Ashutosh Sharma: ಪಾಕೆಟ್‌ಮನಿಗಾಗಿ ಅಂಪೈರಿಂಗ್ ಕೆಲಸ, ಡಿಪ್ರೆಷ್‌ನ್‌ಗೆ ಹೋಗಿದ್ದ ಕ್ರಿಕೆಟಿಗ ಈಗ ಸೂಪರ್ ಸ್ಟಾರ್
ಸೋಮವಾರ ನಡೆದ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 1 ವಿಕೆಟ್‌ನಿಂದ ರೋಚಕ ಗೆಲುವು ಸಾಧಿಸಿದೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಅಶುತೋಷ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಗೆಲುವಿನ ಕನಸು ಪುಡಿ ಮಾಡಿದರು. ಅಶುತೋಷ್ 31 ಎಸೆತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಹಿತ ಅಜೇಯ 66 ರನ್ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ರೋಚಕ ಗೆಲುವು ತಂದುಕೊಟ್ಟರು.
2024ರ ಐಪಿಎಲ್‌ನಲ್ಲೂ ಅಶುತೋಷ್ ಶರ್ಮಾ ಇದೇ ರೀತಿಯ ಹಲವು ಇನ್ನಿಂಗ್ಸ್ ಆಡಿದ್ದರು. ಆದರೂ ಪಂಜಾಬ್ ಕಿಂಗ್ಸ್ ಅವರನ್ನು ಕೈಬಿಟ್ಟಿತ್ತು, ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಈ ಯುವ ಕ್ರಿಕೆಟಿಗ ಮೊದಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಪಂಜಾಬ್ ಕಿಂಗ್ಸ್ ಮತ್ತೊಮ್ಮೆ ಯೋಚನೆ ಮಾಡುವಂತೆ ಮಾಡಿದ್ದಾರೆ.

ಅಶುತೋಷ್ ಶರ್ಮಾ ಜೀವನವೇನೂ ಸುಲಭದ್ದಾಗಿರಲಿಲ್ಲ, ಕಷ್ಟದ ಹಾದಿಯಲ್ಲಿ ಬೆಳೆದು ಈ ಹಂತ ತಲುಪಿದ್ದಾರೆ. ಒಂದು ಕಾಲದಲ್ಲಿ ಪಾಕೆಟ್ ಮನಿಗಾಗಿ ಅಂಪೈರಿಂಗ್ ಮಾಡುತ್ತಿದ್ದ ಅಶುತೋಷ್ ಶರ್ಮಾ ಒಂದು ಹಂತದಲ್ಲಿ ಡಿಪ್ರೆಷನ್‌ಗೆ ಹೋಗಿದ್ದರು. ಒಂದು ಕಾಲದಲ್ಲಿ ಅವರನ್ನು ಮೈದಾನದೊಳಗೂ ಬಿಡದೆ ವಾಪಸ್ ಕಳಿಸಿ ಅವಮಾನ ಮಾಡಲಾಗಿತ್ತು.
ಕಹಿ ಘಟನೆ ನೆನಪಿಸಿಕೊಂಡಿದ್ದ ಅಶುತೋಷ್
ಕ್ರಿಕೆಟ್ ಪ್ರಯಾಣದ ಸವಾಲಿನ ಸಮಯವನ್ನು ನೆನಪಿಸಿಕೊಂಡಿದ್ದರು. 2020 ಮತ್ತು 2022 ರ ನಡುವೆ ತುಂಬಾ ಕಷ್ಟಪಟ್ಟಿದ್ದರು. ವೃತ್ತಿಜೀವನದ ಅತ್ಯಂತ ಕಷ್ಟದ ಸಮಯ ಎಂದಿರುವ ಅವರು ಭಾರತದ ಅತ್ಯಂತ ಪ್ರಸಿದ್ಧ ದೇಶೀಯ ತರಬೇತುದಾರರಲ್ಲಿ ಒಬ್ಬರೆಂದು ಪ್ರಸಿದ್ಧರಾದ ಚಂದ್ರಕಾಂತ್ ಪಂಡಿತ್ ಅವರ ಕಾರಣದಿಂದ ಮಧ್ಯಪ್ರದೇಶ ತಂಡವನ್ನೇ ಬಿಡಬೇಕಾಗಿ ಬಂದಿತು.
"ನಾನು ಜಿಮ್‌ಗೆ ಹೋಗಿ ನನ್ನ ಹೋಟೆಲ್ ಕೋಣೆಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದೆ. ನಾನು ಖಿನ್ನತೆಗೆ ಒಳಗಾಗಿದ್ದೆ ಮತ್ತು ನನ್ನ ತಪ್ಪು ಏನು ಎಂದು ಯಾರೂ ನನಗೆ ಹೇಳಲಿಲ್ಲ. ಮಧ್ಯಪ್ರದೇಶಕ್ಕೆ ಹೊಸ ಕೋಚ್ ಸೇರ್ಪಡೆಗೊಂಡಿದ್ದರು 45 ಎಸೆತಗಳಲ್ಲಿ 90 ರನ್ ಗಳಿಸಿದ್ದರೂ ನನ್ನನ್ನು ತಂಡದಿಂದ ಕೈಬಿಡಲಾಗಿತ್ತು" ಎಂದು ಹೇಳಿದರು.
ಬಳಿಕ ರೈಲ್ವೇಸ್‌ನಿಂದ ಉದ್ಯೋಗ ಪಡೆದ ಬಳಿಕ ಅವರ ಜೀವನ ಬದಲಾಯಿತು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಸಂದರ್ಭದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಕೇವಲ 11 ಅರ್ಧಶತಕ ಗಳಿಸಿ ಯುವರಾಜ್ ಸಿಂಗ್ ಅವರ ಅತಿ ವೇಗದ ಟಿ20 ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದ್ದರು.
ಬಳಿಕ ಪಂಜಾಬ್ ಕಿಂಗ್ಸ್‌ನ ಬ್ಯಾಟಿಂಗ್ ಕೋಚ್ ಮತ್ತು ರೈಲ್ವೆ ಕ್ರಿಕೆಟ್‌ನ ಗೌರವಾನ್ವಿತ ವ್ಯಕ್ತಿ ಸಂಜಯ್ ಬಂಗಾರ್ ಅವರ ಗಮನ ಸೆಳೆಯಿತು. ಅಲ್ಲಿಂದ ಪಂಜಾಬ್ ಕಿಂಗ್ಸ್ ಸೇರಿಕೊಂಡ ಅವರು ಅಮೋಘ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದರು. ಯುವಕರಾಗಿದ್ದ ಸಂದರ್ಭದಲ್ಲಿ ಪಾಕೆಟ್ ಮನಿಗಾಗಿ ಸ್ಥಳೀಯ ಪಂದ್ಯಗಳಲ್ಲಿ ಅವರು ಅಂಪೈರ್ ಆಗಿ ಕೂಡ ಕೆಲಸ ಮಾಡಿದ್ದರು.












Click it and Unblock the Notifications