Virat Kohli: ಎಲ್ಲಾ ಟೀಕೆಗಳಿಗೂ ಉತ್ತರ ಕೊಟ್ಟ 'ಕಿಂಗ್ ಕೊಹ್ಲಿ'; ನಿಜವಾಯ್ತು ರೋಹಿತ್, ದ್ರಾವಿಡ್ ಭವಿಷ್ಯ
ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಜಗತ್ತಿನ ಮುಕುಟವಿಲ್ಲದ ಮಹಾರಾಜ. ಅದಕ್ಕೆ ಆತನನ್ನು ಅಭಿಮಾನಿಗಳು ಮಾತ್ರವಲ್ಲಿ ಕ್ರಿಕೆಟ್ ಪಂಡಿತರು ಕೂಡ ಕಿಂಗ್ ಕೊಹ್ಲಿ ಎಂದು ಕರೆಯುವುದು. ಆತ ಮೈದಾನಕ್ಕಿಳಿದರೆ ಸಾಕು ಹಲವು ದಾಖಲೆಗಳು ಸೃಷ್ಟಿಯಾಗುತ್ತವೆ.
ಕೊಹ್ಲಿ ತಮ್ಮ ವಿರುದ್ಧದ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ಕೊಡುತ್ತಾರೆ. ಹಲವು ಪಂದ್ಯಗಳಲ್ಲಿ ಕೊಹ್ಲಿ ರನ್ ಗಳಿಸದೇ ಇದ್ದಾಗ, ಆತನ ವೃತ್ತಿ ಜೀವನ ಮುಗಿಯಿತು ಎಂದು ಹಲವರು ಟೀಕಿಸುವಾಗಲೇ, ಮತ್ತೆ ಪುಟಿದು ಬಂದಿದ್ದಾರೆ.

ಕೊಹ್ಲಿ ಟಿ20 ಮಾದರಿಗೆ ಸರಿ ಹೊಂದಲ್ಲ ನಿಧಾನವಾಗಿ ಆಡುತ್ತಾರೆ ಎನ್ನವ ಮಾತು ಕೇಳಿ ಬಂದಾಗ ಅದಕ್ಕೂ ಬ್ಯಾಟ್ ಮೂಲಕ ಉತ್ತರ ಕೊಟ್ಟಿದ್ದರು. ಸ್ಪಿನ್ ವಿರುದ್ಧ ಚನ್ನಾಗಿ ಆಡಲ್ಲ ಎಂದಾಗ ಐಪಿಎಲ್‌ನಲ್ಲಿ ಸ್ಪೀಪ್ ಹೊಡೆತಗಳನ್ನು ಬಾರಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದರು.
ಫೈನಲ್‌ನಲ್ಲಿ ಆಪದ್ಭಾಂಧವನಾದ 'ಕಿಂಗ್'
ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಬಳಿಕ ಕೊಹ್ಲಿ ಈ ವಿಶ್ವಕಪ್‌ನಲ್ಲಿ ಮೊದಲ ಪಂದ್ಯದಿಂದಲೇ ಕೊಹ್ಲಿ ಅಬ್ಬರಿಸುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಕೊಹ್ಲಿ ಮೊದಲ ಪಂದ್ಯದಿಂದ ಫೈನಲ್‌ವರೆಗೂ ದೊಡ್ಡ ರನ್ ಗಳಿಸುವಲ್ಲಿ ವಿಫಲವಾಗಿದ್ದರು.
ಫೈನಲ್‌ವರೆಗೆ ಕೊಹ್ಲಿ ಈ ವಿಶ್ವಕಪ್‌ನಲ್ಲಿ ಗಳಿಸಿದ್ದ ಕೇವಲ 75 ರನ್ ಮಾತ್ರ. ಆದರೆ ಫೈನಲ್ ಪಂದ್ಯದಲ್ಲಿ 76 ರನ್ ಗಳಿಸುವ ಮೂಲಕ ಭಾರತಕ್ಕೆ ಆಪದ್ಭಾಂದವನಾದರು. ಭಾರತ 34 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಕೊಹ್ಲಿ ಕ್ರೀಸ್ ಕಚ್ಚಿ ಆಡಿದರು. ಅಂತಾರಾಷ್ಟ್ರೀಯ ಟಿ20 ಶತಕ ಗಳಿಸಿದ ಅವರು, ಭಾರತ 176 ರನ್ ಕಲೆಹಾಕಲು ಪ್ರಮುಖ ಕೊಡುಗೆ ನೀಡಿದರು.
ನಿಜವಾಯ್ತು ರೋಹಿತ್, ದ್ರಾವಿಡ್ ಭವಿಷ್ಯ
ಕೊಹ್ಲಿ ಸತತವಾಗಿ ವೈಫಲ್ಯ ಅನುಭವಿಸಿದರೂ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಕೊಹ್ಲಿ ಮೇಲೆ ನಂಬಿಕೆ ಇಟ್ಟಿದ್ದರು. ಕೊಹ್ಲಿ ಫೈನಲ್‌ಗಾಗಿ ತಮ್ಮ ಶಕ್ತಿಯನ್ನು ಉಳಿಸಿಕೊಂಡಿದ್ದಾರೆ ಎಂದು ರೋಹಿತ್ ಹೇಳಿದ್ದರು. ದ್ರಾವಿಡ್ ಕೂಡ ಫೈನಲ್‌ನಲ್ಲಿ ಕೊಹ್ಲಿಯಿಂದ ದೊಡ್ಡ ಇನ್ನಿಂಗ್ಸ್ ಬರುತ್ತದೆ ಎಂದು ಹೇಳಿದ್ದರು. ಕೋಟ್ಯಂತರ ಭಾರತೀಯರ ಹಾರೈಕೆ ಕೂಡ ಅದೇ ಆಗಿತ್ತು. ಕೊನೆಗೂ ಎಲ್ಲರ ನಿರೀಕ್ಷೆ ನಿಜವಾಗಿದೆ. ಭಾರತ ವಿಶ್ವಕಪ್ ಗೆದ್ದರೆ ಕೊಹ್ಲಿ ಇನ್ನಿಂಗ್ಸ್ ಕೂಡ ಸಾರ್ಥಕವಾಗಲಿದೆ.












Click it and Unblock the Notifications