Virat Kohli: RCB vs LSG ಪಂದ್ಯದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ವಿರಾಟ್ ಕೊಹ್ಲಿ

ಐಪಿಎಲ್ 2025ರ ಕೊನೆಯ ಲೀಗ್ ಪಂದ್ಯ ಮಂಗಳವಾರ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಲಕ್ನೋದ ಎಕಾನ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆಯಲು ಆರ್ ಸಿಬಿ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಗಮನವಿದೆ. ಈ ಪಂದ್ಯದಲ್ಲಿ ಕೊಹ್ಲಿ ಎರಡು ಪ್ರಮುಖ ದಾಖಲೆಗಳನ್ನು ಬರೆಯುವ ಸನಿಹದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಈ ಬಾರಿ ಐಪಿಎಲ್ ನಲ್ಲಿ ಈವರೆಗು ಆಡಿರುವ 12 ಪಂದ್ಯಗಳಲ್ಲಿ 548 ರನ್ ಗಳಿಸುವ ಮೂಲಕ ಆರ್ ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದು ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಈಗ ಆರ್ ಸಿಬಿ ಪರವಾಗಿ ಹೊಸ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. 18 ವರ್ಷದಿಂದಲೂ ಆರ್ ಸಿಬಿ ತಂಡಕ್ಕಾಗಿ 9000 ರನ್ ಗಳಿಸುವ ಸನಿಹದಲ್ಲಿದ್ದಾರೆ.

virat kohli set to create two record rcb vs lsg must win match ipl 2025

ಈಗ ಸ್ಥಗಿತಗೊಂಡಿರುವ ಚಾಂಪಿಯನ್ಸ್ ಲೀಗ್ ಸೇರಿದಂತೆ ಆರ್ ಸಿಬಿಗಾಗಿ 270 ಪಂದ್ಯ ಆಡಿರುವ ಅವರು 8,976 ರನ್ ಗಳಿಸಿದ್ದಾರೆ.ಇದರಲ್ಲಿ ಐಪಿಎಲ್ ನಲ್ಲಿ 8552 ರನ್ ಗಳಿಸಿದ್ದರೆ, ಚಾಂಪಿಯನ್ಸ್ ಲೀಗ್ ಟಿ20 ಯಲ್ಲಿ 424 ರನ್ ಗಳಿಸಿದ್ದಾರೆ. ಇಂದು 24 ರನ್ ಗಳಿಸಿದರೆ 9000 ರನ್ ಪೂರೈಸಿದ ದಾಖಲೆ ಮಾಡಲಿದ್ದಾರೆ.

ಡೇವಿಡ್ ವಾರ್ನರ್ ದಾಖಲೆ ಮುರಿಯಲು ಸಜ್ಜು

ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಡೇವಿಡ್ ವಾರ್ನರ್ ಅವರ ದಾಖಲೆ ಮುರಿಯಬಹುದು. ಕೊಹ್ಲಿ ಮತ್ತು ವಾರ್ನರ್ ಐಪಿಎಲ್‌ನಲ್ಲಿ ಈವರೆಗೂ 62 ಅರ್ಧಶತಕ ಸಮಬಲ ಸಾಧಿಸಿದ್ದಾರೆ. ಇಂದು ಮತ್ತೊಂದು ಅರ್ಧಶತಕ ಗಳಿಸಿದರೆ ವಾರ್ನರ್ ದಾಖಲೆಯನ್ನು ಮುರಿದು ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ರೋಹಿತ್ ಶರ್ಮಾ 46 ಅರ್ಧಶತಕಗಳೊಂದಿಗೆ ಕೊಹ್ಲಿಗಿಂತ ಹಿಂದಿದ್ದಾರೆ. ಕೊಹ್ಲಿ ಈಗಾಗಲೇ ಈ ಆವೃತ್ತಿಯಲ್ಲಿ ಏಳು ಅರ್ಧಶತಕಗಳನ್ನು ಗಳಿಸಿದ್ದಾರೆ, ಅವರು 2016ರಲ್ಲಿ11 ಅರ್ಧಶತಕಗಳು ಮತ್ತು 2023ರಲ್ಲಿ 8 ಅರ್ಧಶತಕ ಗಳಿಸಿದ್ದು, ಇದು ಅವರ ಮೂರನೇ ಅತ್ಯುತ್ತಮ ದಾಖಲೆಯಾಗಿದೆ.

ಪ್ಲೇಆಫ್‌ಗೆ ಈಗಾಗಲೇ ಅರ್ಹತೆ ಪಡೆದಿರುವ ಆರ್‌ಸಿಬಿ, 13 ಪಂದ್ಯಗಳಲ್ಲಿ 17 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ಎಲ್‌ಎಸ್‌ಜಿ ವಿರುದ್ಧದ ಗೆಲುವು ಪಂಜಾಬ್ ಕಿಂಗ್ಸ್‌ನ ರನ್‌ ರೇಟ್‌ ಮೀರಿದರೆ ಅಗ್ರಸ್ಥಾನವನ್ನು ಪಡೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+