ಡಬ್ಲ್ಯೂಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ vs ಡಿಸಿ ಮಹಾಸಮರ: 2ನೇ ಟ್ರೋಫಿಗೆ ಆರ್‌ಸಿಬಿ, ಚೊಚ್ಚಲ ಕಿರೀಟಕ್ಕೆ ಕ್ಯಾಪಿಟಲ್ಸ್ ಹೋರಾಟ
WPL Final 2026: ಡಬ್ಲ್ಯೂಪಿಎಲ್ 2026 ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಇಂದು (ಫೆಬ್ರವರಿ 5) ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹೈವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ. ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ಈ ಮಹತ್ವ ಪಂದ್ಯ ನಡೆಯಲಿದೆ. ಹಾಗಾದ್ರೆ ಈ ಪಿಚ್ ಯಾರಿಗೆಲ್ಲಾ ಹೆಚ್ಚು ಅನುಕೂಲ ಆಗಲಿದೆ ಹಾಗೂ ಗೆಲ್ಲುವ ತಂಡ ಯಾವುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಎರಡನೇ ಫೈನಲ್ ಪಂದ್ಯವನ್ನು ಆಡಲು ಸಿದ್ಧವಾಗಿದೆ. 2024ರಲ್ಲಿ ಇದೇ ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿಯಾಗಿ ಇದ್ದು, ಆ ವೇಳೆ ಸ್ಮೃತಿ ಮಂಧಾನಾ ನಾಯಕತ್ವದ ಆರ್‌ಸಿಬಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಚೊಚ್ಚಲ ಟ್ರೋಫಿ ಎತ್ತಿಹಿಡಿದಿತ್ತು. ಇದೀಗ ಎರಡನೇ ಟ್ರೋಫಿ ಗೆಲುವಿನ ಭರವಸೆಯಲ್ಲಿದೆ.

ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಅತೀ ಹೆಚ್ಚು ಬಾರಿ ಫೈನಲ್‌ವರೆಗೆ ತಲುಪಿದ್ದರೂ ಸಹ ಕೊನೇ ಹಂತದಲ್ಲಿ ಟ್ರೋಫಿ ಕೈತಪ್ಪಿದೆ. ಈ ಬಾರಿ ಜೆಮಿಮಾ ರೋಡ್ರಿಗಸ್ ಹೊಸ ನಾಯಕತ್ವದಲ್ಲಿ ಡಿಸಿ ಚೊಚ್ಚಲ ಟ್ರೋಫಿ ಎತ್ತುವ ನಿರೀಕ್ಷೆ ಇಟ್ಟುಕೊಂಡಿದೆ. ಒಂದು ವೇಳೆ ಜೆಮಿಮಾ ರೋಡ್ರಿಗಸ್ ನಾಯಕತ್ವದಲ್ಲಿ ತಂಡವು ಈ ಸಾಧನೆ ಮಾಡಿ ಹೊಸ ದಾಖಲೆಯನ್ನೇ ಬರೆಯಲಿದೆ.
ವಡೋದರಾ ಪಿಚ್ ವರದಿ: ಈ ಸೀಸನ್‌ನ ಡಬ್ಲ್ಯೂಪಿಎಲ್ ಪಂದ್ಯಗಳಲ್ಲಿ ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ತಂಡಗಳು ಹೆಚ್ಚಾಗಿ ಚೇಸಿಂಗ್ ಆಯ್ಕೆ ಮಾಡಿಕೊಂಡಿವೆ. ಇಲ್ಲಿ ಇದುವರೆಗೆ ನಡೆದ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡಗಳ ಪಾಲಾಗಿವೆ. ಪಿಚ್ ಬ್ಯಾಟಿಂಗ್ ಪರವಾಗಿದ್ದರೆ, ಆದರೂ ಪಂದ್ಯ ಅವಧಿಯಲ್ಲೂ ಸ್ಪಿನ್ನರ್‌ಗಳು ಕೂಡ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನಾ (ನಾಯಕಿ), ಜಾರ್ಜಿಯಾ ವೋಲ್, ಗೌತಮಿ ನಾಯಕ್, ರಿಚಾ ಘೋಷ್ (ವಿಕೆಟ್ ಕೀಪರ್), ನಾಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಶ್ರೇಯಾಂಕಾ ಪಾಟೀಲ್, ಸಯಾಲಿ ಸಾತ್ಘರೆ, ಲಾರೆನ್ ಬೆಲ್.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ 11: ಶಫಾಲಿ ವರ್ಮಾ, ಲಿಜೆಲ್ಲೆ ಲೀ (ವಿಕೆಟ್ ಕೀಪರ್), ಲಾರಾ ವೊಲ್ವಾರ್ಡ್ಟ್, ಜೆಮಿಮಾ ರೋಡ್ರಿಗಸ್ (ನಾಯಕಿ), ಮರಿಜಾನ್ನೆ ಕಪ್, ಚಿನೆಲ್ಲೆ ಹೆನ್ರಿ, ನಿಕಿ ಪ್ರಸಾದ್, ಸ್ನೇಹ ರಾಣಾ, ಮಿನ್ನು ಮಣಿ, ಶ್ರೀ ಚರಣಿ, ನಂದನಿ ಶರ್ಮಾ.
ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ, ಡಿಸಿ ಮುಖಾಮುಖಿ ದಾಖಲೆ
* ಒಟ್ಟು ಪಂದ್ಯಗಳು - 9
* ಆರ್‌ಸಿಬಿ ಗೆಲುವು - 3
* ಡೆಲ್ಲಿ ಕ್ಯಾಪಿಟಲ್ಸ್ ಗೆಲುವು - 6












Click it and Unblock the Notifications