊಂಡಿದೆ. ಜನವರಿ 14ರಿಂದ ಫೆಬ್ರವರಿ 7ರ ವರೆಗೆ ನಡೆಯಲಿರುವ ಈ ಟೂರ್ನಿಗಾಗಿ ಎಲ್ಲಾ 5 ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ರಚಿಸಲು ಪೈಪೋಟಿ ನಡೆಸಲು ಸಜ್ಜಾಗಿವೆ. ಹಾಗಾದ್ರೆ ಸಮಯ, ಸ್ಥಳ, ನೇರಪ್ರಸಾರ ಹಾಗೂ ಉಳಿದಿರುವ ಮೊತ್ತದ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈ ಬಾರಿಯ ಹರಾಜಿಗಾಗಿ ಒಟ್ಟು 146 ಆಟಗಾರ್ತಿಯರು ಶಾರ್ಟ್‌ಲಿಸ್ಟ್ ಆಗಿದ್ದು, 5 ತಂಡಗಳಲ್ಲಿ ಕೇವಲ 27 ಸ್ಥಾನಗಳು ಮಾತ್ರ ಲಭ್ಯವಿವೆ. ಇವುಗಳಲ್ಲಿ 20 ಭಾರತೀಯ ಹಾಗೂ 7 ವಿದೇಶಿ ಆಟಗಾರ್ತಿಯರ ಸ್ಥಾನಗಳು ಸೇರಿವೆ. ಇನ್ನೂ ಶಾರ್ಟ್‌ಲಿಸ್ಟ್ ಆದವರಲ್ಲಿ 119 ಭಾರತೀಯರು (22 ಕ್ಯಾಪ್ಡ್, 97 ಅನ್‌ಕ್ಯಾಪ್ಡ್) ಹಾಗೂ 27 ವಿದೇಶಿ ಆಟಗಾರ್ತಿಯರಿದ್ದಾರೆ.

WPL 2027 Auction Date Time Venue Live Streaming Teams Purse And Players Know complete details

ಆಟಗಾರ್ತಿಯರ ಮೂಲ ಬೆಲೆಗಳ ವಿವರ

* ಆಟಗಾರ್ತಿಯರು ತಮ್ಮ ಅನುಭವ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ವಿಭಿನ್ನ ಮೂಲ ಬೆಲೆಯನ್ನು ನಿಗದಿಪಡಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಸೋಫಿಯಾ ಡಂಕ್ಲಿ ಮತ್ತು ಆಸ್ಟ್ರೇಲಿಯಾದ ಆಲ್ರೌಂಡರ್ ಸೋಫಿ ಮೊಲಿನಾಕ್ಸ್ ಗರಿಷ್ಠ ₹50 ಲಕ್ಷ ಮೂಲ ಬೆಲೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

* ₹40 ಲಕ್ಷ: ಭಾರತದ ಬ್ಯಾಟರ್ ಜಿ.ಕಮಿಲಿನಿ, ಕಿರಣ್ ನವಗಿರೆ, ಆಸ್ಟ್ರೇಲಿಯಾದ ಹೀದರ್ ಗ್ರಹಾಂ ಮತ್ತು ಜೆಸ್ ಜೊನಾಸೆನ್.

* 30 ಆಟಗಾರ್ತಿಯರು ₹30 ಲಕ್ಷ ಹಾಗೂ 106 ಆಟಗಾರ್ತಿಯರು ₹10 ಲಕ್ಷ ಮೂಲ ಬೆಲೆ ವಿಭಾಗದಲ್ಲಿದ್ದಾರೆ.

ಫ್ರಾಂಚೈಸಿಗಳ ಬಳಿಯಿರುವ ಹಣ ಮತ್ತು ಲಭ್ಯವಿರುವ ಸ್ಥಾನಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)

* ಉಳಿದಿರುವ ಮೊತ್ತ: ₹1.15 ಕೋಟಿ
* ಲಭ್ಯವಿರುವ ಸ್ಥಾನಗಳು: 5

ಯುಪಿ ವಾರಿಯರ್ಸ್ (UP Warriorz)

* ಉಳಿದಿರುವ ಮೊತ್ತ: ₹3.75 ಕೋಟಿ
* ಲಭ್ಯವಿರುವ ಸ್ಥಾನಗಳು: 8 (ವಿದೇಶಿ ಆಟಗಾರ್ತಿಯರು ಸೇರಿ)

ಗುಜರಾತ್ ಜೈಂಟ್ಸ್ (Gujarat Giants)

* ಉಳಿದಿರುವ ಪರ್ಸ್ ಮೊತ್ತ: ₹1.25 ಕೋಟಿ
* ಲಭ್ಯವಿರುವ ಸ್ಥಾನಗಳು: 3

ಡೆಲ್ಲಿ ಕ್ಯಾಪಿಟಲ್ಸ್ (Delhi Capitals)

* ಉಳಿದಿರುವ ಪರ್ಸ್ ಮೊತ್ತ: ₹1.10 ಕೋಟಿ
* ಲಭ್ಯವಿರುವ ಸ್ಥಾನಗಳು: 5

ಮುಂಬೈ ಇಂಡಿಯನ್ಸ್ (Mumbai Indians)

* ಉಳಿದಿರುವ ಪರ್ಸ್ ಮೊತ್ತ: ₹90 ಲಕ್ಷ
* ಲಭ್ಯವಿರುವ ಸ್ಥಾನಗಳು: 6

ಹರಾಜು ಸಮಯ ಮತ್ತು ನೇರ ಪ್ರಸಾರದ ವಿವರಗಳು

* ದಿನಾಂಕ: ಅಕ್ಟೋಬರ್ 28, 2026 (ಬುಧವಾರ)

* ಸ್ಥಳ: ಗ್ರ್ಯಾಂಡ್ ಹ್ಯಾಟ್, ಕೊಚ್ಚಿ (ಕೇರಳ)

* ಆರಂಭದ ಸಮಯ: ಭಾರತೀಯ ಕಾಲಮಾನ ಸಂಜೆ 5:30ಕ್ಕೆ

* ಟಿವಿ ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ (Star Sports Network)

* ಲೈವ್ ಸ್ಟ್ರೀಮಿಂಗ: ಜಿಯೋ ಹಾಟ್‌ಸ್ಟಾರ್ (JioHotstar) ಆ್ಯಪ್ ಮತ್ತು ವೆಬ್‌ಸೈಟ್.

ಗಮನ ಸೆಳೆಯಲಿರುವ ಪ್ರಮುಖ ವಿದೇಶಿ ಆಟಗಾರ್ತಿಯರು

* ಗ್ರೇಸ್ ಹ್ಯಾರಿಸ್ (ಆಸ್ಟ್ರೇಲಿಯಾ): ಆರ್‌ಸಿಬಿ ತಂಡದಿಂದ ಬಿಡುಗಡೆಯಾಗಿರುವ ಹ್ಯಾರಿಸ್ ಪ್ರಮುಖ ಆಕರ್ಷಣೆಯಾಗಿದ್ದಾರೆ.
* ಸೋಫಿ ಮೊಲಿನಾಕ್ಸ್ (ಆಸ್ಟ್ರೇಲಿಯಾ): 2024ರಲ್ಲಿ ಆರ್‌ಸಿಬಿ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದ ಈ ಆಲ್‌ರೌಂಡರ್ ₹50 ಲಕ್ಷ ಮೂಲ ಬೆಲೆಯಲ್ಲಿ ಲಭ್ಯವಿದ್ದಾರೆ.
* ಜೆಸ್ ಜೊನಾಸೆನ್ (ಆಸ್ಟ್ರೇಲಿಯಾ): ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಹೊರಬಂದಿರುವ ಅನುಭವಿ ಸ್ಪಿನ್ ಆಲ್ರೌಂಡರ್ ಮೇಲೆ ಹಲವು ತಂಡಗಳ ಕಣ್ಣಿದೆ.

ಹರಾಜಿನಲ್ಲಿ ಗಮನ ಸೆಳೆಯಲಿರುವ ಭಾರತದ ಆಟಗಾರ್ತಿಯರು

* ವೃಂದಾ ದಿನೇಶ್ ಮತ್ತು ಗೊಂಗಡಿ ತ್ರಿಷಾ: ಭಾರತದ ಅಂಡರ್-19 ವಿಶ್ವಕಪ್ ವಿಜೇತ ತಂಡದ ಪ್ರಮುಖ ಬ್ಯಾಟರ್‌ಗಳ ಮೇಲೆ ಫ್ರಾಂಚೈಸಿಗಳು ಗಮನಹರಿಸುವ ಸಾಧ್ಯತೆಯಿದೆ.

* ಇರಾ ಜಾಧವ್: ಮುಂಬೈ ಟಿ20 ಲೀಗ್‌ನಲ್ಲಿ ಮಿಂಚಿದ 15 ವರ್ಷದ ಯುವ ಆಟಗಾರ್ತಿ ಇರಾ ಜಾಧವ್ ಹರಾಜಿನಲ್ಲಿ ವಿಶೇಷ ಆಕರ್ಷಣೆಯಾಗಿದ್ದಾರೆ.

ಹರಾಜು ಪ್ರಕ್ರಿಯೆ ಹೇಗೆ ನಡೆಯಲಿದೆ?

ಮೊದಲ ಹಂತದಲ್ಲಿ ಕ್ಯಾಪ್ಡ್ ಆಟಗಾರ್ತಿಯರನ್ನು ಬ್ಯಾಟರ್‌ಗಳು, ಆಲ್ರೌಂಡರ್‌ಗಳು, ವಿಕೆಟ್‌ ಕೀಪರ್‌ಗಳು, ವೇಗಿಗಳು ಹಾಗೂ ಸ್ಪಿನ್ನರ್‌ಗಳ ವಿಭಾಗಗಳಲ್ಲಿ ಹರಾಜು ಮಾಡಲಾಗುತ್ತದೆ. ನಂತರ ಅನ್‌ಕ್ಯಾಪ್ಡ್ ಆಟಗಾರ್ತಿಯರ ಸರದಿ ಬರಲಿದೆ. 50 ಆಟಗಾರ್ತಿಯರ ನಂತರ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರ್ತಿಯರನ್ನು ಆಯ್ಕೆ ಮಾಡಿಕೊಳ್ಳಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+