Will Jacks: ವಿಲ್ ಜ್ಯಾಕ್ಸ್ ಸ್ಫೋಟಕ ಇನ್ನಿಂಗ್ಸ್; ಕೊಹ್ಲಿ, ಎಬಿಡಿ ಪ್ರತಿಕ್ರಿಯೆ ಹೇಗಿತ್ತು?

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಬ್ಯಾಟರ್ ವಿಲ್ ಜ್ಯಾಕ್ಸ್ ಅಬ್ಬರಿಸಿದರು. ಕೇವಲ 41 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದ ಅವರು ಆರ್‌ಸಿಬಿಗೆ ಸುಲಭ ಗೆಲುವು ತಂದುಕೊಟ್ಟರು.

ವಿಲ್ ಜ್ಯಾಕ್ಸ್ ಅವರ ಅಮೋಘ ಶತಕದ ನೆರವಿನಿಂದ ಆರ್‌ಸಿಬಿ ಕೇವಲ 16 ಓವರ್ ಗಳಲ್ಲಿ 201 ರನ್‌ಗಳ ಗುರಿಯನ್ನು ಬೆನ್ನಟ್ಟುವ ಮೂಲಕ ಹೊಸ ದಾಖಲೆ ಬರೆಯಿತು. ವಿಲ್ ಜ್ಯಾಕ್ಸ್ 15 ಮತ್ತು 16 ಓವರ್ ನಲ್ಲಿ ತಲಾ 29 ರನ್ ಗಳಿಸಿದರು.

Will Jacks Virat Kohli and AB de Villiers Praise Will Jacks Century in RCB vs GT Match

ಟಾಸ್ ಸೋತ ಗುಜರಾತ್ ಟೈಟಾನ್ಸ್ ಮೊದಲು ಬ್ಯಾಟಿಂಗ್ ಮಾಡಿ 200 ಎಸೆತಗಳಲ್ಲಿ 3 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ 16 ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 206 ರನ್ ಗಳಿಸುವ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟಿತು.

ಕೊಹ್ಲಿ ಖುಷಿಗೆ ಪಾರವೇ ಇಲ್ಲ

ಫಾಫ್ ಡುಪ್ಲೆಸಿಸ್ ಔಟಾದ ಬಳಿಕ ಬ್ಯಾಟಿಂಗ್ ಮಾಡಲು ಬಂದ ವಿಲ್ ಜ್ಯಾಕ್ಸ್ ಆರಂಭದಲ್ಲಿ ನಿಧಾನಗತಿಯಲ್ಲೇ ಬೌಲಿಂಗ್ ಮಾಡಿದರು. ಮೊದಲ 16 ಎಸೆತಗಳಲ್ಲಿ ಕೇವಲ 16 ರನ್ ಗಳಿಸಿದ್ದರು. ಜ್ಯಾಕ್ಸ್ ನಿಧಾನಗತಿಯ ಬ್ಯಾಟಿಂಗ್ ಮಾಡುವಾಗ ಮತ್ತೊಂದು ಬದಿಯಲ್ಲಿ ಕೊಹ್ಲಿ ಬೌಂಡರಿ ಗಳಿಸುವ ಮೂಲಕ ಒತ್ತಡ ಕಡಿಮೆ ಮಾಡಿದರು.

ಎಲ್ಲರೂ ವಿರಾಟ್ ಕೊಹ್ಲಿ ಶತಕ ಗಳಿಸುತ್ತಾರೆ ಎಂದೇ ಭಾವಿಸಿದ್ದರು, ಆದರೆ ವಿಲ್ ಜ್ಯಾಕ್ಸ್ ಅಬ್ಬರಿಸಲು ಶುರು ಮಾಡಿದ ಬಳಿಕ ಸಂಪೂರ್ಣ ಚಿತ್ರಣವೇ ಬದಲಾಯಿತು. ಮೊದಲ 31 ಎಸೆತಗಳಲ್ಲಿ 50 ರನ್ ಗಳಿಸಿದ ಅವರು, ಬಳಿಕ ಕೇವಲ 10 ಎಸೆತಗಳಲ್ಲಿ 50 ರನ್ ಕಲೆಹಾಕಿದರು.

ಮೋಹಿತ್ ಶರ್ಮಾ ಅವರ ಒಂದೇ ಓವರ್ ನಲ್ಲಿ 29 ರನ್ ಕಲೆಹಾಕಿದರು, ಬಳಿಕ ರಶೀದ್ ಖಾನ್ ಓವರ್ ನಲ್ಲಿ ಕೂಡ 29 ರನ್ ಗಳಿಸುವ ಮೂಲಕ 16ನೇ ಓವರ್ ನಲ್ಲೇ ಪಂದ್ಯ ಮುಗಿಸಿದರು. ಎರಡು ಓವರ್ ಗಳಲ್ಲಿ 7 ಸಿಕ್ಸರ್ ಚಚ್ಚಿದರು.

ವಿಲ್ ಜ್ಯಾಕ್ಸ್ ಪ್ರತಿ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಕಳುಸಿತ್ತಿದ್ದರೆ ಕೊಹ್ಲಿ ಕೂಡ ಅಚ್ಚರಿಯಿಂದ ಬಾಯಿ ಮೇಲೆ ಕೈ ಇಟ್ಟುಕೊಂಡರು. ಪ್ರತಿ ಬಾರಿ ಸಿಕ್ಸರ್, ಬೌಂಡರಿ ಹೊಡೆದಾಗ ವಿಲ್‌ ಜ್ಯಾಕ್ಸ್ ಬಳಿ ಬಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಜ್ಯಾಕ್ಸ್ ಶತಕ ಪೂರೈಸುತ್ತಿದ್ದಂತೆ ಓಡೆ ಹೋಗಿ ಖುಷಿಯಿಂದ ತಬ್ಬಿಕೊಂಡರು.

ಪಂದ್ಯದ ಬಳಿಕ ಮಾತನಾಡಿದ ಅವರ, ಟಿ20 ಪಂದ್ಯದಲ್ಲಿ ನಾನು ನೋಡಿ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಇದು ಒಂದು, ಆರಂಭದಲ್ಲಿ ವಿಲ್ ಜ್ಯಾಕ್ಸ್ ಅಂದುಕೊಂಡಂತೆ ಚೆಂಡು ಬ್ಯಾಟ್‌ಗೆ ತಾಗುತ್ತಿರಲಿಲ್ಲ, ಆದರೆ ಒಮ್ಮೆ ಲಯ ಕಂಡುಕೊಂಡ ಬಳಿಕ ಅವರ ಒಂದೊಂದು ಹೊಡೆತ ಕೂಡ ಅತ್ಯುತ್ತಮವಾಗಿತ್ತು ಎಂದಿದ್ದಾರೆ.

ವಿಲ್ ಜ್ಯಾಕ್ಸ್ ಶತಕ ನೋಡಿ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಕೂಡು ಖುಷಿಯಾಗಿದ್ದಾರೆ. ಆರ್ ಸಿಬಿ ಮಾಜಿ ಬ್ಯಾಟರ್ ಎಬಿ ಡಿ ವಿಲಿಯರ್ಸ್ ಕೂಡ ವಿಲ್ ಜ್ಯಾಕ್ಸ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಮೊದಲಿನಿಂದಲೂ ಜ್ಯಾಕ್ಸ್ ಉತ್ತಮ ಆಯ್ಕೆ ಎಂದು ಹೇಳಿದ್ದು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+