ಡಬ್ಲ್ಯೂಪಿಎಲ್ 2026: ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿಯಲ್ಲಿ ಸ್ಟಾರ್ ಆಟಗಾರ್ತಿ ಪೆರ್ರಿ ಸ್ಥಾನ ತುಂಬವರು ಇವರೇ ನೋಡಿ
WPL 2026 RCB: ಡಬ್ಲ್ಯೂಪಿಎಲ್ 2026 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಉದ್ಘಾಟನಾ ಪಂದ್ಯ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಇದೇ ಜನವರಿ 9ರಂದು ಮುಂಬೈನಲ್ಲಿ ನಡೆಯಲಿದೆ. ಹಾಗಾದ್ರೆ, ಬೆಂಗಳೂರು ತಂಡದಲ್ಲಿ ಸ್ಟಾರ್ ಆಟಗಾರ್ತಿ ಪೆರ್ರಿ ಸ್ಥಾನ ತುಂಬುವರು ಯಾರು ಎನ್ನುವ ಕುತೂಹಲ ಬಹುತೇಕ ಮಂದಿಯ ತಲೆಯಲ್ಲಿರುತ್ತದೆ. ಅದೆಲ್ಲದಕ್ಕೂ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಹಿಳಾ ಪ್ರೀಮಿಯರ್ ಲೀಗ್‌ನ ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು ತಂಡವು ತಮ್ಮ ಅತ್ಯಂತ ಪ್ರಭಾವಶಾಲಿ ಆಟಗಾರ್ತಿಯೊಬ್ಬರಾದ ಎಲಿಸ್ ಪೆರ್ರಿ ವೈಯಕ್ತಿಕ ಕಾರಣಗಳನ್ನು ನೀಡಿ ಮುಂಬರುವ ಸ್ಪರ್ಧೆಯಿಂದ ಹಿಂದೆ ಸರಿದ ನಂತರ, ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿತ್ತು. ಆದರೆ, ಇದೀಗ ಅವರಷ್ಟು ಉತ್ತಮ ಪ್ರದರ್ಶನ ತೋರದಿದ್ದರೂ ಸಹ ಆ ಸ್ಥಾನದಲ್ಲಿ ಆಡಿಸಲು ಆಟಗಾರ್ತಿಯೊಬ್ಬರನ್ನು ತಯಾರು ಮಾಡಲಾಗಿದೆ.

ಪೆರ್ರಿ ಹಿಂದೆ ಸರಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದೆ ಕಠಿಣ ಸವಾಲು ಎದುರಾಗಿದೆ. ಪ್ರಸ್ತುತ ಸರ್ಕಾರದಿಂದ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜಿಸಲು ಅನುಮತಿ ಪಡೆಯುವಷ್ಟೇ ಸವಾಲಿನದ್ದಾಗಿದೆ.
ಎಲಿಸ್ ಪೆರ್ರಿ ಬದಲಿಗೆ ಆರ್‌ಸಿಬಿ ಭಾರತ ತಂಡದ ಸಯಾಲಿ ಸತ್‌ಘರೆ ಅವರನ್ನು 30 ಲಕ್ಷ ರೂಪಾಯಿ ಮೂಲ ಬೆಲೆಗೆ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಇವರು ಆಲ್‌ರೌಡರ್ ಆಗಿದ್ದು, ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ದಾಳಿಯನ್ನು ಮಾಡುತ್ತಾರೆ. ಆದರೂ ಎಲಿಸ್ ಪೆರ್ರಿ ಅವರಷ್ಟು ಉತ್ತಮ ಪ್ರದರ್ಶನ ತೋರುತ್ತಾರಾ ಎಂದು ಕಾದುನೋಡಬೇಕಿದೆ.
ಎಲಿಸ್ ಪೆರ್ರಿ ಒಬ್ಬ ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟ್ ಆಟಗಾರ್ತಿ ಮತ್ತು ಫುಟ್‌ಬಾಲ್ ಆಟಗಾರ್ತಿ ಆಗಿದ್ದು, ಕ್ರಿಕೆಟ್‌ನಲ್ಲಿ ಆಲ್‌ರೌಂಡರ್ ಆಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ಅವರು ಆಸ್ಟ್ರೇಲಿಯಾ ಪರ ಕ್ರಿಕೆಟ್ ಹಾಗೂ ಫುಟ್‌ಬಾಲ್ ಎರಡರಲ್ಲೂ ಪ್ರತಿನಿಧಿಸಿದ್ದಾರೆ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದವರಲ್ಲಿ ಒಬ್ಬರಾಗಿದ್ದಾರೆ. ಈ ಮೂಲಕ ಅವರು ವಿಶ್ವದ ಅತ್ಯುತ್ತಮ ಕ್ರಿಕೆಟ್ ಆಟಗಾರ್ತಿ ಅಂತಲೂ ಹೆಸರುವಾಸಿಯಾಗಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ 2026ರ ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಹೊರಗುಳಿದಿದ್ದು, ಇದರಿಂದ ಆರ್‌ಸಿಬಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಆರ್‌ಸಿನಿಯಲ್ಲಿ ಟಾಪ್ ಆರ್ಡರ್‌ನಲ್ಲಿ ಆಕ್ರಮಣಕಾರಿ ಬ್ಯಾಟ್ ಬೀಸುವುದಲ್ಲದೆ, ಅಗತ್ಯವಿದ್ದಾಗ ಪ್ರಮುಖ ಓವರ್‌ಗಳಲ್ಲಿ ಬೌಲಿಂಗ್ ದಾಳಿ ಮಾಡಿ ಎದುರಾಗಳಿಗಳಿಗೆ ನಡುಕ ಹುಟ್ಟಿಸಿದ ಆಟಗಾರ್ತಿಯಾಗಿ ಗಮನ ಗಮನ ಸೆಳೆದಿದ್ದರು. ಜೊತೆಗೆ ಆರ್‌ಸಿಬಿ ನಾಯಕಿ ಸ್ಮೃತಿ ಮಂದನಾಗೆ ನಾಯಕತ್ವ ಸಲಹೆ ಬೇಕಾದಾಗ ಸಾಥ್ ನೀಡುವ ಮೂಲಕ ಅವರ ಭುಜವಾಗಿಯೂ ಇದ್ದರು. ಈ ಮೂಲಕ ತಂಡಕ್ಕೆ ಆಸರೆಯಾಗಿದ್ದರು.
ಪೆರಿ ಅವರು 25 ಡಬ್ಲ್ಯೂಪಿಎಲ್ ಪಂದ್ಯಗಳಲ್ಲಿ 64.80 ಸರಾಸರಿ ಮತ್ತು 132.96 ಸ್ಟ್ರೈಕ್ ರೇಟ್‌ನೊಂದಿಗೆ 972 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಎಂಟು ಅರ್ಧಶತಕಗಳು ಸೇರಿವೆ. ಆರ್‌ಸಿಬಿಯ ಎರಡನೇ ರನ್ ಗಳಿಸಿದ (646 ರನ್‌ಗಳು) ಮಂದನಾ ಅವರಿಗಿಂತ 326 ರನ್‌ಗಳಷ್ಟು ಹಿಂದೆ ಇದ್ದಾರೆ. ಇದು ಪೆರ್ರಿ ಆರ್‌ಸಿಬಿಯಲ್ಲಿ ಮಾಡಿದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಆಗಿದೆ.
ಮತ್ತೊಂದೆಡೆ, ಆಡಿದ 25 ಡಬ್ಲ್ಯೂಪಿಎಲ್ ಪಂದ್ಯಗಳಲ್ಲಿ 35 ವರ್ಷದ ಪೆರ್ರಿ ಅವರು ಒಟ್ಟು 14 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಅವರು 8.20ರ ಸರಾಸರಿ ಎಕಾನಮಿ ರೇಟ್‌ನೊಂದಿಗೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಆರ್‌ಸಿಬಿಯಲ್ಲಿ 4 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ 6 ವಿಕೆಟ್ ಕಬಳಿಸಿದ ಕೀರ್ತಿ ಅವರದ್ದಾಗಿದ್ದಾಗಿದೆ.
ಉತ್ತಮ ಫೀಲ್ಡಿಂಗ್ ಸಹ ಮಾಡಿ ಗಮನ ಸೆಳೆದಿದ್ದಾರೆ ಮತ್ತು 347 ಅಂತಾರಾಷ್ಟ್ರೀಯ ಪಂದ್ಯಗಳ ಅನುಭವವನ್ನು ಸೇರಿಸಿದಂತೆ, ಇನ್ನು ಡಬ್ಲ್ಯೂಪಿಎಲ್ ಆರ್‌ಸಿಬಿಯಲ್ಲಿ ಅತ್ಯಂತ ಅಗತ್ಯವಾಗಿದ್ದ ಆಸರೆಯಾಗಿ ನಿಂತು ಏಕಾಂಗಿ ಹೋರಾಟ ಮಾಡಿ ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ.
ಇವರ ಸ್ಥಾನವನ್ನುನ ತುಂಬುವುದು ಯಾರು ಎನ್ನುವ ಚಿಂತೆಯಲ್ಲಿ ಆರ್‌ಸಿಬಿಯದ್ದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೆರ್ರಿ ಅವರು ತಾನು ವೈಯಕ್ತಿಯ ಕಾರಣಗಳಿಂದ ಮುಂದಿನ ಆವೃತ್ತಿಗೆ ಆರ್‌ಸಿಬಿ ಪರ ಆಡಲು ಆಗುವುದಿಲ್ಲ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದರು. ಈ ಮಾಹಿತಿ ತಂಡಕ್ಕೆ ರಿಟೆನ್ಷನ್ ನಂತರ ಹಾಗೂ ಹರಾಜು ಪ್ರಕ್ರಿಯೆ ಆರಂಭಕ್ಕೆ ಕೆಲವೇ ಕ್ಷಣಗಳ ಮುನ್ನವೇ ತಿಳಿದುಬಂದಿತ್ತು.
"ಇದೀಗ ಪೆರ್ರಿ ಅಧಿಕೃತವಾಗಿ ಡಬ್ಲ್ಯೂಪಿಎಲ್‌ನಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ. ಅವರು ತಂಡಕ್ಕಾಗಿ ಗಳಿಸಿಕೊಟ್ಟ ರನ್‌ಗಳನ್ನು ನಾವು ಹೇಗೆ ಮರೆಯಲು ಸಾಧ್ಯತೆ. ಅವರ ಸ್ಥಾನವನ್ನು ಭರ್ತಿ ಮಾಡಬಹುದು ಹೇಗೆ?," ಎಂದು ಮುಖ್ಯ ಕೋಚ್ ಮಲೋಲನ್ ರಂಗರಾಜನ್ ಅವರಿಂದ ಪ್ರಶ್ನೆ ಕೇಳಿಬಂದಿದೆ.
ಸ್ಮೃತಿ ಮಂದಾನಗೆ ಹೆಚ್ಚಿದ ಜವಾಬ್ದಾರಿ: ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯನ್ನು ಬದಲಾಯಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ, ಆರ್‌ಸಿಬಿ ಇದೀಗ ತಮ್ಮ ತಂಡವನ್ನು ಉತ್ತಮಗೊಳಿಸಿದೆ. ಇದೀಗ ಪೆರಿ ಗಳಿಸಿದ ಹೆಚ್ಚಿನ ರನ್‌ಗಳ ಹೊಣೆಗಾರಿಕೆ ಈಗ ಮಂದನಾದ ಮೇಲಿದ್ದು, ಟಾಪ್ ಆರ್ಡರ್‌ನ್ನು ಉತ್ತಮವಾಗಿ ನಿರ್ವಹಿಸಬೇಕಾಗುತ್ತದೆ.
ಟಾಪ್ ಆರ್ಡರ್‌ನಲ್ಲಿ ಆಡುವವರು ಯಾರು?: ಸ್ಮೃತಿ ಮಂದನಾಗೆ ಜೊತೆಯಾಗುವ ಅನುಭವಿ ಭಾರತೀಯ ಟಾಪ್ ಆರ್ಡರ್ ಬ್ಯಾಟರ್‌ರನ್ನು ಆರ್‌ಸಿಬಿ ನೇಮಿಸಿಕೊಳ್ಳುವಲ್ಲಿ ವಿಫಲವಾಗಿದೆ. ಅವರು ಗೌತಮಿ ನಾಯಕ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ಮಂದನಾ ಜೊತೆ ಓಪನಿಂಗ್ ಮಾಡಿದ ಗೌತಮಿ, ಆರು ಪಂದ್ಯಗಳಲ್ಲಿ 173 ರನ್‌ಗಳನ್ನು ಸಿಡಿಸಿದ್ದರು. ಆದರೆ, ಡಬ್ಲ್ಯೂಪಿಎಲ್‌ನ ಪಂದ್ಯಗಳನ್ನ ಇನ್ನೂ ಎದುರಿಸದಿರುವ ಗೌತಮಿ ನಾಯಕ್‌ರನ್ನು ಆಯ್ಕೆ ಮಾಡಿರುವುದು ಇದೀಗ ಚಿಂತೆಯಾಗಿದೆ. ಆದರೂ ಅವರು ಹೇಗೆ ಪ್ರದರ್ಶನ ತೋರಲಿದ್ದಾರೆ ಎಂದು ಕಾದುನೋಡಬೇಕಿದೆ.
ಮಂದಾನ ಜೊತೆ ಓಪನರ್ ಯಾರು?: ಈ ಸಾಲಿನಲ್ಲಿ ದಯಾಲನ್ ಹೇಮಲತಾ ಕೂಡ ಇದ್ದಾರೆ. 31 ವರ್ಷದ ಹೇಮಲತಾ 22 ಪಂದ್ಯಗಳಲ್ಲಿ 18.31ರ ಸರಾಸರಿಯಲ್ಲಿ ಕೇವಲ 264 ರನ್‌ಗಳನ್ನು ಗಳಿಸಿದ್ದಾರೆ. ಇನ್ನೂ ನಂತರ ವಿದೇಶಿ ಬ್ಯಾಟರ್‌ಗಳಾದ ನಾಡಿನ್ ಡಿ ಕ್ಲರ್ಕ್, ಜಾರ್ಜಿಯಾ ವೋಲ್ ಮತ್ತು ಗ್ರೇಸ್ ಹ್ಯಾರಿಸ್ ಇದ್ದಾರೆ. ಈ ಪೈಕಿ ಜಾರ್ಜಿಯಾ ವೋಲ್ ಅವರನ್ನು ಬಹುತೇಕ ಮಂದನಾ ಜೊತೆಗೆ ಓಪನಿಂಗ್ ಮಾಡಲಿದ್ದಾರೆ.
ಹಾಗೆಯೇ ಹ್ಯಾರಿಸ್ ಮತ್ತು ಡಿ ಕ್ಲರ್ಕ್ ಕ್ರಮವಾಗಿ 4 ಮತ್ತು 6ನೇ ಸ್ಥಾನಗಳಲ್ಲಿ ಆಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತದ ರಿಚಾ ಘೋಷ್ ಅವರು ಉತ್ತಮ ಫಿನಿಷನ್ ಅಂತಲೇ ಹೆಸರುವಾಸಿಯಾಗಿದ್ದು, ಆದ್ದರಿಂದ ಇವರು ನಂತರದ ಸ್ಥಾನದಲ್ಲಿ ಕಣ್ಣಕ್ಕಿಳಿಯುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಆರ್‌ಸಿಬಿ ಬೌಲಿಂಗ್ ವಿಭಾಗ: ಜೊತೆಗೆ ಕೀಪಿಂಗ್ ಸಹ ಮಾಡುತ್ತಾರೆ. ಬೌಲಿಂಗ್ ವಿಭಾಗಕ್ಕೆ ಬಂದರೆ, ಲಾರೆನ್ ಬೆಲ್, ಪೂಜಾ ವಾಸ್ತ್ರಕಾರ್, ಅರುಂಧತಿ ರೆಡ್ಡಿ ಮತ್ತು ರಾಧಾ ಯಾದವ್ ಅವರು ಉತ್ತಮ ಬೌಲಿಂಗ್ ದಾಳಿ ಮಾಡಲಿದ್ದಾರೆ. ಆದರೂ ಇದರಲ್ಲಿ ಪೆರ್ರಿ ಅವರು ಉತ್ತಮ ಬೌಲರ್ ಕೂಡ ಆಗಿದ್ದು, ಇವರ ಅನುಪಸ್ಥಿತಿಯಲ್ಲಿ ಯಾರು ಈ ಸ್ಥಾನವನ್ನು ಉತ್ತವಾಗಿ ನಿಭಾಯಿಸಲಿದ್ದಾರೆಯೋ ಎಂದು ಕಾದುನೋಡಬೇಕಿದೆ.
-
Krunal Pandya: ವಿರಾಟ್ ಕೊಹ್ಲಿ - 2026ರ ಆರ್‌ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Namma Metro: ಐಪಿಎಲ್ ಪಂದ್ಯದ ದಿನ ದಟ್ಟಣೆ ಇಲ್ಲದೇ ಓಡಾಡಿ, ಮೆಟ್ರೋ ಸೇವಾವಧಿ ವಿಸ್ತರಣೆ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ











Click it and Unblock the Notifications