Virat Kohli-Anushka Sharma: ವಿರಾಟ್ ಕೊಹ್ಲಿ & ಅನುಷ್ಕಾರನ್ನು ಕೆಫೆಯಿಂದ ಹೊರಹಾಕಿದ ಸಿಬ್ಬಂದಿ
Virat Kohli-Anushka Sharma: ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಅವರು ಸದ್ಯ ಲಂಡನ್‌ನಲ್ಲಿ ವಾಸವಿದ್ದಾರೆ. ಆದರೆ, ಇದೀಗ ಕೆಫೆವೊಂದರಿಂದ ಇವರನ್ನು ಹೊರಹಾಕಿದ ಘಟನೆಯೊಂದು ಬಟಾಬಯಲಾಗಿದೆ. ಹಾಗಾದ್ರೆ, ಅಲ್ಲಿ ನಡೆದಿದ್ದೇನು ಹಾಗೂ ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಲಂಡನ್‌ನಲ್ಲಿ ವಾಸವಿದ್ದು, ದಂಪತಿಗಳು ತಮ್ಮ ಗೌಪ್ಯತೆಗೆ ಆದ್ಯತೆ ನೀಡುತ್ತಿದ್ದಾರೆ. ಅವರು ಆಗಾಗ್ಗೆ ಸ್ನೇಹಿತರು ಮತ್ತು ಕುಟುಂಬದವರನ್ನು ಭೇಟಿ ಆಗುತ್ತಿರುತ್ತಾರೆ. ಅಲ್ಲದೆ, ಸಹ ಕ್ರಿಕೆಟಿಗರೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ. ಈ ನಡುವೆಯೇ ಅವರನ್ನು ನ್ಯೂಜಿಲೆಂಡ್ ಕೆಫೆಯಿಂದ ಹೊರಹಾಕಿದ ಘಟನೆಯೊಂದು ಬೆಳಕಿಗೆ ಬಂದಿದೆ. ಅಸಲಿ ಸತ್ಯವೇನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಕಿಂಗ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮುಂಬೈನ ಗದ್ದಲದ ಜೀವನ ಹಾಗೂ ನಿರಂತರ ಪ್ರಚಾರದಿಂದ ದೂರವಾಗಿ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಮಕ್ಕಳನ್ನು ಕಿರಿಕಿರಿಯಿಂದ ದೂರ ಇಟ್ಟು ಪಾಲನೆ ಮಾಡಲು ಹಾಗೂ ಶಾಂತತೆಯಿಂದ ಜೀವನ ಮಾಡುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡರು. ಇದೀಗ ಅವರು ದೈನಂದಿನ ಜೀವನವನ್ನು ಆರಾಮದಾಯಕವಾಗಿ ಕಳೆಯುತ್ತಿದ್ದು, ಆಗಾಗ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸೆರೆಹಿಡಿದು ಹಂಚಿಕೊಳ್ಳುತ್ತಿರುತ್ತಾರೆ.
ಕೆಫೆಯಿಂದ ಹೊರಹಾಕಿದ್ದೇಕೆ?: ಆದರೆ, ಈ ದಂಪತಿಗಳು ತಮ್ಮ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ಅವರೊಂದಿಗೆ ಆಗಾಗ ಸಭೆಯನ್ನು ಆಯೋಜಿಸುತ್ತಾರೆ. ಅದೇ ರೀತಿ, ಈ ಮುದ್ದಾದ ದಂಪತಿಗಳು ಇತ್ತೀಚೆಗಷ್ಟೇ ಕೆಫೆಯೊಂದರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಜೆಮಿಮಾ ರೊಡ್ರಿಗಸ್ ಅವರನ್ನು ಭೇಟಿಯಾದರು. ಅವರೊಂದಿಗೆ ಸುದೀರ್ಘ ಸಂಭಾಷಣೆಯನ್ನು ಆನಂದಿಸಿದ್ದು, ಇದು ಅಂತಿಮವಾಗಿ ಅವರನ್ನು ರೆಸ್ಟೋರೆಂಟ್‌ನಿಂದ ಹೊರಹಾಕಲು ಕಾರಣವಾಯಿತು ಎಂದು ವರದಿಯಾಗಿದೆ.
ವಿರಾಟ್ ಕೊಹ್ಲಿ ಭೇಟಿಗೆ ಕಾರಣ ಏನು?: ಜೆಮಿಮಾ ರೊಡ್ರಿಗಸ್ ಇತ್ತೀಚೆಗೆ ಸಂಚಿಕೆಯೊಂದರಲ್ಲಿ ಕಾಣಿಸಿಕೊಂಡಿದ್ದು, ಈ ವೇಳೆ ಅವರ ಭೇಟಿಯ ಕಥೆಯನ್ನು ಹಂಚಿಕೊಂಡರು. ಭಾರತೀಯ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡದ ಆಟಗಾರರು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಬಗ್ಗೆ ಸಲಹೆ ಪಡೆಯಲು ಬಯಸಿದ್ದರು. ಆದ್ದರಿಂದ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದರು ಎಂದು ಹೇಳಿದರು.
ಅಂದುಕೊಂಡತೆ ವಿರಾಟ್ ಕೊಹ್ಲಿ ಅವರನ್ನು ಪುರುಷ ಮತ್ತು ಮಹಿಳಾ ತಂಡಗಳು ತಂಗಿದ್ದ ಹೋಟೆಲ್‌ನಲ್ಲಿ ಇರುವ ಕೆಫೆಗೆ ಆಹ್ವಾನಿಸಿದರು. ಈ ವೇಳೆ ವಿರಾಟ್ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಬಂದಿದ್ದರು. ಮೊದಲ ಅರ್ಧ ಗಂಟೆ ಕ್ರಿಕೆಟಿಗರು ತಮ್ಮ ಆಟದ ಬಗ್ಗೆ ಮಾತನಾಡಿದರು ಎಂದು ಜೆಮಿಮಾ ಹೇಳಿದರು.
ವಿರಾಟ್ ಕೊಹ್ಲಿ ಕಿವಿಮಾತು: ಅವರು ನಿಜವಾಗಿಯೂ ಸ್ಮೃತಿ ಮತ್ತು ನನಗೆ ನಿಮ್ಮಿಬ್ಬರಿಗೂ ಮಹಿಳಾ ಕ್ರಿಕೆಟ್ ಅನ್ನು ಬದಲಾಯಿಸುವ ಶಕ್ತಿ ಇದೆ. ಇದನ್ನು ನೀವು ಮಾಡಿಯೇ ಮಾಡುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು. ಸ್ವಲ್ಪ ಸಮಯದ ಬಳಿಕ ಅವರ ಸಂಭಾಷಣೆ ಜೀವನ ಮತ್ತು ಕ್ರಿಕೆಟ್ ಹೊರತುಪಡಿಸಿ ಹಲವಾರು ಇತರ ವಿಷಯಗಳಿಗೆ ತಿರುಗಿತು. ಹೀಗೆ ಅವರ ಸಂಭಾಷಣೆ ಸುಮಾರು ನಾಲ್ಕು ಗಂಟೆಗಳ ಕಾಲ ನಡೆಯಿತು. ಇದೇ ವಿಚಾರಕ್ಕೆ ಕೆಫೆಯವರು ಹೊರಗಡೆ ಕಳುಹಿಸಿದರು ಎಂದು ಹೇಳಿದರು.
ಕೇವಲ ಒಂದು ತಮಾಷೆ ಕಾರಣಕ್ಕಾಗಿ ಎಲ್ಲರೂ ರೆಸ್ಟೋರೆಂಟ್‌ನಿಂದ ಹೊರಹೋಗಬೇಕಾಯಿತು ಎಂದು ಬಹಿರಂಗಪಡಿಸಿದರು.
ಅವರನ್ನು ಭೇಟಿಯಾಗಿ ಮಾತನಾಡಿ ಕೆಲ ಸಮಯ ಕಳೆದದ್ದು ಅವರ ನಮ್ಮ ನಡುವೆ ಉತ್ತಮ ಸ್ನೇಹ ಬೆಳೆದಂತಾಯಿತು. ಆದರೆ, ಕೆಫೆ ಸಿಬ್ಬಂದಿ ನಮ್ಮನ್ನು ಹೊರಗೆ ಕಳುಹಿಸಿದ್ದರಿಂದ ವಿರಾಟ್ ಕೊಹ್ಲಿ ಅವರ ಜೊತೆಗಿನ ಸಂಭಾಷಣೆಯನ್ನು ನಿಲ್ಲಿಸಲಾಯಿತು ಅಂತಲೂ ಹೇಳಿದರು.
ಇನ್ನು ಫೆಬ್ರವರಿ 2024ರಲ್ಲಿ ತಮ್ಮ ಎರಡನೇ ಮಗು ಅಕಾಯ್ ಜನಿಸಿದ ನಂತರ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಲಂಡನ್‌ಗೆ ಸ್ಥಳಾಂತರಗೊಳ್ಳುವ ನಿರ್ಧಾರ ಮಾಡಿದರು. ಎಲ್ಲಾ ಪ್ರಚಾರಗಳ ಗುಂಗಿನಿಂದ ದೂರ ಇರಲು ಈ ನಿರ್ಧಾರವನ್ನು ತೆಗೆದುಕೊಂಡರು. ಇನ್ನು ಅವರ ಮಕ್ಕಳು ಉದ್ಯಾನವನಗಳು ಮತ್ತು ಸುಂದರ ವಾತಾವರಣದಲ್ಲಿ ಸಂತೋಷದ ಕ್ಷಣಗಳನ್ನ ಆನಂದಿಸುತ್ತಿರುವುದನ್ನು ಆಗಾಗ್ಗೆ ಕಾಣಬಹುದು. ಈ ಫೋಟೋಗಳನ್ನು ಅಭಿಮಾನಿಗಳು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಉದಾಹರಣೆಗಳಿವೆ.
-
Virat Kohli: ವಿರಾಟ್ ಕೊಹ್ಲಿಗೆ ಕನ್ನಡ ಬರಲ್ಲ - ನಾರ್ಥಿಗಳು ಯಾಕೆ ಕಲಿಯಬೇಕು: ತುಳು ಬೆಂಬಲಿತರ ಪ್ರಶ್ನೆ, ಕನ್ನಡಿಗರ ಆಕ್ರೋಶ -
ಬೆಂಗಳೂರಲ್ಲಿ RCB ಪಂದ್ಯ: ಏ.15ರಂದು ಸ್ಟೇಡಿಯಂ ಸುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್












Click it and Unblock the Notifications