RCB: ಸಿಎಸ್‌ಕೆ ವಿರುದ್ಧ ಪಂದ್ಯಕ್ಕೆ ಮುನ್ನ 'ಆರ್‌ಸಿಬಿ'ಗೆ ಬಿಗ್ ಶಾಕ್!
ಮೊದಲು ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿದ್ದ ಆರ್‌ಸಿಬಿ ಬಳಿಕ ಐದು ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ.
ಪ್ಲೇ ಆಫ್ ಕನಸು ಜೀವಂತವಾಗಿದ್ದು ಅದೃಷ್ಟ ಕೈಹಿಡಿಯುವ ಜೊತೆಗೆ ಸಿಎಸ್‌ಕೆ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಬೃಹತ್ ಗೆಲುವು ಪಡೆದರೆ, ಮುಂದಿನ ಹಂತಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಪ್ಲೇಯಿಂಗ್ 11 ಸೆಟ್ ಆಗಿದ್ದು, ಮಹತ್ವದ ಪಂದ್ಯ ಗೆಲ್ಲುವ ಲೆಕ್ಕಾಚಾರದಲ್ಲಿದ್ದ ಆರ್‌ಸಿಬಿ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ.

ತಂಡದ ಪ್ರಮುಖ ಸ್ಫೋಟಕ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಆರ್‌ಸಿಬಿ ತಂಡವನ್ನು ತೊರೆದಿದ್ದಾರೆ. ಅವರು ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ, ಇದು ನಿಜಕ್ಕೂ ತಂಡಕ್ಕೆ ದೊಡ್ಡ ಆಘಾತ.
ವಿಶ್ವಕಪ್ ಆಡಲು ತವರಿಗೆ ವಾಪಸ್
ಜೂನ್ 2ರಿಂದ ಟಿ20 ವಿಶ್ವಕಪ್ ಆರಂಭವಾಗಲಿದ್ದು ಸಿದ್ಧತೆಗಾಗಿ ಇಂಗ್ಲೆಂಡ್ ತಂಡದ ಆಟಗಾರರಾದ ವಿಲ್ ಜ್ಯಾಕ್ಸ್ ಮತ್ತು ರೀಸ್ ಟೋಪ್ಲೆ ವಾಪಸ್ ಹೋಗಿದ್ದಾರೆ. ತಂಡವನ್ನು ಸೇರಿಕೊಂಡ ಬಳಿಕ ಅವರು ಯುಎಸ್‌ಗೆ ಪ್ರಯಾಣ ಮಾಡಲಿದ್ದಾರೆ.
WILL JACKS AND REECE TOPLEY HAVE LEFT THE RCB CAMP. 💔
— Mufaddal Vohra (@mufaddal_vohra) May 13, 2024
- A big setback for RCB. pic.twitter.com/gmltecVmCG
ರೀಸ್ ಟೋಪ್ಲೆ ತಂಡವನ್ನು ತೊರೆಯುವುದು ತಂಡದ ಮೇಲೆ ಪರಿಣಾಮ ಬೀರದೇ ಇದ್ದರೂ, ವಿಲ್ ಜ್ಯಾಕ್ಸ್ ಆಡದೇ ಇರುವುದು ಮಾತ್ರ ತಂಡಕ್ಕೆ ಹಿನ್ನಡೆಯಾಗಲಿದೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲವನ್ನು ಹೆಚ್ಚಿಸುತ್ತಿದ್ದ ಅವರು, ಈ ಬಾರಿ ಐಪಿಎಲ್‌ನಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಬೌಲಿಂಗ್‌ನಲ್ಲಿ ಕೂಡ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 41 ಎಸೆತಗಳಲ್ಲಿ ಶತಕ ಸಿಡಿಸಿದ್ದ ಅವರು, ಆರ್ ಸಿಬಿಗೆ ದೊಡ್ಡ ಗೆಲುವು ತಂದುಕೊಟ್ಟಿದ್ದರು, ರನ್‌ರೇಟ್ ವಿಚಾರದಲ್ಲಿ ಇದು ತಂಡಕ್ಕೆ ದೊಡ್ಡ ಸಹಾಯ ಮಾಡಿತ್ತು, ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೂಡ 41 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು.
ಇಂಗ್ಲೆಂಡ್‌ನ ಎಲ್ಲಾ ಆಟಗಾರರು ವಾಪಸ್
ವಿಲ್ ಜ್ಯಾಕ್ಸ್, ರೀಸ್ ಟೋಪ್ಲೆ ಮಾತ್ರವಲ್ಲ ಐಪಿಎಲ್‌ನಲ್ಲಿ ಆಡುತ್ತಿರುವ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಎಲ್ಲಾ ಇಂಗ್ಲೆಂಡ್ ಆಟಗಾರರು ತವರಿಗೆ ಮರಳಲಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಬ್ಯಾಟರ್ ಜೋಸ್ ಬಟ್ಲರ್ ಕೂಡ ತಂಡವನ್ನು ತೊರೆದು ತವರಿಗೆ ಮರಳಿದ್ದಾರೆ. ಕೆಕೆಆರ್ ತಂಡದಲ್ಲಿರುವ ಫಿಲ್ ಸಾಲ್ಟ್ ಕೂಡ ನಾಳೆ ಇಂಗ್ಲೆಂಡ್‌ಗೆ ಹೊರಡಲಿದ್ದಾರೆ. ಸಿಎಸ್‌ಕೆ ತಂಡ ಮೊಯೀನ್ ಅಲಿ, ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾನಿ ಬೈರ್ ಸ್ಟೋ ತಂಡವನ್ನು ತೊರೆಯಲಿದ್ದಾರೆ.












Click it and Unblock the Notifications