ಯಾರೋ 10 ಜನ ಹೊಡೆದು ಡಾನ್ ಆದವ್ನಲ್ಲ ಕಣೋ ನಾನು, ನಾನು ಹೊಡೆದಿರೋ 10 ಜನನೂ ಡಾನೇ... Virat Kohli
ವಿರಾಟ್ ಕೊಹ್ಲಿ ಅಂದ್ರೆ ಕೆಂಡ... ವಿರಾಟ್ ಕೊಹ್ಲಿ ಅಂದ್ರೆ ಬೆಂಕಿ... ವಿರಾಟ್ ಕೊಹ್ಲಿ ಅಂದ್ರೆ ಕ್ರಿಕೆಟ್ ಕಿಂಗ್... ಹಿಂಗೆ ಬೆಂಗಳೂರು ಕ್ರಿಕೆಟ್ ತಂಡ ಆರ್‌ಸಿಬಿ ಹೀರೋ & ಭಾರತೀಯ ಕ್ರಿಕೆಟ್ ದೊರೆ ಕಿಂಗ್ ಕೊಹ್ಲಿ ಬಗ್ಗೆ ಸಿಕ್ಕಾಪಟ್ಟೆ ಹೊಗಳುತ್ತಾರೆ ಅವರ ಅಭಿಮಾನಿಗಳು. ಯಾಕಂದ್ರೆ ನಮ್ಮ ಕಿಂಗ್ ಕೊಹ್ಲಿ ಹವಾನೇ ಅದೇ ರೀತಿ ಇದೆ. ಹೀಗಿದ್ದಾಗಲೇ, ಯಾರೋ 10 ಜನ ಹೊಡೆದು ಡಾನ್ ಆದವ್ನಲ್ಲ ಕಣೋ ನಾನು, ನಾನು ಹೊಡೆದಿರೋ 10 ಜನನೂ ಡಾನೇ ಅಂತಾ...
9000 ರನ್.. ಇದು ಯಾವುದೋ ತಂಡದ ರನ್ ಅಲ್ಲ, ಐಪಿಎಲ್ ಅಖಾಡದಲ್ಲಿ ನಮ್ಮ ಒಂಟಿ ಹುಲಿ ವಿರಾಟ್ ಕೊಹ್ಲಿ ಅವರು ಬಾರಿಸಿರುವ ಒಟ್ಟಾರೆ ರನ್‌ಗಳ ಲೆಕ್ಕ. ಪ್ರಪಂಚದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿರುವ ಐಪಿಎಲ್ ಅಖಾಡದಲ್ಲಿ ನಮ್ಮ ಕಿಂಗ್ ವಿರಾಟ್ ಕೊಹ್ಲಿ ಇತಿಹಾಸವನ್ನೇ ನಿರ್ಮಾಣ ಮಾಡಿ ಹೊಸ ಸಾಮ್ರಾಜ್ಯ ಕಟ್ಟಿದ್ದಾರೆ. ಇದೇ ಕಾರಣಕ್ಕೆ ನಮ್ಮ ವಿರಾಟ್ ಕೊಹ್ಲಿ ಅವರಿಗೆ ಶತ್ರುಗಳು & ವಿರೋಧಿಗಳು ಕೂಡ ದೊಡ್ಡ ಪ್ರಮಾಣದಲ್ಲೇ ಇದ್ದು ಪದೇ ಪದೇ ತೊಂದರೆ ಮಾಡಲು, ಕೆಣಕಲು ನೋಡುತ್ತಲೇ ಇರುತ್ತಾರೆ....

ಯಾರೋ 10 ಜನ ಹೊಡೆದು ಡಾನ್ ಆದವ್ನಲ್ಲ ಕಣೋ...
ಹೊಡಿ ಮಗ.. ಹೊಡಿ ಮಗ.. ಹೊಡಿ ಮಗ.. ಬಿಡಬೇಡ ಅವ್ನ.. ಹಿಂಗೆ ನಮ್ಮ ವಿರಾಟ್ ಕೊಹ್ಲಿ ಕ್ರಿಕೆಟ್ ಅಖಾಡದಲ್ಲಿ ಎದುರಾಳಿ ತಂಡದ ಬೌಲರ್‌ಗಳಿಗೆ ಚಚ್ಚಿ ಬಿಸಾಡುತ್ತಾರೆ. ಈ ಮೂಲಕ ಹೊಸ ಹೊಸ ದಾಖಲೆ & ಇತಿಹಾಸ ಸೃಷ್ಟಿ ಮಾಡುತ್ತಲೇ ಬಂದಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಬೆಂಗಳೂರು ತಂಡ ಆರ್‌ಸಿಬಿ ವಿರೋಧಿಗಳು & ವಿರಾಟ್ ಕೊಹ್ಲಿ ಶತ್ರುಗಳು ಬಾಯಿಗೆ ಬಂದ ರೀತಿ ಮಾತನಾಡುತ್ತಾರೆ. ಹೀಗಿದ್ದಾಗಲೇ, ಯಾರೋ 10 ಜನ ಹೊಡೆದು ಡಾನ್ ಆದವ್ನಲ್ಲ ಕಣೋ ನಾನು, ನಾನು ಹೊಡೆದಿರೋ 10 ಜನನೂ ಡಾನೇ ಅಂತಾ...
2025 ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡ ಪಂಜಾಬ್ ವಿರುದ್ಧ ಗೆದ್ದು ಫೈನಲ್‌ಗೆ ಹೋದ ನಂತರ ಸೆಲೆಬ್ರೇಷನ್ ಬಲು ಜೋರಾಗಿದೆ. ಇನ್ನೇನು ಈ ಸಲ ಕಪ್ ನಮ್ದೇ ಅಂತಾನೂ ಆರ್‌ಸಿಬಿ ಫ್ಯಾನ್ಸ್ ಕುಣಿದಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್ ಸೇರಿ ಆರ್‌ಸಿಬಿ ತಂಡದ ವಿರೋಧಿಗಳು ಬಾಯಿಗೆ ಬಂದಂತೆ ಮಾತನಾಡುತ್ತಾ, ಬೆಂಗಳೂರು ತಂಡ ಹಾಗೂ ವಿರಾಟ್ ಕೊಹ್ಲಿ ಬಗ್ಗೆ ಕಮೆಂಟ್ ಮಾಡುತ್ತಿದ್ದರು. ಅದಕ್ಕೆ ಕನ್ನಡಿಗರು ಕೂಡ ಈಗ ಸರಿಯಾಗಿ ತಿರುಗೇಟು ನೀಡುತ್ತಿದ್ದು, ಕೆಜಿಎಫ್ ಯಶ್ ಅವರ ಡೈಲಾಗ್ ಹಾಕಿ ಕಿಂಗ್ ವಿರಾಟ್ ಕೊಹ್ಲಿ & ಬೆಂಗಳೂರು ತಂಡ ಆರ್‌ಸಿಬಿ ವಿರೋಧಿಗಳ ಬಾಯಿ ಬಂದ್ ಮಾಡುತ್ತಿದ್ದಾರೆ.
ಆರ್‌ಸಿಬಿ ವಿರೋಧಿಗಳ ಬಾಯಿ ಬಂದ್!
ಹೌದು, ಕೆಜಿಎಫ್ ಸಿನಿಮಾದ ಫೇಮಸ್ ಡೈಲಾಗ್ 'ಯಾರೋ 10 ಜನ ಹೊಡೆದು ಡಾನ್ ಆದವ್ನಲ್ಲ ಕಣೋ ನಾನು, ನಾನು ಹೊಡೆದಿರೋ 10 ಜನನೂ ಡಾನೇ...' ಎಂಬ ಸೀನ್‌ನ ಬಳಸಿ ಇದೀಗ ಅದನ್ನ ವಿರಾಟ್ ಕೊಹ್ಲಿ & ಬೆಂಗಳೂರು ತಂಡ ಆರ್‌ಸಿಬಿ ತಂಡಕ್ಕೆ ಜೋಡಿಸಿ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು. ಈ ಮೂಲಕ ವಿರೋಧಿಗಳು ಬಾಯಿ ಮುಚ್ಚಿಕೊಳ್ಳಬೇಕು ಎಂಬ ಆಜ್ಞೆ ಕೂಡ ಮಾಡುತ್ತಿದ್ದಾರೆ ಆರ್‌ಸಿಬಿ ಫ್ಯಾನ್ಸ್ & ಕಿಂಗ್ ವಿರಾಟ್ ಕೊಹ್ಲಿ ಅಭಿಮಾನಿಗಳು!












Click it and Unblock the Notifications