Virat Kohli Century: ಐಸಿಸಿ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ವೀರಾವೇಶ, ಶತಕ ಸಿಡಿಸಿ ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ!
ವಿರಾಟ್ ಕೊಹ್ಲಿ ಅಂತೂ ತಮ್ಮ ಗುರಿ ತಲುಪಿದ್ದಾರೆ. 2023 ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಸ್ ಪಂದ್ಯಲ್ಲಿ, ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ಈ ಶತಮಾನದಲ್ಲಿ ಶತಕಗಳ ಸಾಧನೆ ಮಾಡಿದ್ದಾರೆ. ಹಾಗೆ ಕ್ರಿಕೆಟ್ ದೇವರು ಎಂದೇ ಖ್ಯಾತಿಯ ಪಡೆದಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ 49 ಶತಕ ಸಿಡಿಸಿದ್ದ ಸಚಿನ್ ತೆಂಡೂಲ್ಕರ್ ಅವರ ಸಾಧನೆ ಮೀರಿಸಿ, ಇದೀಗ 50ನೇ ಸೆಂಚ್ಯುರಿ ಬಾರಿಸಿದ್ದಾರೆ ಕೊಹ್ಲಿ.
ಕ್ರಿಕೆಟ್ ಜಗತ್ತಿನ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ತವರು ಮಹಾರಾಷ್ಟ್ರದ ಮುಂಬೈ ನಗರಿಯಲ್ಲೇ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ 49ನೇ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಅವ್ರು ಸಚಿನ್ ತೆಂಡೂಲ್ಕರ್ ಅವರ ದಾಖಲೆಗೆ ಸಮವಾಗಿ ನಿಂತಿದ್ದರು. ಇದೀಗ, ಏಕದಿನ ಕ್ರಿಕೆಟ್ ಮಾದರಿಯಲ್ಲಿ 50ನೇ ಸೆಂಚ್ಯುರಿ ಬಾರಿಸಿ ಕ್ರಿಕೆಟ್ ಚರಿತ್ರೆಯಲ್ಲಿ ಯಾರೂ ಮಾಡಲು ಆಗದ ದಾಖಲೆ ನಿರ್ಮಿಸಿದ್ದಾರೆ ನಮ್ಮ ವಿರಾಟ್ ಕೊಹ್ಲಿ.

ಶತಮಾನದ ಶತಕಗಳ ಸರದಾರ ಕೊಹ್ಲಿ!
ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 2023 ಐಸಿಸಿ ವಿಶ್ವಕಪ್ ಟೂರ್ನಿ ಸೆಮಿಫೈನಲ್ಸ್ ಆಡ್ತಿದೆ. ರೋಹಿತ್ ಶರ್ಮಾ ಪಡೆ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಹೀಗೆ ಬ್ಯಾಟಿಂಗ್ ಆರಂಭಿಸಿದ ರೋಹಿತ್ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಟೀಂನ ಬೌಲರ್‌ಗಳ ಬಾಲ್ ಹಿಗ್ಗಾಮುಗ್ಗಾ ಬಾರಿಸಿತ್ತು. ಆದರೆ ಕ್ಯಾಪ್ಟನ್ ರೋಹಿತ್ ಶರ್ಮಾ ಬೇಗ ಔಟಾಗಿ ಪೆವಿಲಿಯನ್ ಪರೇಡ್ ನಡೆಸಿದರು.
ಶತಕ ಸಿಡಿಸಿ ಕೊಹ್ಲಿ ಔಟ್
ಹೀಗಿದ್ದಾಗ ಸ್ಕ್ರೀಸ್‌ಗೆ ಬಂದಿದ್ದ ಕಿಂಗ್ ವಿರಾಟ್ ಕೊಹ್ಲಿ ಮನಸ್ಸಿಗೆ ಬಂದಂತೆ ನ್ಯೂಜಿಲೆಂಡ್ ಬೌಲರ್‌ಗಳ ದಾಳಿ ದಂಡಿಸಿದರು. ಈ ಮೂಲಕವೇ ಶತಕ ಸಿಡಿಸಿದರು ಕೊಹ್ಲಿ. ಇತ್ತೀಚಿನ ಮಾಹಿತಿಗಳ ಪ್ರಕಾರ ವಿರಾಟ್ ಕೊಹ್ಲಿ 113 ಬಾಲ್‌ಗಳನ್ನ ಆಡಿ 117 ರನ್ ಗಳಿಸಿದ್ದಾರೆ. 9 ಬೌಂಡರಿ & 2 ಸಿಕ್ಸ್ ಬಾರಿಸಿದ್ದಾರೆ. ಈ ಮೂಲಕ ಭಾರತ ಈಗಾಗಲೆ 300 ರನ್ ಗಡಿಯನ್ನ ದಾಟಿದ್ದು, 400 ಗುರಿ ಮುಟ್ಟುವ ಸಾಧ್ಯತೆ ಕೂಡ ದಟ್ಟವಾಗಿದೆ.
ಒಟ್ನಲ್ಲಿ ಭಾರತ & ನ್ಯೂಜಿಲೆಂಡ್ ಫೈಟಿಂಗ್ ಒಂದು ಹಂತಕ್ಕೆ ಬಂದು ನಿಂತಿದೆ ಈ ಪಂದ್ಯ ಭಾರತದ ಫೈನಲ್ಸ್ ಭವಿಷ್ಯ ಡಿಸೈಡ್ ಮಾಡಲಿದೆ. ಹೀಗೆ ಭಾರತದ ಪ್ರತಿಯೊಬ್ಬ ಆಟಗಾರ ಕೂಡ ಫುಲ್ ಅಲರ್ಟ್ ಆಗಿ ಆಟ ಆಡಬೇಕಾಗಿದ್ದು ನ್ಯೂಜಿಲೆಂಡ್ ತಂಡಕ್ಕೆ ಮುಂಬೈನಲ್ಲಿ ಸಂಜೆ ವೇಳೆ ಭಾರತದ ಬೌಲಿಂಗ್ ದಾಳಿ ಎದುರಿಸುವುದು ಕಷ್ಟವಾಗುವ ನಿರೀಕ್ಷೆಯೂ ಇದೆ. ಈಗಿನ ಪರಿಸ್ಥಿತಿ ನೋಡಿದರೆ ಭಾರತ ತಂಡ ಮತ್ತೊಮ್ಮೆ 400 ರನ್‌ಗಳ ಗಡಿಯನ್ನು ದಾಟಿ, ಕಿವೀಸ್ ಪಡೆಗೆ 400ಕ್ಕೂ ಹೆಚ್ಚು ರನ್‌ಗಳ ಗುರಿ ನೀಡುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications