ವಿರಾಟ್ ಕೊಹ್ಲಿ ಬೆನ್ನಿಗೆ ಚೂರಿ, 36 ವರ್ಷದ ಆಟಗಾರನ ನಿವೃತ್ತಿ ಸುತ್ತ ಅನುಮಾನದ ಹುತ್ತ... Virat Kohli
ವಿರಾಟ್ ಕೊಹ್ಲಿ ಚನ್ನಾಗಿ ಆಡುವಾಗಲೇ ನಿವೃತ್ತಿ ಘೋಷಣೆ ಮಾಡಿರುವುದು ಯಾವ ಕಾರಣಕ್ಕೆ? ವಿರಾಟ್ ಕೊಹ್ಲಿಗೆ ದಿಢೀರ್ ಭಾರತೀಯ ಕ್ರಿಕೆಟ್ ತಂಡದಲ್ಲಿ ಶತ್ರುಗಳ ಕಾಟ ಹೆಚ್ಚಾಗಿದೆಯಾ? ಹೀಗೆಲ್ಲಾ ವಿರಾಟ್ ಕೊಹ್ಲಿ ಟೆಸ್ಟ್ ಆಟಕ್ಕೆ ನಿವೃತ್ತಿ ಘೊಷಣೆ ಮಾಡಿದ ನಂತರ ಭಾರಿ ದೊಡ್ಡ ಬಿರುಗಾಳಿ ಎದ್ದಿದೆ. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ ಬೆನ್ನಿಗೆ ಚೂರಿ, 36 ವರ್ಷದ ಆಟಗಾರನ ನಿವೃತ್ತಿ ಸುತ್ತ ಅನುಮಾನದ ಹುತ್ತ...
ವಿರಾಟ್ ಕೊಹ್ಲಿ ಆಡುತ್ತಿರುವ ರೀತಿ ನೋಡಿದರೆ ಯಾರೇ ಆದರೂ ನಿವೃತ್ತಿ ಬಗ್ಗೆ ಮಾತನ್ನೇ ಆಡುವುದಿಲ್ಲ. ಯಾಕಂದ್ರೆ ವಿರಾಟ್ ಕೊಹ್ಲಿ ಅವರು ಇಂದಿಗೂ ಬ್ಯಾಟ್ ಹಿಡಿದು ನಿಂತುಬಿಟ್ಟರೆ ಎಲ್ಲಾ ಧೂಳ್ ಧೂಳ್ ಆಗುವುದು ಗ್ಯಾರಂಟಿ. ವಿರಾಟ್ ಕೊಹ್ಲಿ ಒಂದೊಂದು ಹೊಡೆತವನ್ನ ಕೊಡ್ತಾ ಇದ್ರೆ, ಬೌಲರ್‌ಗಳ ಎದೆಯಲ್ಲಿ ನಡುಕು ಹುಟ್ಟುತ್ತದೆ. ಇಷ್ಟೆಲ್ಲಾ ಚನ್ನಾಗಿ ಆಡ್ತಿದ್ದ ವಿರಾಟ್ ಕೊಹ್ಲಿ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದು ಯಾಕೆ? ಬೆನ್ನಿಗೆ ಚೂರಿ ಹಾಕಿದ್ರಾ? ಮುಂದೆ ಓದಿ.

ಬೆನ್ನಿಗೆ ಚೂರಿ ಹಾಕಿದ್ದು ಯಾರು?
ಕಿಂಗ್ ಅಂದ್ರೆ ಕಿಂಗ್ ವಿರಾಟ್ ಕೊಹ್ಲಿ ಕ್ರಿಕೆಟ್ ಕಿಂಗ್ ಅನ್ನೋದು ಅಭಿಮಾನಿಗಳು ಹೊಗಳಿಕೆ. ವಿರಾಟ್ ಕೊಹ್ಲಿ ಕಿಂಗ್ ರೀತಿ ಬದುಕುತ್ತಿದ್ದು, ಕ್ರಿಕೆಟ್ ಮಾತ್ರವಲ್ಲ ಬೇರೆ ಬೇರೆ ಕ್ಷೇತ್ರದಲ್ಲೂ ಈ ನಮ್ಮ ವಿರಾಟ್ ಕೊಹ್ಲಿ ಅವರಿಗೆ ದೊಡ್ಡ ಹೆಸರು ಇದೆ. ಅದರಲ್ಲೂ 2 ಮಕ್ಕಳ ತಂದೆ ಆಗಿರುವ ವಿರಾಟ್ ಕೊಹ್ಲಿ ಅವರನ್ನ ನೋಡಿ ಅದೆಷ್ಟೋ ಜನರ ಹೊಟ್ಟೆ ಕೂಡ ಉರಿದಿತ್ತು. ಭಾರತೀಯ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿಯೇ ಆಧಾರವಾಗಿ ನಿಂತಿದ್ದರು. ಆದರೆ ದಿಢೀರ್ ಅಂತಾ ಈ ನಮ್ಮ ಕಿಂಗ್ ಕೊಹ್ಲಿ ಅವರು ಆಘಾತ ನೀಡುತ್ತಿದ್ದಾರೆ. ಹಾಗಾದ್ರೆ ವಿರಾಟ್ ಕೊಹ್ಲಿ ದಿಢೀರ್ ಈ ರೀತಿ ನಿವೃತ್ತಿ ಘೋಷಣೆ ಮಾಡಲು ಕಾರಣ ಯಾರು?
ವಿರಾಟ್ ಕೊಹ್ಲಿ & ಗಂಭೀರ್ ವಾರ್?
ಹೌದು, ಭಾರತ ತಂಡದ ಮಾಜಿ ಆಟಗಾರ & ಹಾಲಿ ಇಂಡಿಯಾ ಟೀಂನ ಮುಖ್ಯ ಕೋಚ್ ಆಗಿರುವ ಗೌತಮ್ ಗಂಭೀರ್ ಹಾಗೂ ಕಿಂಗ್ ವಿರಾಟ್ ಕೊಹ್ಲಿ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಗೌತಮ್ ಗಂಭೀರ್ ಬೇಕು ಅಂತಲೇ ವಿರಾಟ್ ಕೊಹ್ಲಿ ಅವರ ವಿರುದ್ಧ ನಿಂತಿದ್ದಾರೆ ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ಶುರುವಾಗಿ, ಭಾರಿ ದೊಡ್ಡ ಬಿರುಗಾಳಿ ಎದ್ದಿದೆ. ಗೌತಮ್ ಗಂಭೀರ್ ಹೀಗೆಲ್ಲಾ ಆಡುತ್ತಿರುವ ಕಾರಣದಿಂದ ವಿರಾಟ್ ಕೊಹ್ಲಿ ಟೆಸ್ಟ್ ಆಟಕ್ಕೂ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂಬ ಆರೋಪ ಇದೀಗ ಕೇಳಿ ಬಂದಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಸಿಕ್ಕಿಲ್ಲ, ಹೀಗಾಗಿ ಅಭಿಮಾನಿಗಳ ಆಕ್ರೋಶ ಹೆಚ್ಚಾಗುತ್ತಿದೆ.












Click it and Unblock the Notifications