ದೆಹಲಿ ಪ್ರೀಮಿಯರ್ ಲೀಗ್: ಹರಾಜು ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ ಮಗ
ದೆಹಲಿ ಪ್ರೀಮಿಯರ್ ಲೀಗ್ 2024ರಲ್ಲಿ ಆರಂಭವಾಯಿತು. ಈಗ ಎರಡನೇ ಸೀಸನ್‌ಗೆ ಭರದ ಸಿದ್ಧತೆಗಳು ಆರಂಭವಾಗಿವೆ. ಈ ಬಾರಿಯ ಡಿಪಿಎಲ್ ಹರಾಜು ಪ್ರಕ್ರಿಯೆ ಜುಲೈ 5ರಂದು ನಡೆಯಲಿದೆ. ಶನಿವಾರ ನಡೆಯಲಿರುವ ಹರಾಜು ಪ್ರಕ್ರಿಯೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ವಿರಾಟ್ ಕೊಹ್ಲಿ ಅವರ ಅಣ್ಣನ ಮಗನ ಹೆಸರು ಇದೆ. ಇನ್ನು ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಮಗ ಸಹ ಈ ಬಾರಿ ಹರಾಜಿನ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಪ್ರೀಮಿಯರ್ ಲೀಗ್‌ನಿಂದ ಈಗಾಗಲೇ ಸ್ಟಾರ್ ಆಟಗಾರರು ಬೆಳಕಿಗೆ ಬಂದಿದ್ದಾರೆ. ಇದೇ ಆಟಗಾರರ ಸಾಲಿಗೆ ಸೇರ್ಪಡೆಗೊಳ್ಳಲು ವಿರಾಟ್ ಕೊಹ್ಲಿಯ ಅಣ್ಣಮ ಮಗ ಆರ್ಯವೀರ್ ಕೊಹ್ಲಿ ಹರಾಜು ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರು ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್ ರಾಜಕುಮಾರ್ ಶರ್ಮಾ ಅವರ ಗರಡಿಯಲ್ಲಿ ಕ್ರಿಕೆಟ್ ವ್ಯಾಸಂಗ ಮಾಡುತ್ತಿದ್ದಾರೆ.

ಆರ್ಯವೀರ್ ಅವರನ್ನು ಈ ಹಿಂದೆ ದೆಹಲಿಯ 16 ವರ್ಷದೊಳಗಿನ ತಂಡಕ್ಕೂ ನಾಮನಿರ್ದೇಶನ ಮಾಡಲಾಗಿತ್ತು. ಇವರು 30 ತಂಡದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದರು. ಆರ್ಯವೀರ್ ತಮ್ಮ ಲೆಗ್ ಸ್ಪಿನ್ ದಾಳಿಯ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲರು. ಇವರನ್ನು ಸಿ ಕ್ಯಾಟಗರಿಯಲ್ಲಿ ಇರಿಸಲಾಗಿದೆ.
ಸೆಹ್ವಾಗ್ ಮಗ ಸಹ ಹರಾಜಿನ ಅಂಗಳದಲ್ಲಿ
ದೆಹಲಿ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ರೋಚಕತೆ ಹುಟ್ಟಿಸಲು ಕಾರಣವಾಗಿದ್ದು ವೀರೇಂದ್ರ ಸೆಹ್ವಾಗ್ ಅವರ ಮಗ, ಆರ್ಯವೀರ್ ಸೆಹ್ವಾಗ್ ಹರಾಜಿನ ಅಂಗಳದಲ್ಲಿ ಕಾಣಿಸಿಕೊಳ್ಳುವ ದೊಡ್ಡ ಹೆಸರು. ಇವರು ಈಗಾಗಲೇ ದೆಹಲಿ ಅಂಡರ್ 19 ತಂಡಕ್ಕಾಗಿ ಆಡಿದ ಅನುಭವ ಹೊಂದಿದ್ದಾರೆ. ಇವರು ಈ ಹಿಂದೆ ಮೇಘಾಲಯ ವಿರುದ್ಧದ ಪಂದ್ಯದಲ್ಲಿ 3 ರನ್‌ಗಳಿಂದ ತ್ರಿಶತಕ ವಂಚಿತಾಗಿದ್ದರು. ಇನ್ನು ಇವರ ಸಹೋದರ ವೇದಾಂತ್ ಸೆಹ್ವಾಗ್ ಅವರನ್ನು ಬಿ ಕ್ಯಾಟಗಿರಿಯಲ್ಲಿ ಇರಿಸಾಲಗಿದೆ.

ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು ಆರು ತಂಡಗಳು ಆಡಲಿವೆ. ನಾರ್ತ್ ದೆಹಲಿ ಸ್ಟ್ರೈಕರ್ಸ್, ವೆಸ್ಟ್ ದೆಹಲಿ ಲಯನ್ಸ್, ಸೌತ್ ದೆಹಲಿ ಸೂಪರ್ ಸ್ಟಾರ್, ಪುರಾನಿ ದೆಹಲಿ, ಈಸ್ಟ್ ದೆಹಲಿ ರೈಡರ್ಸ್ ಎಂಬ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ. ಕಳೆದ ಆವೃತ್ತಿಯಲ್ಲಿ ಈಸ್ಟ್ ದೆಹಲಿ ರೈಡರ್ಸ್ ತಂಡದ 3 ರನ್‌ಗಳಿಂದ ಸೌತ್ ದೆಹಲಿ ಸೂಪರ್ ಸ್ಟಾರ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದರೆ ಈ ಬಾರಿಯ ಡಿಪಿಎಲ್‌ನಲ್ಲಿ ಇನ್ನು ಎರಡು ತಂಡಗಳು ಹೊಸದಾಗಿ ಕಾಣಿಸಿಕೊಳ್ಳಲಿವೆ.
ಕಳೆದ ಆವೃತ್ತಿಯಲ್ಲಿ ಆಡಿದ ಪ್ರಿಯಾಂಶ್ ಆರ್ಯ ಹಾಗೂ ದಿಗ್ವೇಶ್ ರಾಠಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಪ್ರಿಯಾಂಶ್ ಆರು ಎಸೆತಗಳಲ್ಲಿ ಆರು ಸಿಕ್ಸರ್ ಬಾರಿಸಿ ಅಬ್ಬರಿಸಿದ್ದರು. ಅಲ್ಲದೆ 50 ಎಸೆತಗಳಲ್ಲಿ 120 ರನ್ ಸಿಡಿಸಿ ಆರ್ಭಟಿಸಿದ್ದರು. ಈ ಇಬ್ಬರೂ ಆಟಗಾರರು ಐಪಿಎಲ್‌ನಲ್ಲಿ ಮಿಂಚಿ ಸದ್ದು ಮಾಡಿದ್ದಾರೆ.












Click it and Unblock the Notifications