Virat Kohli: ಮಗಳನ್ನು ಕ್ರಿಕೆಟರ್ ಮಾಡುವ ಬಗ್ಗೆ ಕೊಹ್ಲಿ ಹೇಳಿದ್ದೇನು? ಹಲವು ಮಾಹಿತಿ ಹಂಚಿಕೊಂಡ ವಿರಾಟ್
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯಕ್ಕಾಗಿ ಆರ್ ಸಿಬಿ ಆಟಗಾರರು ಸಜ್ಜಾಗುತ್ತಿದ್ದಾರೆ. ವಿರಾಟ್ ಕೊಹ್ಲಿ ಕೂಡ ಕಠಿಣ ಅಭ್ಯಾಸ ಮಾಡುತ್ತಿದ್ದು, ಆರ್ ಸಿಬಿ ತಂಡವನ್ನು ಪ್ಲೇಆಫ್‌ಗೆ ಕರೆದೊಯ್ಯುವ ವಿಶ್ವಾಸದಲ್ಲಿದ್ದಾರೆ. ಈ ನಡುವೆಯೇ ಮಿ. ನಾಗ್ಸ್ (ಡ್ಯಾನಿಶ್ ಸೇಠ್) ಜೊತೆಗೆ ವಿಶೇಷ ಸಂದರ್ಶನ ನೀಡಿದ್ದು, ಸಖತ್ ವೈರಲ್ ಆಗುತ್ತಿದೆ.
ಡ್ಯಾನಿಶ್ ಸೇಠ್ ಮಿಸ್ಟರ್ ನಾಗ್ಸ್ ಹೆಸರಿನಲ್ಲಿ ತಂಡದ ಆಟಗಾರರನ್ನು ನಗಿಸುವ, ತಮಾಷೆ ಮಾಡುವುದಕ್ಕೆ ಸಖತ್ ಹೆಸರು ಮಾಡಿದ್ದಾರೆ. ಆಗಾಗ್ಗೆ ಆಟಗಾರರನ್ನು ಸಂದರ್ಶನ ಮಾಡಿ ಕಾಲೆಳೆಯುವುದನ್ನು ಕೂಡ ಮಾಡುತ್ತಾರೆ.

ಈಗ ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಮುನ್ನ ವಿರಾಟ್ ಕೊಹ್ಲಿ ಜೊತೆ ಸಂದರ್ಶನ ಮಾಡಿದ್ದಾರೆ. ಆರ್‌ಸಿಬಿ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಅದೇ ವೀಡಿಯೊವನ್ನು ಪೋಸ್ಟ್ ಮಾಡಿದ್ದು ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.
ಸುನಿಲ್ ಹೆಸರಿನಲ್ಲಿ ಕಾಲೆಳೆದ ನಾಗ್ಸ್
ಕೊಹ್ಲಿ ಕಾಮನ್ ಮ್ಯಾನ್, ಕಾಮೆಂಟೇಟರ್ ಅಲ್ಲವಾದ್ದರಿಂದ ನಿಮ್ಮೊಂದಿಗೆ ಸ್ನೇಹವಿದೆಯೇ ಎಂದು ನಾಗ್ಸ್ ಕೇಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ.
ನಿಮ್ಮ ಸ್ನೇಹಿತ ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ ಎಂದು ನಾಗ್ಸ್ ಹೇಳುತ್ತಿದ್ದಂತೆ ಯಾರು ಎಂದು ಕೊಹ್ಲಿ ಪ್ರಶ್ನೆ ಮಾಡುತ್ತಾರೆ, ಆಗ ನಾಗ್ಸ್ "ಸುನಿಲ್" ಎಂದು ಉತ್ತರಿಸುತ್ತಾರೆ. ಬಳಿಕ ಕೊಹ್ಲಿ ಗಂಭೀರವಾಗುತ್ತಾರೆ ಬಳಿಕ ನಾಗ್ಸ್ ಸುನಿಲ್ ಛೆಟ್ರಿ ಎಂದು ಹೇಳುತ್ತಾರೆ. ನಂತರ ಕೊಹ್ಲಿ ನಕ್ಕು, ತಮ್ಮ ನಿವೃತ್ತಿಯನ್ನು ಘೋಷಿಸುವ ಮೊದಲು ಸುನಿಲ್ ಛೆಟ್ರಿ ನನಗೆ ಮೆಸೇಜ್ ಮಾಡಿದ್ದರು, ನಾವಿಬ್ಬರೂ ಉತ್ತಮ ಗೆಳೆಯರು ಎಂದು ಹೇಳುತ್ತಾರೆ.
ಸುನಿಲ್ ಎಂದು ಕರೆದಾಗ ಇದು ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಎನ್ನುತ್ತಾರೆ ಎನ್ನಲಾಗಿತ್ತು. ಕೊಹ್ಲಿಯನ್ನು ಟೀಕಿಸಿದ್ದ ಸುನಿಲ್ ಗವಾಸ್ಕರ್ ಅವರಿಗೆ ಕೊಹ್ಲಿ ಕೂಡ ತಿರುಗೇಟು ಕೊಟ್ಟಿದ್ದರು, ಇದು ಸಾಕಷ್ಟು ಸುದ್ದಿ ಮಾಡಿತ್ತು.
ವಾಮಿಕಾರನ್ನು ಕ್ರಿಕೆಟರ್ ಮಾಡ್ತೀರಾ?
ಬಳಿಕ ನಾಗ್ಸ್ ಮಗಳು ವಾಮಿಕಾ ಬಗ್ಗೆ ಕೇಳುತ್ತಾರೆ. ಒಂದು ಹೆಣ್ಣು, ಒಂದು ಗಂಡು ಮಗು ಇದ್ದು, ಒಬ್ಬರು ಐಪಿಎಲ್ ಆಡಲು ಮತ್ತೊಬ್ಬರು ಮಹಿಳಾ ಪ್ರೀಮಿಯರ್ ಲೀಗ್ ಆಡಲು ಎಂದು ತಮಾಷೆ ಮಾಡುತ್ತಾರೆ.
ವಾಮಿಕಾ ಬಗ್ಗೆ ಉತ್ತರ ನೀಡಿದ ವಿರಾಟ್ ಕೊಹ್ಲಿ, "ವಾಮಿಕಾ ಬ್ಯಾಟ್ ಜೊತೆ ಆಟವಾಡುತ್ತಿದ್ದಾಳೆ, ಆದರೆ ಆಕೆ ಏನಾಗಬೇಕು ಎನ್ನುವುದನ್ನು ಆಕೆಯೇ ನಿರ್ಧರಿಸಬೇಕು, ಅದು ಅವಳ ಆಯ್ಕೆ" ಎಂದು ಹೇಳುತ್ತಾರೆ.












Click it and Unblock the Notifications