1900 ಕೋಟಿ ರೂ. ಒಡೆಯ ವಿರಾಟ್ ಕೊಹ್ಲಿ ನಿರ್ಧಾರದಿಂದ ಬಿಸಿಸಿಐಗೆ ಕೋಟ್ಯಾಂತರ ರೂಪಾಯಿ ಲಾಸ್ Virat Kohli
Virat Kohli: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಸಹ ರೋಹಿತ್ ಅವರ ಹಾದಿ ತುಳಿದಿದ್ದಾರೆ. ಆದರೆ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಬಗ್ಗೆ ಈಗಾಗಲೇ ಸುಳಿವು ನೀಡಿದ್ದರು. ಆದರೆ, BCCI (Board of Control for Cricket in India ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) ಈಗಲೇ ನಿವೃತ್ತಿ ಬೇಡ ಇನ್ನೊಂದಿಷ್ಟು ಸಮಯ ಮುಂದುವರಿಸಿ ಎಂದು ಮನವಿ ಮಾಡಿತ್ತು. ಆದರೆ, ಈ ಮನವಿಯನ್ನು ವಿರಾಟ್ ಕೊಹ್ಲಿ ಅವರು ವಿನಯವಾಗಿ ತಿರಸ್ಕರಿಸಿದ್ದಾರೆ. ಈಗ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದರಿಂದ ಬಿಸಿಸಿಐಗೆ ಕೋಟ್ಯಾಂತರ ರೂಪಾಯಿ ನಷ್ಟವಾಗುವ ಆತಂಕ ಎದುರಾಗಿದೆ. ಈಗಾಗಲೇ T20 ಕ್ರಿಕೆಟ್ಗೆ ಕೊಹ್ಲಿ ವಿದಾಯ ಹೇಳಿರುವ ಅವರು ಇನ್ಮುಂದೆ ಅಂತಾರಾಷ್ಟ್ರೀಯ ಏಕದಿನ ಪಂದ್ಯಾವಳಿ ಮಾತ್ರ ಆಡಲಿದ್ದಾರೆ.
ಕ್ರಿಕೆಟ್ ಲೋಕದಲ್ಲಿ ಹಲವು ಸಾಧನೆಗಳನ್ನು ಮಾಡಿ ಹೊಸ ತಲೆಮಾರು ಕ್ರಿಕೆಟ್‌ನತ್ತ ತಿರುಗಿ ನೋಡುವಂತೆ ಮಾಡಿದ್ದ ವಿರಾಟ್.. ಕ್ರಿಕೆಟ್‌ನಲ್ಲಿ ವಿರಾಟ ಪರ್ವವನ್ನೇ ಸೃಷ್ಟಿಸಿದ್ದರು. ಇನ್ನೇನು ಇವರ ಕ್ರಿಕೆಟ್ ಕೆರಿಯರ್ ಯುಗಾಂತ್ಯವಾಯಿತು ಎನ್ನುವಾಗಲೇ ವಿರಾಟ್ ಪುಟಿದೆದ್ದು ಬಂದಿದ್ದು ಇದೆ. ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿ ಹಾಗೂ ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರನ್ ಗಳಿಸುವಲ್ಲಿ ವಿಫಲರಾಗಿದ್ದಾಗಲೇ ಅವರ ಕ್ರಿಕೆಟ್ ಭವಿಷ್ಯ ಮುಕ್ತಾಯವಾಯಿತು ಅಂತಲೇ ಹೇಳಲಾಗಿತ್ತು. ಆದರೆ ಅವರು ಇದಾದ ಮೇಲೂ ಫಾರ್ಮ್‌ಗೆ ಬಂದು ಹಲವು ಹೊಸ ದಾಖಲೆಗಳನ್ನು ಬರೆದರು.

ವಿರಾಟ್ ಕೊಹ್ಲಿ ಅವರು ಇದೀಗ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಬಿಸಿಸಿಐಗೆ ಕೋಟ್ಯಾಂತರ ರೂಪಾಯಿ ನಷ್ಟವನ್ನುಂಟು ಮಾಡಲಿದೆ ಎಂದೇ ಹೇಳಲಾಗುತ್ತಿದೆ. ವಿರಾಟ್ ಬ್ರ್ಯಾಂಡ್ ವ್ಯಾಲ್ಯೂ (Brand Value - ಬ್ರ್ಯಾಂಡ್ ಮೌಲ್ಯ) ಕೋಟ್ಯಾಂತರ ರೂಪಾಯಿ ಇದೆ. ವಿರಾಟ್ ಕೊಹ್ಲಿ ಅವರು ಟೆಸ್ಟ್ ಆಡುವುದರಿಂದ ಇದರ ಲಾಭ ಬಿಸಿಸಿಐಗೂ ಆಗುತ್ತಿತ್ತು.
ಜಾಹೀರಾತುಗಳ ಸುರಿಮಳೆಯೇ ಆಗುತ್ತಿತ್ತು. ಇದು ಪರೋಕ್ಷವಾಗಿ ಬಿಸಿಸಿಐ ಖಜಾನೆ ತುಂಬುತ್ತಿತ್ತು. ಆದರೆ, ದಿಢೀರ್ ಎಂದು ವಿರಾಟ್ ಕೊಹ್ಲಿ ಅವರು ನಿವೃತ್ತಿ ಘೋಷಣೆ ಮಾಡಿರುವುದು ಹಾಗೂ ಬಿಸಿಸಿಐ ಮನವಿಯನ್ನು ತಿರಸ್ಕಾರ ಮಾಡಿರುವುದು ಏಕಕಾಲಕ್ಕೆ ಬಿಸಿಸಿಐಗೆ ನುಂಗಲಾರದ ಬಿಸಿ ತುಪ್ಪವಾಗಿ ಬದಲಾಗಿದೆ ಅಂತಲೇ ವಿಶ್ಲೇಷಿಸಲಾಗುತ್ತಿದೆ. ಇಷ್ಟಕ್ಕೂ ವಿರಾಟ್ ಕೊಹ್ಲಿ ಅವರ ಬ್ರ್ಯಾಂಡ್ ವ್ಯಾಲ್ಯೂ ಎಷ್ಟಿದೆ ಹಾಗೂ ಬಿಸಿಸಿಐ ಬ್ರ್ಯಾಂಡ್ ವ್ಯಾಲ್ಯೂ ಎಷ್ಟಿದೆ ಏನಿದು ಲೆಕ್ಕಾಚಾರ ಎನ್ನುವುದನ್ನು ನೋಡೋಣ.
ವಿರಾಟ್ ಕೊಹ್ಲಿ ಬ್ರ್ಯಾಂಡ್ ಮೌಲ್ಯ ಎಷ್ಟು ?
ಒಬ್ಬ ವ್ಯಕ್ತಿ, ಆಟಗಾರ ಹಾಗೂ ಸೆಲೆಬ್ರಿಟಿಗಳ ಬ್ರ್ಯಾಂಡ್ ವ್ಯಾಲ್ಯೂ ಅವರ ಜನ ಮನ್ನಣೆ ಹಾಗೂ ಅವರು ಎಷ್ಟು ಪ್ರಸಿದ್ಧಿ ಗಳಿಸಿದ್ದಾರೆ ಅವರ ಸಾಧನೆ ಸೇರಿದಂತೆ ಹಲವು ಅಂಶಗಳ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಇನ್ನು ವಿರಾಟ್ ಕೊಹ್ಲಿ ಅವರ ಬ್ರ್ಯಾಂಡ್ ಮೌಲ್ಯವೂ ಬರೋಬ್ಬರಿ $227.9 ಮಿಲಿಯನ್ ಅಂದರೆ, ಅಂದಾಜು 1900 ಕೋಟಿ ರೂಪಾಯಿ ಇದೆ ಎಂದು Kroll's Celebrity Brand Valuation Report 2023 ಹೇಳಿತ್ತು. ಇದು ಭಾರತೀಯ ಕ್ರಿಕೆಟ್ ಆಟಗಾರರಲ್ಲೇ ಹೆಚ್ಚು ಬ್ರ್ಯಾಂಡ್ ವ್ಯಾಲ್ಯೂ ಹೊಂದಿರುವ ಏಕೈಕ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇನ್ನು 2025ರಲ್ಲಿ ವಿರಾಟ್ ಕೊಹ್ಲಿ ಅವರ ಬ್ರ್ಯಾಂಡ್ ವ್ಯಾಲ್ಯೂ ಇನ್ನಷ್ಟು ಹೆಚ್ಚಳವಾಗಿದೆ. ಇದೀಗ ವಿರಾಟ್ ಅವರ ಬ್ರ್ಯಾಂಡ್ ವ್ಯಾಲ್ಯೂ ಬರೋಬ್ಬರಿ INR 1,912 ಕೋಟಿ ರೂಪಾಯಿ ತಲುಪಿದೆ ಅಂತಲೇ ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಬ್ರ್ಯಾಂಡ್ ವ್ಯಾಲ್ಯೂ ಇರುವ ವಿರಾಟ್ ಕೊಹ್ಲಿ ಅವರನ್ನು ಇದೀಗ ಬಿಸಿಸಿಐ ಮಿಸ್ ಮಾಡಿಕೊಳ್ಳುತ್ತಿದೆ.

ಬಿಸಿಸಿಐ ಮೌಲ್ಯ ಎಷ್ಟಿದೆ ?
ಬಿಸಿಸಿಐ ಕೋಟ್ಯಾಂತರ ರೂಪಾಯಿ ಮೌಲ್ಯವನ್ನು ಹೊಂದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಾಗಿದೆ. ಬಿಸಿಸಿಐನ ನಿವ್ವಳ ಮೌಲ್ಯವು ಇತ್ತೀಚಿನ ದಿನಗಳಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ. ಈಗ ಬಿಸಿಸಿಐ ಮೌಲ್ಯವು ₹18,760 ಕೋಟಿ (ಸುಮಾರು $2.25 ಬಿಲಿಯನ್) ತಲುಪಿದೆ. ಈ ಮೂಲಕ ಬಿಸಿಸಿಐ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದೆ.
ಇನ್ಸ್ಟಾಗ್ರಾಮ್ ಪೋಸ್ಟ್‌ಗೂ ಕೋಟಿ ಕೋಟಿ ದುಡ್ಡು
ಇನ್ನು ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ನಾಯಕ ವಿರಾಟ್ ಕೊಹ್ಲಿ ಅವರ ಕ್ರೇಜ್ ಎಷ್ಟಿದೆ ಎನ್ನುವುದಕ್ಕೆ ಅವರ ಇನ್ಸ್ಟಾಗ್ರಾಮ್ ಆದಾಯವೇ ಸಾಕ್ಷಿ. ವಿರಾಟ್ ಕೊಹ್ಲಿ ಅವರು ಇನ್ಸ್ಟಾಗ್ರಾಮ್‌ನ ಮೂಲಕವೇ ಕೋಟ್ಯಾಂತರ ರೂಪಾಯಿ ಆದಾಯವನ್ನು ಗಳಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರು ಇನ್ಸ್ಟಾಗ್ರಾಮ್ ಪೋಸ್ಟ್ ಹಾಗೂ ಜಾಹೀರಾತಿನ ಮೂಲಕವೇ ಕೋಟ್ಯಾಂತರ ರೂಪಾಯಿ ದುಡ್ಡು ಹರಿದು ಬರುತ್ತದೆ. ಪ್ರಾಯೋಜಿತ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ವಿರಾಟ್ ಕೊಹ್ಲಿ ಅವರು 14 ಕೋಟಿ ರೂಪಾಯಿಗಳ ಗಳಿಕೆಯನ್ನು ಗಳಿಸುತ್ತಿದ್ದಾರೆ.
ಹೀಗಾಗಿಯೇ ಅವರು ಇತ್ತೀಚೆಗೆ ಮಾಡಿದ್ದ ಒಂದು ಸಣ್ಣ ಲೈಕ್ ಸಹ ಭಾರೀ ಸಂಚಲವನ್ನೇ ಸೃಷ್ಟಿ ಮಾಡಿತ್ತು. ಇನ್ಸ್ಟಾಗ್ರಾಮ್ ಪೋಸ್ಟ್‌ಗೆ ಹೆಚ್ಚು ದುಡ್ಡು ಗಳಿಸುವ ಭಾರತದ ಕೆಲವೇ ಕೆಲವು ಸೆಲೆಬ್ರಿಟಿಗಳಲ್ಲಿ ವಿರಾಟ್ ಕೊಹ್ಲಿ ಸಹ ಒಬ್ಬರಾಗಿದ್ದಾರೆ. ಭಾರತದಲ್ಲಿ ಕೆಲವೇ ಕೆಲವು ಸೆಲೆಬ್ರಿಟಿಗಳು ಮಾತ್ರ ಈ ರೀತಿಯ ಆದಾಯವನ್ನು ಗಳಿಸುತ್ತಾರೆ. ಇನ್ನು ಜಾಹೀರಾತುಗಳಲ್ಲಿ ಅಭಿನಯಿಸುವುದಕ್ಕೂ ವಿರಾಟ್ ಕೊಹ್ಲಿ ಅವರಿಗೆ ಭರ್ಜರಿ ಬೇಡಿಕೆ ಇದೆ. ವಿರಾಟ್ ಕೊಹ್ಲಿ ಅವರು ಜಾಹೀರಾತಿನಲ್ಲಿ ಅಭಿನಯಿಸುವುದಕ್ಕೆ ಭಾರೀ ಮೊತ್ತವನ್ನು ನಿಗದಿ ಮಾಡಿದ್ದಾರೆ ಎಂದು ಉದ್ಯಮಿಯೊಬ್ಬರು ಹೇಳಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ಇನ್ನು ಇನ್ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಸೆಲೆಬ್ರಿಟಿಗಳಲ್ಲಿ ವಿರಾಟ್ ಕೊಹ್ಲಿ ಸಹ ಒಬ್ಬರಾಗಿದ್ದಾರೆ. ಅವರ ಒಂದೊಂದು ಪೋಸ್ಟ್ ಸಹ ಮಿಲಿಯನ್ ಗಟ್ಟಲೆ ಜನರನ್ನು ರೀಚ್ ಆಗುತ್ತದೆ. ಲಕ್ಷಾಂತರ ಜನ ಅವರ ಪೋಸ್ಟ್‌ಗಳನ್ನು ಲೈಕ್ ಮಾಡುವುದು ಹಾಗೂ ಕಮೆಂಟ್ ಮಾಡುವುದು ಇದೆ. ಈ ಕಾರಣಕ್ಕೆ ಅವರ ಸೋಷಿಯಲ್ ಮೀಡಿಯಾ ಆದಾಯವೂ ಭರ್ಜರಿಯಾಗಿಯೇ ಇದೆ. ಈಚೆಗೆ ವಿರಾಟ್ ಕೊಹ್ಲಿ ಅವರು ನಟಿಯೊಬ್ಬರಿಗೆ ಲೈಕ್ ಮಾಡಿದ್ದು, ಭಾರೀ ಸುದ್ದಿಯಾಗಿತ್ತು. ಇದಾದ ಮೇಲೆ ನಟಿ ಅವರ ಸಂಭಾವನೆ ಹೆಚ್ಚಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications