ಸತತ 20 ಪಂದ್ಯಗಳ ಸೋಲಿನ ನಂತರ ಈ ವಿಚಾರದಲ್ಲಿ ಭಾರತಕ್ಕೆ ಭರ್ಜರಿ ಜಯ... Virat Kohli
ಭಾರತ ತಂಡಕ್ಕೆ ಭರ್ಜರಿ ಗೆಲುವು ಸಿಕ್ಕಿದೆ, ಭಾರತ ತಂಡದ ಅಭಿಮಾನಿಗಳು ಕುಣಿದಾಡಿದ್ದಾರೆ. ಈ ಗೆಲುವು ಅಂತಿಂತಹ ಗೆಲುವು ಅಲ್ಲ, ಒಂದು ಕಡೆ ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ರಿಟರ್ನ್ ಆಗಿ ಭರ್ಜರಿ ಪ್ರದರ್ಶನ ತೋರಿಸುತ್ತಿರುವ ಸಮಯದಲ್ಲೇ ಮತ್ತೊಂದು ವಿಚಾರದಲ್ಲಿ ಭಾರತ ಈಗ ಇತಿಹಾಸ ನಿರ್ಮಾಣ ಮಾಡಿದೆ. ಕ್ರಿಕೆಟ್ ಆಟವನ್ನು ಪೂಜಿಸುವ & ಕ್ರಿಕೆಟ್ ಆಟಗಾರರಿಗೆ ದೇವರ ಸ್ಥಾನ ನೀಡುವ ನಮ್ಮ ಭಾರತದಲ್ಲಿ ಈಗ ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಹೀಗಿದ್ದಾಗಲೇ, ಸತತ 20 ಪಂದ್ಯಗಳ ಸೋಲಿನ ನಂತರ ಈ ವಿಚಾರದಲ್ಲಿ ಭಾರತಕ್ಕೆ ಭರ್ಜರಿ ಜಯ...
ಹೌದು, ಭಾರತ ಕ್ರಿಕೆಟ್ ತಂಡ ತವರಿನಲ್ಲೇ ಟೆಸ್ಟ್ ಸರಣಿಯನ್ನು ತೀವ್ರ ಹೀನಾಯವಾಗಿ ಸೋತು ಅಭಿಮಾನಿಗಳಲ್ಲಿ ಆಕ್ರೋಶ ಮೂಡುವಂತೆ ಮಾಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ 2-0 ಅಂತರದಲ್ಲಿ ಟೆಸ್ಟ್ ಸರಣಿ ಸೋತು ಹೋದ ನಂತರ ಆಕ್ರೋಶ ಹೆಚ್ಚಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೇಡು ತೀರಿಸಿಕೊಳ್ಳಲು ಏಕದಿನ ಸರಣಿಯಲ್ಲಿ 3-0 ಅಂತರದ ಗೆಲುವು ಗ್ಯಾರಂಟಿ ಅಂತಾ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದರು. ಆದರೆ ಮೊದಲ ಏಕದಿನ ಪಂದ್ಯ ಗೆದ್ದ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ 359 ರನ್ ಬೃಹತ್ ಟಾರ್ಗೆಟ್ ಕೊಟ್ಟಿದ್ದರೂ ರೋಚಕ ಸೋಲು ಕಂಡಿತ್ತು. ಇಂತಹ ಸಮಯದಲ್ಲೇ, ಸತತ 20 ಪಂದ್ಯ ಸೋಲಿನ ನಂತರ ಈ ವಿಚಾರದಲ್ಲಿ ಭಾರತಕ್ಕೆ ಭರ್ಜರಿ ಜಯ...

20 ಪಂದ್ಯ ಸೋಲಿನ ನಂತರ...
ಯಾವುದೇ ಒಂದು ಮ್ಯಾಚ್ ಗೆಲ್ಲಲು ಟಾಸ್ ಮುಖ್ಯವಾಗುತ್ತದೆ, ಆದರೆ ಭಾರತ ತಂಡಕ್ಕೆ ಮಾತ್ರ ಪದೇ ಪದೇ ಟಾಸ್ ಸೋಲುವ ಸಂಕಷ್ಟ ಎದುರಾಗಿತ್ತು. 2023 ಏಕದಿನ ವಿಶ್ವಕಪ್ ನಂತರ ಭಾರತ ತಂಡ ಸತತವಾಗಿ 20 ಪಂದ್ಯಗಳಲ್ಲಿ ಟಾಸ್ ಸೋತು ಹೋಗಿತ್ತು. ಅಲ್ಲದೆ ಭಾರತ ತಂಡಕ್ಕೆ ಇದೇ ಟಾಸ್ ಸೋಲಿನ ವಿಚಾರ ದೊಡ್ಡ ತಲೆನೋವು ತರಿಸುವ ಜೊತೆಗೆ, ಬೇಡದ ದಾಖಲೆ ಕೂಡ ಸೃಷ್ಟಿ ಆಗಿತ್ತು.
ಪರದಾಡುತ್ತಿರುವ ದಕ್ಷಿಣ ಆಫ್ರಿಕಾ ತಂಡ
ಇಂತಹ ಸಮಯದಲ್ಲೇ ಸತತ 20 ಪಂದ್ಯ ಸೋಲಿನ ನಂತರ ಟಾಸ್ ವಿಚಾರದಲ್ಲಿ ಭಾರತಕ್ಕೆ ಇಂದು ಭರ್ಜರಿ ಜಯ ಸಿಕ್ಕಿತ್ತು. ಹರಿಣಗಳು ಅಂದ್ರೆ ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಮತ್ತು ಕೊನೇ ಒನ್ ಡೇ ಮ್ಯಾಚ್ ಅಖಾಡದಲ್ಲಿ ಭಾರತ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗೆ ಭಾರತ ತಂಡದ ಭರ್ಜರಿ ಬೌಲಿಂಗ್ ದಾಳಿ ಎದುರು ನಡುಗಿ ಹೋದ ದಕ್ಷಿಣ ಆಫ್ರಿಕಾ ಈಗಾಗಲೇ ಸಾಲು ಸಾಲು ವಿಕೆಟ್ ಕಳೆದುಕೊಂಡು ಪರದಾಡುತ್ತಿದೆ. ಅಲ್ಲದೆ ಭಾರತಕ್ಕೆ ಇದೀಗ ದಕ್ಷಿಣ ಆಫ್ರಿಕಾ ಅಲ್ಪಮೊತ್ತ ಕೊಡುವ ಸಾಧ್ಯತೆ ದಟ್ಟವಾಗಿತ್ತು, ಇತ್ತೀಚಿನ ವರದಿ ಪ್ರಕಾರ ಸೌತ್ ಆಫ್ರಿಕಾ 250 ರನ್ ಗಡಿ ದಾಟಿ 8 ವಿಕೆಟ್ ಕಳೆದುಕೊಂಡಿದೆ.












Click it and Unblock the Notifications