ವೈಭವ್ ಸೂರ್ಯವಂಶಿ ಎಐ ಅಲ್ಲ, 'ಕ್ರಿಕೆಟ್ ಬುದ್ಧಿಮತ್ತೆ' ಹೊಂದಿದ್ದಾರೆ: ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್ ಅಚ್ಚರಿ ಭವಿಷ್ಯ

Washington Sundar: ಸಾನೋ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು (ಸೆಪ್ಟೆಂಬರ್ 22) ಜಪಾನ್ ಹಾಗೂ ಭಾರತದ ನಡುವೆ ಟಿ20 ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನವೇ ಟೀಮ್ ಇಂಡಿಯಾ ಸ್ಟಾರ್ ಹಾಗೂ ಆರ್‌ಸಿಬಿ ಮಾಜಿ ಆಟಗಾರ ವಾಷಿಂಗ್ಟನ್ ಸುಂದರ್ ಅವರು ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದು ಇದೀಗ ಸಖತ್ ವೈರಲ್ ಆಗುತ್ತಿದೆ.

ಏಷ್ಯನ್ ಗೇಮ್ಸ್ ಆರಂಭಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರು, ವೈಭವ್ ಸೂರ್ಯವಂಶಿ ಅವರ ಪ್ರತಿಭೆ ಮತ್ತು ಕ್ರಿಕೆಟ್ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ವೈಭವ್ ಅವರಲ್ಲಿರುವ ಅದ್ಭುತ ಕೌಶಲ್ಯ ಹಾಗೂ ಪಂದ್ಯದ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವ ಮನಸ್ಥತಿ ಭಾರತಕ್ಕೆ ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವನ್ನು ಎತ್ತಿತೋರಿಸುತ್ತದೆ ಎಂದು ಹೇಳಿದ್ದಾರೆ.

Washington Sundar Praises 15 Year Old boy Vaibhav Sooryavanshi s Cricket Talent Ahead of Japan T20

ವೈಭವ್ ಕುರಿತು ವಾಷಿಂಗ್ಟನ್ ಹೇಳಿದ್ದೇನು?

ಜಪಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ವಾಷಿಂಗ್ಟನ್ ಸುಂದರ್ ಅವರು, 'ವೈಭವ್ ಸೂರ್ಯವಂಶಿ ಕೇವಲ ಅದ್ಭುತ ಕೌಶಲ ಹೊಂದಿರುವ ಆಟಗಾರನಷ್ಟೇ ಅಲ್ಲ. ಅವರ ಬಳಿ ಅತ್ಯುತ್ತಮ ಕ್ರಿಕೆಟ್ ಬುದ್ಧಿಮತ್ತೆಯೂ ಇದೆ. ಹಲವು ಎದುರಾಳಿಗಳು ಹಾಗೂ ವಿಭಿನ್ನ ಪರಿಸ್ಥಿತಿಗಳಿಗೆ ತಕ್ಕಂತೆ ಹೇಗೆ ಸವಾಲುಗಳನ್ನು ಎದುರಿಸಬೇಕು ಮತ್ತು ಪಂದ್ಯಗಳನ್ನು ಗೆಲ್ಲಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ,' ಎಂದು ಹೇಳಿದರು.

'ವೈಭವ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ'

'ಉತ್ತಮ ಕ್ರಿಕೆಟ್ ಜ್ಞಾನ ಮತ್ತು ಅದ್ಭುತ ಕೌಶಲಗಳನ್ನು ಒಳಗೊಂಡ ಅವರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಅಪಾಯಕಾರಿ ಬ್ಯಾಟರ್ ಆಗಿಸುತ್ತದೆ. ವೈಭವ್ ಈಗಾಗಲೇ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಿದ್ದು, ಭವಿಷ್ಯದಲ್ಲಿ ಭಾರತ ತಂಡಕ್ಕೆ ಹಲವು ಪಂದ್ಯಗಳಲನ್ನು ಗೆಲ್ಲಿಸಿಕೊಡಲಿದ್ದಾರೆ,' ಎಂದು ಭರವಸ ವ್ಯಕ್ತಪಡಿಸಿದರು.

ಜಪಾನ್ ಕ್ರೀಡಾಭಿಮಾನಿಗಳಿಗೆ ಸುಂದರ್ ಕಿವಿಮಾತು

ಜಪಾನ್ ಕ್ರೀಡಾಭಿಮಾನಿಗಳಿಗೆ ಆಹ್ವಾನ ನೀಡಿದ ವಾಷಿಗ್ಟನ್ ಸುಂದರ್, 'ನೀವು ಖಂಡಿತವಾಗಿ ಭಾರತಕ್ಕೆ ಭೇಟಿ ನೀಡಬೇಕು. ವಿಶೇಷವಾಗಿ ಐಪಿಎಲ್ ಅಥವಾ ದೊಡ್ಡ ಸರಣಿಗಳ ಸಮಯದಲ್ಲಿ ನಮ್ಮ ದೇಶದಲ್ಲಿ ಕ್ರಿಕೆಟ್ ಎಷ್ಟು ದೊಡ್ಡ ಮಟ್ಟದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬೇಕು,' ಎಂದು ಹೇಳಿದ್ದಾರೆ.

'ಭಾರತದಲ್ಲಿ ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಧರ್ಮ. ಬಾಲ್ಯದಿಂದಲೂ ಕ್ರಿಕೆಟ್ ವಾತಾವರಣದಲ್ಲೇ ಬೆಳೆದು ಬಂದಿರುವ ಆಟಗಾರರಿಗೆ ದೇಶವನ್ನು ಪ್ರತಿನಿಧಿಸಿ ಉನ್ನತ ಮಟ್ಟದಲ್ಲಿ ಆಡುವುದು ಅತ್ಯಂತ ದೊಡ್ಡ ಆಶೀರ್ವಾದ,' ಎಂದು ಅವರು ನೆನಪಿಸಿಕೊಂಡರು.

ಇದೇ ವೇಳೆ ಐಪಿಎಲ್ ಲೀಗ್ ಬಗ್ಗೆ ಮಾತನಾಡುತ್ತಾ, '2008ರಿಂದ ಪ್ರಾರಂಭವಾದ ಐಪಿಎಲ್ ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ಮಟ್ಟ ತಲುಪಲು ಈ ಲೀಗ್ ಉತ್ತಮ ವೇದಿಕೆಯಾಗಿದೆ,' ಎಂದು ತಿಳಿಸಿದರು.

ಜಪಾನ್‌ನಲ್ಲಿ ಕ್ರಿಕೆಟ್ ಬೆಳೆಯುತ್ತಿರುವುದನ್ನು ಮತ್ತು ಜಪಾನ್ ಪ್ರೀಮಿಯರ್ ಲೀಗ್ ಆರಂಭವಾಗಿರುವುದನ್ನು ವಾಷಿಂಗ್ಟನ್ ಸುಂದರ್ ಮುಕ್ತಕಂಠದಿಂದ ಶ್ಲಾಘಿಸಿದರು. ಜಪಾನ್‌ನ ಲೀಗ್‌ನಲ್ಲಿ ಆಡುವ ಆಟಗಾರರು ಭವಿಷ್ಯದಲ್ಲಿ ಐಪಿಎಲ್‌ನಲ್ಲಿ ಕಾಣಿಸಿಕೊಂಡರೆ ಅದು ವಿಶ್ವ ಕ್ರಿಕೆಟ್‌ಗೆ ಉತ್ತಮ ಬೆಳವಣಿಗೆಯಾಗಲಿದೆ,' ಎಂದು ಹೇಳಿದರು. ಒಟ್ಟಿನಲ್ಲಿ ಸುಂದರ್ ಅವರು ವೈಭವ್ ಸೂರ್ಯವಂಶಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದು ಎಲ್ಲೆಡೆ ಸದ್ದು ಮಾಡುತ್ತಿದೆ. ಈಗಾಗಲೇ ಹಲವು ಕ್ರಿಕೆಟ್‌ ದಿಗ್ಗಜರು ಹಾಗೂ ಅಭಿಮಾನುಗಳು ಸಹ ಈ ಬಾಲಕನ ಬಗ್ಗೆ ಮಹತ್ವದ ಭವಿಷ್ಯಗಳನ್ನು ನುಡಿದಿದ್ದು, ಅವುಗಳು ಎಷ್ಟರ ಮಟ್ಟಿಗೆ ನಿಜವಾಗುತ್ತವೆ ಎಂಬುದನ್ನು ಕಾದುನೋಡಬೇಕಿದೆ ಅಷ್ಟೇ. ಈಗಾಗಲೇ ವಂಡರ್ ಕಿಡ್‌ನಲ್ಲಿನ ಅದ್ಭುತ ಪ್ರತಿಭಗೆ ಇಡೀ ಕ್ರಿಕೆಟ್‌ ಜಗತ್ತೇ ದಂಗಾಗಿರುವುದಂತೂ ಸತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+