ವಿಂಬಲ್ಡನ್ 2022 ಫೈನಲ್ ತಲುಪಿ ದಾಖಲೆ ಬರೆದ ಜೊಕೊವಿಕ್
ಲಂಡನ್, ಜುಲೈ 8: ಸೆರ್ಬಿಯಾದ ನೋವಾಕ್ ಜೊಕೊವಿಕ್ ಮತ್ತೊಮ್ಮೆ ವಿಂಬಲ್ಡನ್ ಫೈನಲ್ ತಲುಪಿದ್ದೆ. ಇಂದು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ನಾರಿ ವಿರುದ್ಧ ಒಂದು ಸೆಟ್ ಸೋತರೂ ಪಂದ್ಯವನ್ನು ಗೆಲ್ಲುವಲ್ಲಿ ಸಫಲರಾದರು. ಈ ಮೂಲಕ 8ನೇ ಬಾರಿಗೆ ವಿಂಬಲ್ಡನ್ ಫೈನಲ್ ತಲುಪಿದ್ದಾರೆ. ಅಲ್ಲದೆ, ಅತಿ ಹೆಚ್ಚು ಬಾರಿ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ ರೋಜರ್ ಫೆಡರರ್ ದಾಖಲೆಯನ್ನು ಬದಿಗೊತ್ತಿದ್ದಾರೆ.
35 ವರ್ಷ ವಯಸ್ಸಿನ ನೊವಾಕ್ ಜೊಕೊವಿಕ್ ವಿರುದ್ಧ 9ನೇ ಸೀಡೆಡ್ ಆಟಗಾರ ಬ್ರಿಟನ್ನಿನ ಕೆಮರೂನ್ ನಾರಿ 6-2ರಲ್ಲಿ ಗೆಲುವು ಸಾಧಿಸಿದಾಗ ಎಲ್ಲರೂ ಹುಬ್ಬೇರಿಸಿದ್ದರು. ಆದರೆ, ನಂ.1 ಸೀಡೆಡ್ ಜೊಕೊವಿಕ್ ಸಕತ್ ಆಗಿ ಕಮ್ ಬ್ಯಾಕ್ ಮಾಡಿ ಸತತವಾಗಿ ಮೂರು ಸೆಟ್ ಗಳನ್ನು 6-3, 6-2, 6-4ರಲ್ಲಿ ಗೆದ್ದುಕೊಂಡರು.
One step away from a fourth consecutive Wimbledon title.@DjokerNole defeats Cameron Norrie 2-6, 6-3, 6-2, 6-4 to reach his eighth final at The Championships#Wimbledon | #CentreCourt100 pic.twitter.com/wVXnsfKrIN
— Wimbledon (@Wimbledon) July 8, 2022
ಈಗ ಭಾನುವಾರ(ಜುಲೈ 10)ದಂದು ಆಸ್ಟ್ರೇಲಿಯಾದ ಮೇವರಿಕ್ ಕರ್ಗಿಯೊಸ್ ವಿರುದ್ಧ ಅಂತಿಮ ಹಣಾಹಣಿಯಲ್ಲಿ ಸೆಣೆಸಲಿದ್ದಾರೆ. ಸೆಮಿಫೈನಲ್ ಸುತ್ತಿನಲ್ಲಿ ಆಸ್ಟ್ರೇಲಿಯದ ಆಟಗಾರ ಮೇವರಿಕ್ ಕರ್ಗಿಯೋಸ್ ವಿರುದ್ಧ ಕಣಕ್ಕಿಳಿಯಬೇಕಿದ್ದ ಅವೆ ಮಣ್ಣಿನ ಕಿಂಗ್ ರಾಫೆಲ್ ನಡಾಲ್ ಕೊನೆಕ್ಷಣದಲ್ಲಿ ವಾಕ್ ಓವರ್ ನೀಡಿದರು.ಗಾಯದ ಸಮಸ್ಯೆ ಉಲ್ಬಣವಾಗಿದ್ದರಿಂದ ಪಂದ್ಯದಿಂದ ಹಿಂದೆ ಸರಿಯುತ್ತಿರುವುದಾಗಿ ಅಧಿಕೃತ ಹೇಳಿಕೆ ನೀಡಿದರು. ಹೀಗಾಗಿ, ಮೇವರಿಕ್ ಸುಲಭವಾಗಿ ಫೈನಲ್ ಪ್ರವೇಶಿಸಲು ಸಾಧ್ಯವಾಯಿತು.

ಚೊಚ್ಚಲ ಫೈನಲ್ ಪ್ರವೇಶಿಸಿರುವ ಕರ್ಗಿಯೋಸ್ ಹಾಗೂ 8ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ನೋವಾಕ್ ಜೊಕೊವಿಕ್ ನಡುವೆ ಬಿರುಸಿನ ಹಣಾಹಣಿ ನಿರೀಕ್ಷಿಸಲಾಗಿದೆ.
ಜೊಕೊವಿಕ್ ದಾಖಲೆ:
ಅತಿ ಹೆಚ್ಚು ಬಾರಿ ಪುರುಷರ ಸಿಂಗಲ್ಸ್ ಗ್ರ್ಯಾಂಡ್ ಸ್ಲಾಮ್ ಫೈನಲ್ ಪ್ರವೇಶಿಸಿದ ಆಟಗಾರರ ಪೈಕಿ ನೊವಾಕ್ ಜೊಕೊವಿಕ್ ಅಗ್ರಸ್ಥಾನಕ್ಕೇರಿದ್ದಾರೆ. ವಿಂಬಲ್ಡನ್ 2022ರ ಫೈನಲ್ ಪ್ರವೇಶಿಸುವ ಮೂಲಕ ಜೊಕೊವಿಕ್ ಒಟ್ಟಾರೆ 32ನೇ ಬಾರಿ ಅಂತಿಮ ಹಣಾಹಣಿಗೆ ಸಜ್ಜಾಗುತ್ತಿದ್ದಾರೆ. 6 ಬಾರಿ ಕಪ್ ಎತ್ತಿದ ಸಾಧನೆ ಮಾಡಿದ್ದಾರೆ.
🗣️ @DjokerNole
— Wimbledon (@Wimbledon) July 8, 2022
🗣️ @NickKyrgios #Wimbledon | #CentreCourt100 pic.twitter.com/mkClruiRpN
ರೋಜರ್ ಫೆಡರರ್ ಮಾತ್ರ 8 ಬಾರಿ ವಿಂಬಲ್ಡನ್ ಟ್ರೋಫಿಯನ್ನು ಹೆಚ್ಚು ಬಾರಿ ಗೆದ್ದಿದ್ದಾರೆ. ಈ ಬಾರಿ ಕಪ್ ಎತ್ತಿದರೆ ಜೊಕೊವಿಕ್ ಅವರು ವಿಲಿಯಂ ರೆನ್ ಶಾ ಹಾಗೂ ಪೀಟ್ ಸಾಂಪ್ರಾಸ್ (ಇಬ್ಬರು 7 ಬಾರಿ ಗೆಲುವು) ಸಾಧನೆ ಸಮಕ್ಕೆ ನಿಲ್ಲಲಿದ್ದಾರೆ.
ಸದ್ಯಕ್ಕೆ ಫೈನಲ್ ಪ್ರವೇಶದ ದಾಖಲೆ ಬಗ್ಗೆ ಹೇಳುವುದಾದರೆ, ಜೊಕೊವಿಕ್ 32 ಬಾರಿ, ರೋಜರ್ ಫೆಡರರ್ 31, ರಾಫೆಲ್ ನಡಾಲ್ 30, ಇವಾನ್ ಲೆಂಡ್ಲ್ 19 ಹಾಗೂ ಪೀಟ್ ಸಾಂಪ್ರಾಸ್ 18 ಬಾರಿ ಗ್ರ್ಯಾನ್ ಸ್ಲಾಮ್ ಫೈನಲ್ ತಲುಪಿದ ಅಗ್ರಗಣ್ಯ ಸಾಧಕರಾಗಿದ್ದಾರೆ.

ಟಿವಿ: ಸ್ಟಾರ್ ಸ್ಪೋರ್ಟ್ಸ್ ಸಮೂಹ ಜಾಲದಲ್ಲಿ ನೇರ ಪ್ರಸಾರವಾಗಲಿದೆ.
ಆನ್ ಲೈನ್ ಸ್ಟ್ರೀಮಿಂಗ್: ಡಿಸ್ನಿ + ಹಾಟ್ ಸ್ಟಾರ್
ಫೈನಲ್ ಪಂದ್ಯ: ವಿಂಬಲ್ಡನ್ 2022ರ ಫೈನಲ್ ಪಂದ್ಯ ಜುಲೈ 9(ಮಹಿಳೆ) ಹಾಗೂ ಜುಲೈ 10(ಪುರುಷ)ರಂದು ನಡೆಯಲಿದೆ.
ಮಹಿಳೆಯರ ಫೈನಲ್ ಪಂದ್ಯದಲ್ಲಿ ಎಲೆನಾ ರಿಬಕಿನಾ ಹಾಗೂ ಆನ್ಸ್ ಜಬೇರ್, ಪುರುಷರ ಫೈನಲ್ ಪಂದ್ಯದಲ್ಲಿ ನಿಕ್ ಕರ್ಗಿಯೋಸ್ ಹಾಗೂ ನೊವಾಕ್ ಜೊಕೊವಿಕ್ ಸೆಣೆಸಲಿದ್ದಾರೆ.
ಆಲ್ ಇಂಗ್ಲೆಂಡ್ ಕ್ಲಬ್ ತೆಗೆದುಕೊಂಡ ನಿರ್ಣಯದಂತೆ ರಷ್ಯಾದ ಆಟಗಾರರಿಗೆ ನಿರ್ಬಂಧ ವಿಧಿಸಲಾಗಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದು, ಯುದ್ಧದ ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ. ಇನ್ನು ವಿಶ್ವ ನಂ.2 ಸೀಡ್ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಗಾಯಗೊಂಡಿದ್ದು ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಜೂನ್ 27, ದಿಂದ ಅಧಿಕೃತವಾಗಿ ಪಂದ್ಯಾವಳಿಗಳು ಆರಂಭಗೊಂಡಿದ್ದು, ಸುಮಾರು 128 ಪುರುಷ ಹಾಗೂ 128 ಮಹಿಳಾ ಆಟಗಾರರು ಪಾಲ್ಗೊಂಡಿದ್ದರು.
ವಿಂಬಲ್ಡನ್ ಬಹುಮಾನದ ಮೊತ್ತ: ಈ ಬಾರಿ ಪುರುಷ/ ಮಹಿಳಾ ಸಿಂಗಲ್ಸ್ ಗೆಲ್ಲುವ ಟೆನಿಸ್ ಪಟುವಿಗೆ 2 ಮಿಲಿಯನ್ ಪೌಂಡ್ ಪ್ರಶಸ್ತಿ ಮೊತ್ತ, ಫಲಕ ಸಿಗಲಿದೆ.












Click it and Unblock the Notifications