RCB: ₹6 ಕೋಟಿ ಪಡೆದು ಆರ್​ಸಿಬಿ ಸೇರಿದ ವೇಗಿ ರಸಿಖ್ ದಾರ್ ಎರಡು ವರ್ಷ ಬ್ಯಾನ್‌ ಆಗಿದ್ದು ಯಾಕೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಬರೋಬ್ಬರಿ 6 ಕೋಟಿ ರೂಪಾಯಿ ನೀಡಿ ವೇಗದ ಬೌಲರ್ ರಸಿಖ್ ಸಲಾಮ್ ದಾರ್ ಅವರನ್ನು ಖರೀದಿ ಮಾಡಿದೆ. ₹30 ಲಕ್ಷ ಮೂಲಬೆಲೆ ಹೊಂದಿದ್ದ ರಸಿಕ್ ದಾರ್ ಖರೀದಿ ಮಾಡಲು ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪೈಪೋಟಿ ನಡೆಸಿದವು. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಆಡಿದ್ದ ರಸಿಕ್ ದಾರ್ ಗಾಗಿ ಫ್ರಾಂಚೈಸಿ ಆರ್ ಟಿಎಂ ಬಳಸಲು ಮುಂದಾಯಿತು ಆದರೆ ಆರ್ ಸಿಬಿ 6 ಕೋಟಿ ರೂಪಾಯಿಗೆ ಬಿಡ್ ಮಾಡಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ಬಿಡ್‌ನಿಂದ ಹಿಂದೆ ಸರಿಯಿತು.

ಅಂತಿಮವಾಗಿ ಬಲಗೈ ವೇಗದ ಬೌಲರ್ ರಸಿಖ್ ಸಲಾಮ್ ದಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾದರು. ರಸಿಖ್ ದಾರ್ ಜಮ್ಮು ಮತ್ತು ಕಾಶ್ಮೀರದ ಹಳ್ಳಿಯೊಂದರಲ್ಲಿ ಏಪ್ರಿಲ್ 5, 2000ರಂದು ಜನಿಸಿದರು. ವೇಗದ ಬೌಲಿಂಗ್ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ಗಮನ ಸೆಳೆಯುತ್ತಿರುವ ಕ್ರಿಕೆಟಿಗ.

Who is rasikh salam dhar sold to rcb for Rs 6 Crore in Ipl mega auction

ಜಮ್ಮು ಮತ್ತು ಕಾಶ್ಮೀರ ತಂಡದ ಪರವಾಗಿ ಆಡುವ ಅವರು, ಭಾರತ ಅಂಡರ್ 19 ತಂಡವನ್ನು ಪ್ರತಿನಿಧಿಸಿರುವ ಅವರು, ಇಂಡಿಯಾ ಎ ತಂಡಕ್ಕಾಗಿ ಕೂಡ ಆಡಿದ್ದಾರೆ. ಐಪಿಎಲ್‌ನಲ್ಲಿ ಈಗಾಗಲೇ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕಾಗಿ ಆಡಿದ್ದಾರೆ. 2024ರ ಐಪಿಎಲ್‌ನಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಆಡಿದ್ದರು. ಈವರೆಗೂ 11 ಐಪಿಎಲ್ ಪಂದ್ಯಗಳನ್ನು ಆಡಿರುವ ರಸಿಕ್ ಸಲಾಮ್ ದಾರ್ 9 ವಿಕೆಟ್ ಪಡೆದಿದ್ದಾರೆ.

5 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು 8 ಇನ್ನಿಂಗ್ಸ್‌ಗಳಲ್ಲಿ 13 ವಿಕೆಟ್ ಪಡೆದಿದ್ದಾರೆ. ಅಕ್ಟೋಬರ್ 3, 2018 ರಂದು ಪ್ರತಿಷ್ಠಿತ ವಿಜಯ್ ಹಜಾರೆ ಟ್ರೋಫಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಲಿಸ್ಟ್ ಎ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಈವರೆಗೆ 7 ಲಿಸ್ಟ್ ಎ ಪಂದ್ಯಗಳಲ್ಲಿ ಆಡಿದ್ದು 12 ವಿಕೆಟ್ ಪಡೆದಿದ್ದಾರೆ. 28 ಟಿ20 ಪಂದ್ಯಗಳಲ್ಲಿ ಆಡಿದ್ದು 35 ವಿಕೆಟ್ ಪಡೆದುಕೊಂಡಿದ್ದಾರೆ. 31 ರನ್‌ಗಳಿಗೆ 6 ವಿಕೆಟ್ ಪಡೆದಿರುವುದು ಈವರೆಗಿನ ಉತ್ತಮ ಸಾಧನೆಯಾಗಿದೆ. ಫೆಬ್ರವರಿ 22, 2019 ರಂದು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಟ್ವೆಂಟಿ 20 ಕ್ರಿಕೆಟ್‌ನಲ್ಲಿ ಪದಾರ್ಪಣೆ ಮಾಡಿದ್ದರು.

ಎರಡು ವರ್ಷ ನಿಷೇಧ

2019ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಹರಾಜಾದರು. ಜಮ್ಮು ಮತ್ತು ಕಾಶ್ಮೀರದಿಂದ ಆಯ್ಕೆಯಾದ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 17 ವರ್ಷ ಮತ್ತು 353 ದಿನಗಳ ವಯಸ್ಸಿನಲ್ಲಿ, ದಾರ್ ಮುಂಬೈಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರನಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಜನನ ಪ್ರಮಾಣಪತ್ರದಲ್ಲಿನ ವ್ಯತ್ಯಾಸದಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅವರನ್ನು ಎರಡು ವರ್ಷ ಬ್ಯಾನ್ ಮಾಡುವ ಮೂಲಕ ಆಘಾತ ನೀಡಿತ್ತು. ಬಳಿಕ ವಾಪಸ್ ಬಂದ ಅವರು ಕೆಕೆಆರ್ ತಂಡದ ಪರವಾಗಿ ಆಡಿದ್ದರು, 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡಿದ್ದ ರಸಿಖ್ ಈ ಬಾರಿ ಆರ್ ಸಿಬಿ ಪರ ಮಿಂಚಲು ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+