IPL 2025: ಅಂಪೈರ್ ಕೂಡ ಹಣ ಪಡೆಯುತ್ತಾರೆ! ಇಶಾನ್ ಕಿಶನ್ ವಿರುದ್ಧ ಕಿಡಿ ಕಾರಿದ ವಿರೇಂದ್ರ ಸೆಹ್ವಾಗ್
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ ಇಶಾನ್ ಕಿಶನ್ ಮಾಡಿದ ಕೆಲಸಕ್ಕೆ ಕ್ರಿಕೆಟ್ ಪಂಡಿತರು ಕೂಡ ತಬ್ಬಿಬ್ಬಾಗಿದ್ದಾರು. ಮೊದಲ ಎಸೆತದಲ್ಲೇ ವೈಡ್ ಆಗಿದ್ದರೂ, ಅಂಪೈರ್ ವೈಡ್ ನೀಡಲು ಹೋದರೂ ಇಶಾನ್ ಕಿಶನ್ ಕ್ರೀಸ್‌ನಿಂದ ಪೆವಿಲಿಯನ್ ಕಡೆ ನಡೆದರು. ಬಳಿಕ ಮತ್ತೆ ಕ್ರೀಸ್ ಕಡೆ ಬಂದರೂ ಅಂಪೈರ್ ಔಟ್ ಕೊಟ್ಟಿದ್ದರಿಂದ ಅವರನ್ನು ಔಟ್ ಎಂದು ನಿರ್ಣಯಿಸಲಾಯಿತು.
ಇಶಾನ್ ಕಿಶನ್ ಔಟಾಗದೇ ಇದ್ದರೂ ಕ್ರೀಸ್‌ನಿಂದ ಹೊರನಡೆದ ನಿರ್ಧಾರವನ್ನು 'ಬ್ರೈನ್-ಫೇಡ್' ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಕರೆದಿದ್ದಾರೆ. ಇಶಾನ್ ಕಿಶನ್ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು ಅಂಪೈರ್ ಗಳು ತೀರ್ಪು ನೀಡುವವರೆಗೆ ಇಶಾನ್ ಕಿಶನ್ ಕಾಯಬೇಕಿತ್ತು ಎಂದಿದ್ದಾರೆ.

ಇಶಾನ್ ಕಿಶನ್ ಮಾಡಿದ್ದೇನು?
ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ 2025 ರಲ್ಲಿ ಹೀನಾಯ ಸೋಲು ಕಂಡಿತು. ಎಸ್‌ಆರ್‌ಹೆಚ್ ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ, ಕಿಶನ್ ಲೆಗ್-ಸೈಡ್ ಎಸೆತವನ್ನು ಆಡಲು ಪ್ರಯತ್ನಿಸಿದರು ಆದರೆ ಚೆಂಡನ್ನು ಸಂಪರ್ಕಿಸುವಲ್ಲಿ ವಿಫಲವಾದರು. ವಿಕೆಟ್ ಕೀಪರ್ ರಯಾನ್ ರಿಕಲ್ಟನ್ ಚೆಂಡನ್ನು ಹಿಡಿದರು, ಔಟ್ ಎಂದು ಎಂಐ ಆಟಗಾರರಿಂದ ಯಾವುದೇ ಮನವಿ ಬರದಿದ್ದರೂ ಇಶಾನ್ ಕಿಶನ್ ಮೈದಾನದಿಂದ ಹೊರನಡೆಯಲು ನಿರ್ಧರಿಸಿದರು. ಮರುಪ್ರಸಾರದಲ್ಲಿ ಚೆಂಡು ಬ್ಯಾಟ್‌ಗೆ ತಾಗಿಲ್ಲ ಕಿಶನ್ ಹೊರನಡೆಯುವುದು ತಪ್ಪು ನಿರ್ಧಾರ ಎಂದು ತಿಳಿಯಿತು.
ಆ ಕ್ಷಣದಲ್ಲಿ ಮನಸ್ಸು ಕೆಲಸ ಮಾಡಲು ವಿಫಲವಾಗುತ್ತದೆ. ಅದು ಮೆದುಳು ಮಂಕಾಗಿತ್ತು. ಅಂತ ಸಂದರ್ಭದಲ್ಲಿ ಕನಿಷ್ಠ ಪಕ್ಷ ನಿಲ್ಲಬೇಕು, ಅಂಪೈರ್ ನಿರ್ಧಾರ ತೆಗೆದುಕೊಳ್ಳುವವರೆಗೆ ಕಾಯಿರಿ. ಅಂಪೈರ್ ಗಳು ಕೂಡ ತಾವು ಮಾಡುವ ಕೆಲಸಕ್ಕೆ ಹಣ ಪಡೆಯುತ್ತಾರೆ ಎಂದು ಸೆಹ್ವಾಗ್ ಕ್ರಿಕ್‌ಬಜ್‌ನಲ್ಲಿ ಹೇಳಿದ್ದಾರೆ.
ಅಂಪೈರ್ ಗಳು ತಮ್ಮ ಕೆಲಸವನ್ನು ಮಾಡಲಿ. ಈ ಪ್ರಾಮಾಣಿಕತೆಯನ್ನು ಅರ್ಥಮಾಡಿಕೊಳ್ಳಲು ನನಗೆ ಆಗಲಿಲ್ಲ. ಅಲ್ಲಿ ಚೆಂಡು ಬ್ಯಾಟ್‌ಗೆ ತಾಗಿದ್ದರೆ ಅದು ಅರ್ಥವಾಗುತ್ತಿತ್ತು ಏಕೆಂದರೆ ಅದು ಆಟದ ಉತ್ಸಾಹದಲ್ಲಿರುತ್ತದೆ. ಆದರೆ ಚೆಂಡು ಬ್ಯಾಟ್‌ಗೆ ತಾಗಲ್ಲ, ಅಂಪೈರ್ ಕೂಡ ಈ ಬಗ್ಗೆ ಖಚಿತವಾಗಿರಲಿಲ್ಲ, ನೀವು ಇದ್ದಕ್ಕಿಂದ್ದಂತೆ ಹೊರ ನಡೆವುದು ತಪ್ಪು ಎಂದು ಸೆಹ್ವಾಗ್ ಹೇಳಿದ್ದಾರೆ.
ಸಿಎಸ್‌ಕೆ ವಿರುದ್ಧ ಆಡಲು ಸಜ್ಜು
ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯ ಸೋಲು ಅನುಭವಿಸಿದ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ಸಿಎಸ್‌ಕೆ ವಿರುದ್ಧ ಆಡಲಿದೆ. ಶುಕ್ರವಾರ ಚೆಪಾಕ್‌ನಲ್ಲಿ ಈ ಪಂದ್ಯ ನಡೆಯಲಿದೆ. ಎರಡೂ ತಂಡಗಳು ಈಗಾಗಲೇ ಪಂದ್ಯಾವಳಿಯಿಂದ ಬಹುತೇಕ ಹೊರ ಬೀಳುವ ಹಂತದಲ್ಲಿವೆ. ಶುಕ್ರವಾರ ನಡೆಯುವ ಪಂದ್ಯದಲ್ಲಿ ಸೋಲುವ ತಂಡದ ಪ್ಲೇಆಫ್ ಕನಸು ನುಚ್ಚು ನೂರಾಗಲಿದೆ.












Click it and Unblock the Notifications