WI vs ENG: ಅಬ್ಬರಿಸಿದ ಕ್ರಿಸ್‌ ಗೇಲ್‌; ಇಂಗ್ಲೆಂಡ್ ವಿರುದ್ಧ ಗೆದ್ದ ವೆಸ್ಟ್ ಇಂಡೀಸ್‌

ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ 2025 ಪಂದ್ಯದಲ್ಲಿ ಕ್ರಿಸ್ ಗೇಲ್ ನಾಯಕತ್ವದ ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡವು ಇಂಗ್ಲೆಂಡ್ ಮಾಸ್ಟರ್ಸ್ ವಿರುದ್ಧ 8 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಕ್ರಿಸ್‌ ಗೇಲ್ ಅಬ್ಬರ ಕಂಡು ನೆರೆದಿದ್ದ ಅಭಿಮಾನಿಗಳು ಸಂಭ್ರಮಿಸಿದರು.

ಟಾಸ್ ಗೆದ್ದ ಇಂಗ್ಲೆಂಡ್ ಮಾಸ್ಟರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 179 ರನ್ ಕಲೆಹಾಕಿತು. ನಾಯಕ ಕ್ರಿಸ್ ಗೇಲ್ 19 ಎಸೆತಗಳಲ್ಲಿ 3 ಬೌಂಡರಿ 4 ಭರ್ಜರಿ ಸಿಕ್ಸರ್ ಸಹಿತ 39 ರನ್ ಗಳಿಸಿ ಮಿಂಚಿದರು. ಡ್ವಾನೆ ಸ್ಮಿತ್ 25 ಎಸೆತಗಳಲ್ಲಿ 35 ರನ್ ಗಳಿಸಿದರು.

West indies win against england iml t20 chris gayle

ಡೆಯೋನರೈನ್ 23 ಎಸೆತಗಳಲ್ಲಿ 35 ರನ್ ಗಳಿಸಿದರೆ, ಆಶ್ಲೆ ನರ್ಸ್ 13 ಎಸೆತಗಳಲ್ಲಿ 2 ಬೌಂಡರಿ 2 ಸಿಕ್ಸರ್ ಸಹಿತ 29 ರನ್ ಗಳಿಸಿದರು. ಮಾಂಟೆ ಪನೇಸರ್ 4 ಓವರ್ ಗಳಲ್ಲಿ 14 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆಯುವ ಮೂಲಕ ವೆಸ್ಟ್ ಇಂಡೀಸ್ ಅಬ್ಬರಕ್ಕೆ ಬ್ರೇಕ್ ಹಾಕಿದರು.

8 ರನ್‌ಗಳ ರೋಚಕ ಗೆಲುವು

180 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದರೂ ಕೊನೆಯಲ್ಲಿ ರೋಚಕ ಸೋಲು ಕಂಡಿತು. ಫಿಲ್ ಮುಸ್ಟರ್ಡ್ 19 ಎಸೆತಗಳಲ್ಲಿ 35 ರನ್ ಗಳಿಸಿದರೆ, ಇಯಾನ್ ಮಾರ್ಗನ್ 22 ರನ್ ಗಳಿಸಿದರು. ಕ್ರಿಸ್ ಸ್ಕಾಫಿಲ್ಡ್ 32 ರನ್ ಗಳಿಸಿದರು, ಕ್ರಿಸ್ ಟ್ರೆಮ್ಲೆಟ್ 19 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿದರು. ಸ್ಟುವರ್ಟ್ ಮೀಕರ್ 24 ರನ್ ಗಳಿಸಿದರು. ಗೆಲುವಿನ ಹತ್ತಿರ ಬಂದರೂ ಕೊನೆಯಲ್ಲಿ ಎಡವಿದ ಇಂಗ್ಲೆಂಡ್ ಸೋಲೊಪ್ಪಿಕೊಂಡಿತು.

ರವಿ ರಾಂಪಾಲ್, ಜೆರೋಮ್ ಟೇಲರ್ ಮತ್ತು ಸುಲೆಮಾನ್ ಬೆನ್ ತಲಾ 2 ವಿಕೆಟ್ ಪಡೆದರು. ಆಶ್ಲೆ ನರ್ಸ್ ಮತ್ತು ಡ್ವಾನೆ ಸ್ಮಿತ್ ತಲಾ 1 ವಿಕೆಟ್ ಪಡೆದರು. ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ವೆಸ್ಟ್ ಇಂಡೀಸ್ ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇಂಡಿಯಾ ಮಾಸ್ಟರ್ಸ್ ಕೂಡ ಆಡಿರುವ ಎರಡೂ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+