Virat Kohli: ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಗೆ ಅಜಿತ್ ಅಗರ್ಕರ್ ಕಾರಣನಾ? ವಾಸೀಮ್ ಜಾಫರ್ ನೀಡಿದ ಸುಳಿವು ಭಾರಿ ವೈರಲ್

Virat Kohli: ಭಾರತೀಯ ಕ್ರಿಕೆಟ್‌ನ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಶಾಕ್ ನೀಡಿದ್ದರು. ಅವರ ಈ ದಿಢೀರ್ ನಿರ್ಧಾರಕ್ಕೆ ಅಜಿತ್ ಅಗರ್ಕರ್ ಅವರೇ ಕಾರಣ ಎನ್ನುವ ಆರೋಪಗಳು ಇಂದಿಗೂ ಕೇಳಿಬರುತ್ತಿವೆ. ಇದೀಗ ಈ ಕುರಿತು ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ವಾಸೀಮ್ ಜಾಫರ್ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

2025ರ ಐಪಿಎಲ್ ವೇಳೆ ರೋಹಿತ್ ಶರ್ಮಾ ತಮ್ಮ ದಿಢೀರ್ ನಿವೃತ್ತಿಯ ತೀರ್ಮಾನವನ್ನು ಪ್ರಕಟಿಸಿದರೆ, ಅದಾಗಿ ಕೆಲವೇ ದಿನಗಳಲ್ಲಿ ವಿರಾಟ್ ಕೊಹ್ಲಿ ಕೂಡ ಅದೇ ಹಾದಿ ತುಳಿದರು. ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನವೇ ಕೊಹ್ಲಿ ಈ ನಿರ್ಧಾರ ಕೈಗೊಂಡಿದ್ದು, ಅಭಿಮಾನಿಗಳು ಮತ್ತು ಕ್ರಿಕೆಟ್ ವಲಯದಲ್ಲಿ ಭಾರಿ ಅಚ್ಚರಿ ಮೂಡಿಸಿತ್ತು.

Virat Kohli Retirement Was Ajit Agarkar Responsible Wasim Jaffer Makes Big Revelation Huge Viral

ಅಗರ್ಕರ್ ವಿರುದ್ಧ ಟೀಕೆ

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಈ ದಿಢೀರ್ ನಿವೃತ್ತಿಯ ನಿರ್ಧಾರದಲ್ಲಿ ಆಗಿನ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಪಾತ್ರವೂ ಇರಬಹುದು ಎಂಬ ಆರೋಪಗಳು ಕೇಳಿಬಂದವು. ಅಲ್ಲದೆ ಅಗರ್ಕರ್ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದವು.

ಕೊಹ್ಲಿ ನಿವೃತ್ತಿ ಕುರಿತು ವಾಸೀಮ್ ಜಾಫರ್ ಹೊಸ ಬಾಂಬ್..

ಇದೀಗ ಭಾರತೀಯ ಕ್ರಿಕೆಟರ್ ವಾಸೀಮ್ ಜಾಫರ್ ಟೆಸ್ಟ್ ಕ್ರಿಕೆಟ್‌ನಿಂದ ಕೊಹ್ಲಿ ಅವರ ನಿವೃತ್ತಿಯ ಕುರಿತು ಬೋಲ್ಡ್ ಹೇಳಿಕೆಯೊಂದನ್ನು ನೀಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಕೊಹ್ಲಿ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದು, ಆ ಕಹಿ ಅನುಭವ ಹಾಗೂ ಬೇಸರದಿಂದಲೇ ಕೊಹ್ಲಿ ನಿವೃತ್ತಿ ಪಡೆದರು ಎಂದು ಸುಳಿವು ನೀಡಿದ್ದಾರೆ.

ವಾಸೀಮ್ ಜಾಫರ್ ಹೇಳಿದ್ದೇನು?

'ವಿರಾಟ್ ಅವರನ್ನು ನಡೆಸಿಕೊಂಡ ರೀತಿಯಿಂದಾಗಿ ಅವರಿಗೆ ಸ್ವಲ್ಪ ಕಹಿ ಅನುಭವ ಅಥವಾ ಬೇಸರವಾಗಿದ್ದಂತೆ ಕಾಣುತ್ತಿತ್ತು. ವಿರಾಟ್ ಅವರಂತಹ ಆಟಗಾರ ಜನರನ್ನು ಮೈದಾನಕ್ಕೆ ಸೆಳೆಯುತ್ತಾರೆ. ಅವರಿಗೆ ಅಷ್ಟೊಂದು ಅಭಿಮಾನಿಗಳ ಬಳಗವಿದೆ. ಅವರು ಖಂಡಿತವಾಗಿಯೂ ಇನ್ನು ಹೆಚ್ಚಿನ ಟೆಸ್ಟ್ ಕ್ರಿಕೆಟ್ ಆಡಬಹುದಿತ್ತು. ವಿರಾಟ್ ಬಾಯಿಯಿಂದಲೇ ವಿಷಯ ಹೊರಬರುವವರೆಗೂ ನಮಗೆ ನಿಜಾಂಶ ತಿಳಿಯುವುದಿಲ್ಲ,' ಎಂದು ಹೇಳಿದರು.

ವಿರಾಟ್ ಕೊಹ್ಲಿ ಸಾಧನೆಗಳು

ವಿರಾಟ್ ಕೊಹ್ಲಿ ಅವರು 125 ಟೆಸ್ಟ್ ಪಂದ್ಯಗಳನ್ನು ಪೂರ್ಣಗೊಳಿಸಲು ಕೇವಲ ಎರಡು ಪಂದ್ಯಗಳಷ್ಟೇ ಬಾಕಿ ಇತ್ತು. ಅದನ್ನು ತಲುಪಿದ್ದರೆ ಅವರು ಆಡಿದ ಪಂದ್ಯಗಳ ಸಂಖ್ಯೆಯಲ್ಲಿ ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ಸರಿಗಟ್ಟುತ್ತಿದ್ದರು. ಅಲ್ಲದೆ, ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲಿಗಲ್ಲು ತಲುಪಲು ಅವರಿಗೆ ಕೇವಲ 770 ರನ್‌ಗಳ ಅಗತ್ಯವಿತ್ತು.

ಇದನ್ನು ಸಾಧಿಸಿದ್ದರೆ ಅವರು ಗವಾಸ್ಕರ್, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ನಂತರ ಈ ಅಪರೂಪದ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಎನಿಸಿಕೊಳ್ಳುತ್ತಿದ್ದರು. ಜೊತೆಗೆ, ಇನ್ನು ಕೇವಲ ಐದು ಶತಕಗಳನ್ನು ಬಾರಿಸಿದ್ದರೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 35 ಶತಕಗಳನ್ನು ಪೂರೈಸಿದ ವಿಶ್ವದ ಎಂಟನೇ ಬ್ಯಾಟರ್ ಎನಿಸಿಕೊಳ್ಳುತ್ತಿದ್ದರು.

ವಿರಾಟ್‌ ಕೊಹ್ಲಿ ಅವರು 2025ರ ಆರಂಭದಲ್ಲಿ ನಡೆದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತದ ಪರ ತಮ್ಮ ಕೊನೆಯ ಸರಣಿಯನ್ನು ಆಡಿದ್ದರು. ಅಲ್ಲಿ ಅವರು ಐದು ಟೆಸ್ಟ್ ಪಂದ್ಯಗಳಲ್ಲಿ 23.75ರ ಸರಾಸರಿಯಲ್ಲಿ ಕೇವಲ 190 ರನ್‌ಗಳನ್ನು ಗಳಿಸಲಷ್ಟೇ ಶಕ್ತರಾಗಿದ್ದರು.

ಬಾಕಿ ಉಳಿದ ಅಪರೂಪದ ಮೈಲಿಗಲ್ಲುಗಳು

* ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಹಲವು ಪ್ರಮುಖ ದಾಖಲೆಗಳ ಹೊಸ್ತಿಲಲ್ಲಿದ್ದಾಗ ಈ ನಿವೃತ್ತಿ ನಿರ್ಧಾರ ಬಂದಿತ್ತು. ತಮ್ಮ 125ನೇ ಟೆಸ್ಟ್ ಪಂದ್ಯವನ್ನು ಪೂರೈಸಲು ಅವರಿಗೆ ಇನ್ನು ಕೇವಲ 2 ಪಂದ್ಯಗಳಷ್ಟೇ ಬಾಕಿ ಇತ್ತು (ಇದನ್ನು ಸಾಧಿಸಿದ್ದರೆ ಅವರು ಸುನಿಲ್ ಗವಾಸ್ಕರ್ ಅವರ ಸಾಧನೆಯನ್ನು ಸರಿದೂಗಿಸುತ್ತಿದ್ದರು).

* 10,000 ಟೆಸ್ಟ್ ರನ್: ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಲು ಕೊಹ್ಲಿಗೆ ಕೇವಲ 770 ರನ್‌ಗಳ ಅಗತ್ಯವಿತ್ತು. ಈ ಸಾಧನೆ ಮಾಡಿದ್ದರೆ ಅವರು ಗವಾಸ್ಕರ್, ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ನಂತರದ 4ನೇ ಭಾರತೀಯ ಎನಿಸಿಕೊಳ್ಳುತ್ತಿದ್ದರು.

* 35 ಟೆಸ್ಟ್ ಶತಕಗಳು: ಇನ್ನು ಕೇವಲ 5 ಶತಕಗಳನ್ನು ಬಾರಿಸಿದ್ದರೆ ಟೆಸ್ಟ್ ಇತಿಹಾಸದಲ್ಲಿ 35 ಶತಕ ಗಳಿಸಿದ ವಿಶ್ವದ 8ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು. ಒಟ್ಟಿನಲ್ಲಿ ಇದೀಗ ವಾಸಿಮ್ ಜಾಫರ್ ನೀಡಿರುವ ಹೇಳಿಕೆಯು ಕೊಹ್ಲಿ ಅಭಿಮಾನಿಗಳಲ್ಲಿ ಅಗರ್ಕರ್ ವಿರುದ್ಧ ಹಲವು ಅನುಮಾನಗಳು ಮೂಡಿವೆ ಎನ್ನಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+