ಕನ್ನಡ ಮಾತನಾಡಿದ ವಿರಾಟ್ ಕೊಹ್ಲಿ, ಮಿಸ್ ಮಾಡದೆ ವಿಡಿಯೋ ನೋಡಿ!
ವಿರಾಟ್ ಕೊಹ್ಲಿ ಅವರಿಗೆ ಕನ್ನಡ ಮತ್ತು ಕರ್ನಾಟಕದ ಮೇಲೆ ಅದೆಷ್ಟು ಪ್ರೀತಿ ಇದೆ ಅಂತ ಎಲ್ಲರಿಗೂ ಗೊತ್ತು. ಅದ್ರಲ್ಲೂ ಐಪಿಎಲ್ ಟೀಂ ಆರ್‌ಸಿಬಿ ಅಭಿಮಾನಿಗಳು ವಿರಾಟ್ ಅವರ ಅಪ್ಪಟ ಅಭಿಮಾನಿಗಳು. ಕಳೆದ 15ಕ್ಕೂ ಹೆಚ್ಚು ವರ್ಷದಿಂದ ಕೊಹ್ಲಿ ಬೆಂಗಳೂರು ಟೀಂಗೆ ಆಡುತ್ತಿದ್ದಾರೆ. ಹೀಗಿದ್ದಾಗ ಸ್ವಲ್ಪ ಸ್ವಲ್ಪ ಕನ್ನಡ ಕಲಿತಿದ್ದಾರೆ. ವಿರಾಟ್ ಕೊಹ್ಲಿ ಅವರೀಗ, ಕನ್ನಡ ಭಾಷೆ ಮಾತನಾಡಿದ್ದನ್ನು ನೀವು ನೋಡಿದ್ದೀರಾ? ಹಾಗಾದರೆ ಮುಂದೆ ನೋಡಿ.
ಹೌದು ವಿರಾಟ್ ಕೊಹ್ಲಿ ಬೆಂಗಳೂರಿನ ವಿಚಾರದಲ್ಲಿ ಅದೆಷ್ಟು ಪ್ರೀತಿ ಹಾಗೂ ಗೌರವವನ್ನು ಹೊಂದಿದ್ದಾರೆ ಅಂದರೆ, ಹಲವು ವರ್ಷಗಳ ಕಾಲ ಸತತವಾಗಿ ಬೆಂಗಳೂರು ತಂಡಕ್ಕೆ ಆಡಿ. ಇಂದಿಗೂ ಇದೇ ತಂಡದಲ್ಲಿ ಉಳಿಯಲು ನಿರ್ಧರಿಸಿದ್ದಾರೆ. ಹೀಗಿದ್ದಾಗ ವಿರಾಟ್ ಕೊಹ್ಲಿಗೆ ಮತ್ತಷ್ಟು ಅಭಿಮಾನಿಗಳು ಕರ್ನಾಟಕದ ನೆಲದಿಂದಲೇ ಸೇರ್ಪಡೆ ಆಗುತ್ತಿದ್ದಾರೆ. ಈಗ ಇದೇ ಕೊಹ್ಲಿ ಅವರು ಖಾಸಗಿ ಸಂದರ್ಶನದ ಸಮಯದಲ್ಲಿ, ಕನ್ನಡದಲ್ಲಿ ಮಾತನಾಡಿದ್ದು ಫುಲ್ ವೈರಲ್ ಆಗುತ್ತಿದೆ. ಆ ಬಗ್ಗೆ ವಿಡಿಯೋ ಇದೆ ಮುಂದೆ ನೋಡಿ.

ನೋಡ ನೋಡ.. ಕೊಹ್ಲಿ ಕನ್ನಡ!
'ದಿ ಬ್ಯಾಂಗಳೋರ್ ವೆದರ್ ಮಗಾ' ಅಂತ ಸಂದರ್ಶಕ ಪ್ರಶ್ನೆ ಕೇಳಿದಾಗ, ಅದಕ್ಕೆ ವಿರಾಟ್ ಕೊಹ್ಲಿ ಅವರು 'ಸಖತ್ ಮಗಾ' ಅಂತಾ ಉತ್ತರ ನೀಡಿದ್ದಾರೆ. ಹಾಗೇ ಕನ್ನಡದಲ್ಲಿ ಮಾತು ಮುಂದುವರಿಸುವ ವಿರಾಟ್ ಕೊಹ್ಲಿ ಅವರು, 'ನನಗೆ ಕನ್ನಡ ಗೊತ್ತಿಲ್ಲ. ಏನ್ ಗುರೂ, ಏನ್ ಡ್ಯಾಡಿ' ಅಂತಾ ಡೈಲಾಗ್ ಹೇಳಿದ್ದಾರೆ. ಹಾಗೇ ಇದೇ ವೇಳೆ ನನಗೆ ಗೊತ್ತಿಲ್ಲ ಆದರೆ ಯಾರೋ ಒಬ್ಬರು ಹಿಂಗೆ ಹೇಳಿ ಅಂತಾ ಹೇಳಿದ್ರು, ಅದಕ್ಕೆ ಈಗ ಇಷ್ಟು ಕನ್ನಡನ ನಾನು ಮಾತನಾಡುತ್ತೇನೆ ಅಂತಾ ಹೇಳಿದ್ದಾರೆ ವಿರಾಟ್ ಕೊಹ್ಲಿ.
ವಿರಾಟ್ ಕೊಹ್ಲಿಗೆ ಬೆಂಗಳೂರಲ್ಲೇ ಫ್ಯಾನ್ಸ್ ಹೆಚ್ಚು
ಭಾರತ ಕ್ರಿಕೆಟ್ ತಂಡದ ರನ್ ಮಷಿನ್ ಅಂತಾನೆ ಹೆಸರು ಗಳಿಸಿರುವ ವಿರಾಟ್ ಕೊಹ್ಲಿ ಅವರಿಗೆ ಕನ್ನಡದ ನೆಲ ಅಂದ್ರೆ ಅಚ್ಚುಮೆಚ್ಚು. ಆಗಾಗ ವಿರಾಟ್ ಕೊಹ್ಲಿ ಕೂಡ ಈ ಬಗ್ಗೆ ಮುಕ್ತ & ಸಂತೋಷದಿಂದ ಮಾತನಾಡಿ ಕನ್ನಡದ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಇದೇ ಕಾರಣಕ್ಕೆ, ವಿರಾಟ್ ಕೊಹ್ಲಿ ಅವರು ಕನ್ನಡ ನಾಡಿನಲ್ಲಿ ಹುಟ್ಟದೇ ಹೋದರೂ ಕನ್ನಡಿಗರೇ ಆಗಿದ್ದಾರೆ ಎನ್ನಬಹುದು. ಇಂತಿಪ್ಪ ಕಿಂಗ್ ವಿರಾಟ್ ಕೊಹ್ಲಿ ಅವರು ಈಗ ಕನ್ನಡ ಮಾತನಾಡಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಅವರು ಕನ್ನಡ ಮಾತನಾಡುವ ವಿಡಿಯೋ ವೈರಲ್ ಆಗುತ್ತಿದೆ.

ಕಿಂಗ್ ಕೊಹ್ಲಿಗೆ ಅಭಿಮಾನಿಗಳ ಬೆಂಬಲ
ಒಟ್ನಲ್ಲಿ ಎಂದೆಂದಿಗೂ ವಿರಾಟ್ ಕೊಹ್ಲಿ ನಮ್ಮವರು ಹಾಗೇ ವಿರಾಟ್ ಕೊಹ್ಲಿ ಅವರಿಗಿರುವ ಕನ್ನಡಿಗರ ಪ್ರೀತಿ & ಅಭಿಮಾನ ಎಂದಿಗೂ ಕಮ್ಮಿ ಆಗಲ್ಲ. ಬದಲಾಗಿ ಇದು ಮತ್ತೆ, ಮತ್ತೆ ಹೆಚ್ಚಾಗುತ್ತಲೇ ಇರುತ್ತದೆ. ಅದರ ಮುಂದುವರಿದ ಭಾಗವಾಗಿ ವಿರಾಟ್ ಕೊಹ್ಲಿ ಅವರ ಈ, ಕನ್ನಡ ಮಾತನಾಡುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿ ಗಮನ ಸೆಳೆದಿದೆ. ಇನ್ನೇನು ಐಪಿಎಲ್ ಹೊಸ ಸೀಸನ್ ಶುರುವಾಗುವ ಸಮಯದಲ್ಲಿ ಕಿಂಗ್ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಈ ವಿಡಿಯೋನ ಹೆಮ್ಮೆಯಿಂದಲೇ ಶೇರ್ ಮಾಡಿ ತಮ್ಮ ನೆಚ್ಚಿನ ಆಟಗಾರನಿಗೆ ಗೌರವಿಸುತ್ತಿದ್ದಾರೆ. ಹಾಗೇ ಕೊಹ್ಲಿಗೆ ಮತ್ತಷ್ಟು ಬೆಂಬಲವನ್ನ ಕೂಡ ನೀಡುತ್ತಿದ್ದಾರೆ.












Click it and Unblock the Notifications