Virender Sehwag: ವಿರೇಂದ್ರ ಸೆಹ್ವಾಗ್ ಬಾಳಲ್ಲಿ ಬಿರುಗಾಳಿ! ಪತ್ನಿಯಿಂದ ವಿಚ್ಛೇದನ
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಮತ್ತು ಅವರ ಪತ್ನಿ ಆರತಿ ಅಹ್ಲಾವತ್ ವಿಚ್ಛೇದನದ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಎರಡು ದಶಕಗಳ ದಾಂಪತ್ಯವನ್ನು ಕೊನೆಗೊಳಿಸಲು ಇಬ್ಬರೂ ನಿರ್ಧರಿಸಿದ್ದು ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಯಾಗಿದೆ. 2004ರಲ್ಲಿ ವಿರೇಂದ್ರ ಸೆಹ್ವಾಗ್ ಆರತಿ ಅಹ್ಲಾವತ್‌ರನ್ನು ಮದುವೆಯಾಗಿದ್ದರು.
ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ ಬಳಿಕ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ವರದಿ ಬಂದಿದೆ. ಕುಟುಂಬದ ಮೂಲಗಳ ಪ್ರಕಾರ ಹಲವು ತಿಂಗಳಿನಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದು ವಿಚ್ಛೇದನ ಪಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

2004ರಲ್ಲಿ ವಿರೇಂದ್ರ ಸೆಹ್ವಾಗ್ ಆರತಿಯವರನ್ನು ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿವಾಸದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಸೆಹ್ವಾಗ್ ಅದ್ಭುತ ಕ್ರಿಕೆಟ್ ಜೀವನದ ಜೊತೆ ಕುಟುಂಬಕ್ಕೂ ಸಮಯ ನೀಡುವ ಮೂಲಕ ಪತ್ನಿ ಜೊತೆ ಸಂತೋಷವಾಗಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನುವ ಸುಳಿವು ಸಿಕ್ಕಿದೆ.
ದಂಪತಿಗೆ ಇಬ್ಬರು ಮಕ್ಕಳು
ವಿರೇಂದ್ರ ಸೆಹ್ವಾಗ್ ಮತ್ತು ಆರತಿಯವರಿಗೆ ಇಬ್ಬರು ಮಕ್ಕಳಿದ್ದಾರೆ. 2007ರಲ್ಲಿ ಆರ್ಯವೀರ್ ಜನಿಸಿದರೆ, 2010ರಲ್ಲಿ ಜನಿಸಿದ ಮಗುವಿಗೆ ವೇದಾಂತ್ ಎಂದು ಹೆಸರಿಟ್ಟಿದ್ದಾರೆ. ಈ ಬಾರಿ ದೀಪಾವಳಿ ಹಬ್ಬದ ಸಮಯದಲ್ಲಿ ವಿರೇಂದ್ರ ಸೆಹ್ವಾಗ್ ಮಕ್ಕಳು ಮತ್ತು ತಮ್ಮ ತಾಯಿ ಜೊತೆಗಿರುವ ಫೋಟೊವನ್ನು ಹಂಚಿಕೊಂಡಿದ್ದರು ಅದರಲ್ಲಿ ಪತ್ನಿಯ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ.
ಯಾವುದೇ ವಿಷಯಕ್ಕಾದರೂ ವಿರೇಂದ್ರ ಸೆಹ್ವಾಗ್ ಸೋಷಿಯಲ್ ಮೀಡಿಯಾದಲ್ಲಿ ತಕ್ಷಣವೇ ಪ್ರತಿಕ್ರಿಯೆ ನೀಡುತ್ತಾರೆ. ತಮ್ಮದೇ ಶೈಲಿ ಹಾಸ್ಯಭರಿತ ಉತ್ತರ ನೀಡುವುದರಲ್ಲಿ ಅವರು ಸಿದ್ಧಹಸ್ತರು ಕೂಡ ಇದೇ ಕಾರಣಕ್ಕೆ ಅವರ ಹಲವು ಟ್ವೀಟ್‌ಗಳು ವೈರಲ್ ಆಗಿದ್ದವು. ಈಗ ಅವರ ವಿಚ್ಛೇದನದ ಬಗ್ಗೆ ಹಲವು ವದಂತಿಗಳು ಇದ್ದಾಗಲೂ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.
ಸೆಹ್ವಾಗ್ ಎರಡು ವಾರಗಳ ಹಿಂದೆ ಪಾಲಕ್ಕಾಡ್‌ನಲ್ಲಿರುವ ವಿಶ್ವ ನಾಗಯಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು, ಈ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲೂ ಕೂಡ ಆರತಿ ಅವರು ಜೊತೆಗೆ ಇಲ್ಲದೇ ಇರುವುದು ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ.
ಡಿಸೆಂಬರ್ 16, 1980 ರಂದು ನವದೆಹಲಿಯಲ್ಲಿ ಜನಿಸಿದ ಆರತಿ ಅಹ್ಲಾವತ್, ಸಾರ್ವಜನಿಕ ಜೀವನದಿಂದ ದೂರವೇ ಉಳಿದಿದ್ದಾರೆ. ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ ಪೂರ್ಣಗೊಳಿಸಿದ್ದಾರೆ. ಗಂಡ ಖ್ಯಾತ ಕ್ರಿಕೆಟಿಗನಾಗಿದ್ದರೂ ಆರತಿ ಸಾರ್ವಜನಿಕ ಜೀವನದಿಂದ ದೂರ ಉಳಿದು ಸಂಸಾರವನ್ನು ನಿಭಾಯಿಸಿದ್ದರು.












Click it and Unblock the Notifications