Virat Kohli: ಮಕ್ಕಳಿಗಾಗಿ ವಿರಾಟ್ ಕೊಹ್ಲಿ ಅಡುಗೆ ಮಾಡ್ತಾರಾ? ಆಸಕ್ತಿಕರ ಸಂಗತಿ ಹಂಚಿಕೊಂಡ ಅನುಷ್ಕಾ ಶರ್ಮಾ
ವಿರಾಟ್ ಕೊಹ್ಲಿ, ಸದ್ಯ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳ ಜೊತೆ ಲಂಡನ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಬಳಿಕ ಅವರು ದೀರ್ಘಕಾಲದ ವಿಶ್ರಾಂತಿಯಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಅವರು ಭಾರತಕ್ಕೆ ಬರುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಇಂಗ್ಲೆಂಡ್‌ನಲ್ಲಿದ್ದರೂ, ಭಾರತೀಯ ಸಂಪ್ರದಾಯವನ್ನು ಮಾತ್ರ ಮರೆತಿಲ್ಲ. ಭಜನೆ, ಧ್ಯಾನಗಳಲ್ಲಿ ತೊಡಗಿರುವ ಅನೇಕ ವಿಡಿಯೋಗಳನ್ನು ನೋಡಿದ್ದೇವೆ. ಇದೀಗ ಕೊಹ್ಲಿ ಬಗ್ಗೆ ಅನುಷ್ಕಾ ಶರ್ಮಾ ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಅನುಷ್ಕಾ ಶರ್ಮಾ ಅಕಾಯ್ ಕೊಹ್ಲಿ ಹುಟ್ಟಿದಾಗಿನಿಂದ ಕೂಡ ಲಂಡನ್‌ನಲ್ಲಿ ವಾಸ ಮಾಡುತ್ತಿದ್ದಾರೆ. ಕೊಹ್ಲಿ ಕೂಡ ಕ್ರಿಕೆಟ್‌ನಿಂದ ಬಿಡುವು ಕೊಡುತ್ತಿದ್ದಂತೆ ಲಂಡನ್‌ಗೆ ತೆರಳಿ ಪತ್ನಿ ಮಕ್ಕಳ ಜೊತೆ ಸಮಯ ಕಳೆಯುತ್ತಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದು, ತಾನು ಮತ್ತು ವಿರಾಟ್ ಮಕ್ಕಳಿಗೆ ಅಡುಗೆ ಮಾಡುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಅನುಷ್ಕಾ ಶರ್ಮಾ ಅಡುಗೆ ಮಾಡುವುದು ಹೇಗೆ ಎಂದು ಕೇಳಲು ತಮ್ಮ ತಾಯಿಗೆ ಕೂಡ ಕರೆ ಮಾಡುತ್ತಿದ್ದೆ ಎನ್ನುವ ವಿಚಾರವನ್ನು ಹೇಳಿದ್ದಾರೆ. ನಾವು ಮನೆಯಲ್ಲಿ ನಮ್ಮ ಅಮ್ಮಂದಿರು ಮಾಡುವ ರೀತಿಯ ಆಹಾರವನ್ನು ನಾವು ಮಾಡಬೇಕು, ಅಮ್ಮನ ಪಾಕವಿಧಾನವನ್ನು ಮುಂದಿನ ಪೀಳಿಗೆಗೆ ರವಾನಿಸಬೇಕು ಎನ್ನುವುದು ನಮ್ಮ ಆಸೆ ಎಂದಿದ್ದರು.
ಮಕ್ಕಳಿಗೆ ಇಬ್ಬರಿಂದಲೂ ಅಡುಗೆ
"ನಮ್ಮ ಮಾಡುತ್ತಿದ್ದ ರೀತಿಯ ಅಡುಗೆಯನ್ನು ನಾವು ಮಾಡದೇ ಇದ್ದರೆ ನಮ್ಮ ಮಕ್ಕಳಿಗೆ ಅಂತಹ ಪಾಕವಿಧಾನಗಳನ್ನು ರವಾನಿಸಲು ಆಗುವುದಿಲ್ಲ, ಇದನ್ನೇ ನಾನು ವಿರಾಟ್ ಕೊಹ್ಲಿ ಚರ್ಚಿಸಿದ್ದೇವೆ. ಆದ್ದರಿಂದ ನಾನು ಅಡುಗೆ ಮಾಡುತ್ತೇವೆ, ಕೆಲವೊಮ್ಮೆ ನನ್ನ ಪತಿ ಅಡುಗೆ ಮಾಡುತ್ತೇವೆ. ನಮ್ಮ ತಾಯಂದಿರು ಮಾಡುತ್ತಿದ್ದ ರೀತಿಯ ಅಡುಗೆ ಮಾಡಲು ನಾವಿಬ್ಬರೂ ಪ್ರಯತ್ನ ಮಾಡುತ್ತವೇ, ನಾನು ಕೆಲವೊಮ್ಮೆ ನನ್ನ ತಾಯಿಗೆ ಕರೆ ಮಾಡಿ ಅಡುಗೆ ಮಾಡಲು ಸಲಹೆ ಕೇಳುತ್ತೇನೆ, ನಮ್ಮ ಮಕ್ಕಳಿಗೆ ನಾವು ಅಮೂಲ್ಯವಾದ ಏನನ್ನೋ ನೀಡುವಂತೆ ಮುಖ್ಯವಾಗಿದೆ" ಎಂದು ಹೇಳಿದ್ದಾರೆ.
ಮಕ್ಕಳ ದಿನಚರಿ ಬಗ್ಗೆ ಹೇಳಿದ್ದೇನು?
ತಮ್ಮ ಮಕ್ಕಳ ದಿನಚರಿ ಹೇಗಿರುತ್ತದೆ ಎನ್ನುವ ಬಗ್ಗೆ ಕೂಡ ಅನುಷ್ಕಾ ಶರ್ಮಾ ಮಾತನಾಡಿದ್ದಾರೆ. ನಾನು ದಿನಚರಿಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇನೆ. ಕುಟುಂಬ ಸಮೇತ ನಾವು ಸಾಕಷ್ಟು ಪ್ರಯಾಣ ಮಾಡುತ್ತೇವೆ, ಮಕ್ಕಳಿಗೆ ಜೀವನದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ. ಆದ್ದರಿಂದ ಮಕ್ಕಳ ದಿನಚರಿಯನ್ನುನಾನು ನಿರ್ಧರಿಸುತ್ತೇನೆ. ಊಟದ ಸಮಯವನ್ನು ನಿಗದಿ ಮಾಡಿದ್ದೇನೆ. ಎಲ್ಲಿದ್ದರೂ ನಾವು ಒಂದೇ ಸಮಯದಲ್ಲಿ ಊಟ ಮಾಡುತ್ತೇವೆ. ಒಂದೇ ಸಮಯದಲ್ಲಿ ಮಲಗುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications