RCB vs LSG: ವಿರಾಟ್ ಕೊಹ್ಲಿ ಆಡುವುದೇ ಅನುಮಾನ, ಎಲ್‌ಎಸ್‌ಜಿ ವಿರುದ್ಧ ಆಡುವ 11 ಜನರಲ್ಲಿ...

ಕನ್ನಡಿಗ ವಿರಾಟ್ ಕೊಹ್ಲಿ ಅಂತಾ ಬೆಂಗಳೂರು ಅಭಿಮಾನಿಗಳು ಹೆಮ್ಮೆಯಿಂದ ಹೇಳಿಕೊಳ್ತಾರೆ, ಕ್ರಿಕೆಟ್ ಕಿಂಗ್ ಅಂತಾ ದೊಡ್ಡ ಹೆಸರು ಪಡೆದಿರುವ ವಿರಾಟ್ ಕೊಹ್ಲಿಗೆ ಹೊಸ ಜನ್ಮ ನೀಡಿದ್ದೇ ನಮ್ಮ ಬೆಂಗಳೂರು ತಂಡ ಆರ್‌ಸಿಬಿ. ಯಾಕಂದ್ರೆ ವಿರಾಟ್ ಕೊಹ್ಲಿ ಆರಂಭಿಕ ದಿನಗಳಲ್ಲಿ ಭಾರಿ ಕಷ್ಟದಲ್ಲಿ ಇದ್ದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹರಾಜಲ್ಲಿ 2008ರ ಸಮಯಕ್ಕೆ ಖರೀದಿ ಮಾಡಿತ್ತು. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಕೂಡ ಕಳೆದ 18 ವರ್ಷಗಳಿಂದ ನಮ್ಮ ಆರ್‌ಸಿಬಿ ತಂಡ ಬಿಟ್ಟು ಹೋಗಿಲ್ಲ...

ವಿರಾಟ್ ಕೊಹ್ಲಿ ಐಪಿಎಲ್ ಆಡುತ್ತಿದ್ದರೆ ಅದರ ಕ್ರೇಜ್ ಡಬಲ್ ಆಗುತ್ತದೆ, ಅದರಲ್ಲೂ ಇದೇ ಐಪಿಎಲ್ ಟೂರ್ನಿಗೆ ಹೊಸ ಗತ್ತು ತಂದುಕೊಟ್ಟ ಕೀರ್ತಿ ವಿರಾಟ್ ಕೊಹ್ಲಿ ಅವರಿಗೇ ಸಲ್ಲುತ್ತದೆ ಎನ್ನಬಹುದು. ಅದರಲ್ಲೂ 2008ರ ಸಮಯದಲ್ಲಿ ಶುರುವಾಗಿದ್ದ ಐಪಿಎಲ್ ಟೂರ್ನಿಯಲ್ಲಿ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಆಟ ಶುರು ಮಾಡಿತ್ತು, ಹೀಗಿದ್ದಾಗ 18 ವರ್ಷಗಳಿಂದ ನಮ್ಮ ಆರ್‌ಸಿಬಿ ಕಪ್ ಗೆದ್ದಿಲ್ಲ ಎನ್ನುವ ಚಿಂತೆ ಇತ್ತು. ಆದರೆ 2025 ಐಪಿಎಲ್ ಕಪ್ ನಮ್ಮದೇ ಅಂತಾ ಕೋಟಿ ಕೋಟಿ ಅಭಿಮಾನಿಗಳು ಹೆಮ್ಮೆ ಪಡುವಾಗಲೇ....

Virat Kohli Fans Are Discussing This Before Lucknow Super Giants And RCB Match

ವಿರಾಟ್ ಕೊಹ್ಲಿ ಇವತ್ತು ಆಡಲ್ಲ ಅಂತಾ...

ಹೌದು, 2025 ಐಪಿಎಲ್ ಟೂರ್ನಿಯಲ್ಲಿ 13 ಮ್ಯಾಚ್ ಆಡಿರುವ ಬೆಂಗಳೂರು ತಂಡ ನಮ್ಮ ಆರ್‌ಸಿಬಿ ಭರ್ಜರಿ 8 ಪಂದ್ಯ ಗೆದ್ದು 17 ಅಂಕ ಗಳಿಸಿದೆ. ಹೀಗಿದ್ದಾಗ ಇಂದು ತನ್ನ ಕೊನೆಯ ಮ್ಯಾಚ್ ಆಡುತ್ತಿರುವ ಆರ್‌ಸಿಬಿ ತಂಡಕ್ಕೆ ಗೆಲುವು ಅನಿವಾರ್ಯ, ಯಾಕೆ ಅಂದ್ರೆ ನಂಬರ್ 1 ಸ್ಥಾನ ಪಡೆಯಲು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅವಕಾಶ ಸಿಕ್ಕಿದೆ. ಇಂತಹ ಸಮಯದಲ್ಲೇ ಎಲ್‌ಎಸ್‌ಜಿ ಅಂದ್ರೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಟೀಂ ಇಂದಿನ ಪಂದ್ಯ ಗೆಲ್ಲಲೇ ಬೇಕಿದೆ, ಆದರೆ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಇವತ್ತು ಆಡುವುದೇ ಅನುಮಾನ ಅಂತಾ...

ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಆಡದೇ ಹೋದರೆ ಮ್ಯಾಚ್ ನೋಡುವುದು ಯಾರು? ಅನ್ನೋ ಪರಿಸ್ಥಿತಿ ಇದೆ. ಯಾಕಂದ್ರೆ ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ನಿಂತರೆ ಮಾತ್ರ ಕ್ರಿಕೆಟ್ ಮ್ಯಾಚ್ ನೋಡಲು ಮಜಾ ಇರುತ್ತದೆ ಅನ್ನೋದು ಆರ್‌ಸಿಬಿ & ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹೇಳುವ ಮನದಾಳದ ಮಾತು. ಇಂತಹ ಸಮಯದಲ್ಲೇ ಎಲ್‌ಎಸ್‌ಜಿ ಅಂದ್ರೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ತಂಡದ ಪರವಾಗಿ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಆಡಲ್ಲ ಎನ್ನುವ ಚರ್ಚೆ ಶುರುವಾಗಿದೆ. ಯಾಕೆ ಅಂದ್ರೆ...

ಕಿಂಗ್ ವಿರಾಟ್ ಕೊಹ್ಲಿಗೆ ವಿಶ್ರಾಂತಿ?

ಬೆಂಗಳೂರು ತಂಡ ಆರ್‌ಸಿಬಿ ಈಗಾಗಲೇ ಪ್ಲೇಆಫ್‌ಗೆ ಹೋಗಿದೆ, ಹೀಗಿದ್ದಾಗ ಇಂದಿನ ಪಂದ್ಯ ಆರ್‌ಸಿಬಿಗೆ ಅಂಕ ಪಟ್ಟಿಯಲ್ಲಿ ಮತ್ತಷ್ಟು ಮೇಲೆ ಹೋಗಲು ಅಗತ್ಯವಾಗಿದೆ. ಹೀಗಿದ್ದಾಗಲೇ ಮುಂದಿನ ಪಂದ್ಯಗಳಿಗೆ ಅಣಿಗೊಳಿಸಲು ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ಕೊಡುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ನಡೆಯುತ್ತಿದ್ದು, ವಿರಾಟ್ ಕೊಹ್ಲಿ ಅವರು ಆಡಲ್ಲ ಅನ್ನೋ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಹೀಗಾಗಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ....

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+