Virat Kohli: ಮುಂಬೈನಲ್ಲಿ ಬೆಂಗಳೂರು ಬೆಣ್ಣೆ ದೋಸೆಗೆ ಕ್ಯೂ ನಿಂತ ಜನ; ಸ್ಟಾರ್ ಕಪಲ್‌ಗೂ ಫೇವರಿಟ್
ಭಾರತದ ಅತಿದೊಡ್ಡ ನಗರವಾದ ಮುಂಬೈನಲ್ಲಿ ಬೆಂಗಳೂರಿನ ಖಾದ್ಯಕ್ಕಾಗಿ ಜನ ಕ್ಯೂ ನಿಂತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದಿಷ್ಟೇ ಆಗಿದ್ದರೆ ಈ ವಿಷಯ ದೊಡ್ಡ ಸುದ್ದಿ ಆಗುತ್ತಿರಲಿಲ್ಲ. ಆದರೆ ಮುಂಬೈನಲ್ಲಿ ಸಿಗುವ ಬೆಂಗಳೂರು ಖಾದ್ಯವನ್ನು ಕ್ರೀಡಾಪಟು ಒಬ್ಬರು ತಮ್ಮ ಸಂಗಾತಿಯೊಂದಿಗೆ ಸವಿದಿದ್ದಾರೆ. ಹಾಗಾದರೆ ಆ ಖಾದ್ಯ ಯಾವುದು? ಇದನ್ನು ಸವಿದ ದಂಪತಿ ಯಾರು ಎನ್ನುವ ಸಂಪೂರ್ಣ ವಿವರ ಈಗ ತಿಳಿಯೋಣ.
ದೇಶದ ವಿವಿದೆಡೆ ದಕ್ಷಿಣ ಭಾರತದ ವಿವಿಧ ಖಾದ್ಯಗಳು ತುಂಬಾನೇ ಫೇಮಸ್. ಇದರ ರುಚಿ ನೋಡಿದ ಜನ ಸಾಲುಗಟ್ಟಿ ನಿಂತು ಅದನ್ನು ಸವಿಯುತ್ತಾರೆ. ಮುಂಬೈನಲ್ಲೂ ಅತ್ಯುತ್ತಮ ದಕ್ಷಿಣ ಭಾರತದ ರೆಸ್ಟೋರೆಂಟ್‌ಗಳು ಇವೆ. ಇಲ್ಲಿ ದಕ್ಷಿಣ ಭಾರತದ ಹಲವಾರು ಖಾದ್ಯಗಳು ಸ್ಥಳೀಯರ ನೆಚ್ಚಿನ ಖಾದ್ಯಗಳಾಗಿವೆ. ಅಷ್ಟೇ ಅಲ್ಲ ಇಲ್ಲಿ ಸಿಗುವ ಬೆಂಗಳೂರು ಖಾದ್ಯ ಸ್ಟಾರ್ ಕಪಲ್‌ಗೂ ಫೇವರಿಟ್ ಅನ್ನೋ ವಿಚಾರ ಈಗ ಭಾರೀ ಸುದ್ದಿಯಾಗಿದೆ.

ಹಾಗಾದರೆ ಮುಂಬೈನಲ್ಲಿರುವ ದಕ್ಷಿಣ ಭಾರತದ ಆ ರೆಸ್ಟೋರೆಂಟ್‌ಗಳು ಯಾವುವು? ಅಲ್ಲಿ ಯಾವೆಲ್ಲಾ ಖಾದ್ಯಗಳು ಫೇಮಸ್ ಆಗಿವೆ? ಇಲ್ಲಿಗೆ ಭೇಟಿ ನೀಡಿದ ಕ್ರಿಕೆಟಿಗ ಯಾರು ಹಾಗೂ ಯಾವ ಖಾದ್ಯ ಅವರಿಗೆ ಫೇವರಿಟ್ ಎನ್ನುವುದನ್ನು ತಿಳಿಯೋಣ.
ಮುಂಬೈನಲ್ಲಿರುವ ದಕ್ಷಿಣ ಭಾರತದ ರೆಸ್ಟೋರೆಂಟ್‌ಗಳು:-
1. ಕೆಫೆ ಮದ್ರಾಸ್
ಮುಂಬೈನ ಅತ್ಯುತ್ತಮ ದಕ್ಷಿಣ ಭಾರತದ ರೆಸ್ಟೋರೆಂಟ್‌ಗಳ ಪಟ್ಟಿಯಲ್ಲಿ ಕೆಫೆ ಮದ್ರಾಸ್ ಅಗ್ರಸ್ಥಾನದಲ್ಲಿದೆ. ದಕ್ಷಿಣ ಭಾರತದ ರುಚಿಕರವಾದ ಖಾದ್ಯಗಳನ್ನು ಆನಂದಿಸಬೇಕಾದರೆ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ ಜನ. ಈ ರೆಸ್ಟೊರೆಂಟ್‌ನಲ್ಲಿ ಪಾನ್ಪೋಲಿ ಎಂಬ ಸಿಹಿ ಖಾದ್ಯ ಸಾಕಷ್ಟು ಜನಪ್ರಿಯವಾಗಿದೆ. ಇದನ್ನು ಬೆಲ್ಲ ಮತ್ತು ಬಾಳೆಹಣ್ಣುಗಳಿಂದ ತಯಾರಿಸಲಾಗುತ್ತದೆ.
Queue for ಬೆಂಗಳೂರು ಬೆಣ್ಣೆ ದೋಸೆ/Bengaluru Benne Dose in Bandra, Mumbai. pic.twitter.com/q8FH4kF4Ib
— DP SATISH (@dp_satish) November 10, 2024
2. ಆರ್ಯ ಭವನ
ಆರ್ಯ ಭವನ ರೆಸ್ಟೋರೆಂಟ್ ಅನ್ನು ಮುಂಬೈನಲ್ಲಿ ದಕ್ಷಿಣ ಭಾರತೀಯ ಪಾಕಪದ್ಧತಿಗೆ ವಿಶೇಷವೆಂದು ಪರಿಗಣಿಸಲಾಗಿದೆ. ಈ ರೆಸ್ಟೋರೆಂಟ್ ಬಿಸಿ ಬೇಳೆ ಬಾತ್, ಮೈಸೂರು ಮಸಾಲೆ ದೋಸೆಗೆ ಪ್ರಸಿದ್ಧವಾಗಿದೆ. ನಿತ್ಯ ನೂರಾರು ಜನ ಈ ರೆಸ್ಟೊರೆಂಟ್ ಮುಂದೆ ಸರದಿ ಸಾಲಿನಲ್ಲಿ ನಿಂತು ಮೈಸೂರು ಮಸಾಲೆ ದೋಸೆ ಸವಿಯುತ್ತಾರೆ.
3. ದಕ್ಷಿಣಾಯಣ
ಇನ್ನೂ ದಕ್ಷಿಣಾಯಣದಲ್ಲಿ ಅತ್ಯುತ್ತಮವಾದ ದಕ್ಷಿಣ ಭಾರತೀಯ ಆಹಾರವನ್ನು ಅನುಭವಿಸುತ್ತಾರೆ ಮುಂಬೈ ಜನ. ಇಲ್ಲಿ ಇಡ್ಲಿ, ರವಾ ಬೆಳ್ಳುಳ್ಳಿ ಮಸಾಲಾ ದೋಸೆ ಮತ್ತು ಉತ್ತಪ್ಪ ವಿಶೇಷ ರುಚಿಯೊಂದಿಗೆ ಲಭ್ಯವಿರುವುದರಿಂದ ಆಗಮಿಸುವ ಜನ ಹೆಚ್ಚು. ಈ ರೆಸ್ಟೋರೆಂಟ್ ಸಾಂಪ್ರದಾಯಿಕ ರುಚಿಯನ್ನು ನೀಡುವುದರಿಂದ ಮುಂಬೈನಲ್ಲಿ ಇದು ಆಲ್ ಟೈಮ್ ಫೇವರೆಟ್ ಆಗಿದೆ.
4. ಬಾಳೆ ಎಲೆ
ಬಾಳೆ ಎಲೆಯು ರುಚಿಕರವಾದ ದಕ್ಷಿಣ ಭಾರತೀಯ ತಿನಿಸುಗಳನ್ನು ಸಮಂಜಸವಾದ ವೆಚ್ಚದಲ್ಲಿ ನೀಡುತ್ತದೆ. ಇದರ ಮೆನುವಿನಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಭಕ್ಷ್ಯಗಳು ತುಂಬಾನೇ ಫೇಮಸ್. ಇಲ್ಲಿ ಗ್ರಾಹಕರು ಮೆಚ್ಚುವ ಓಟ್ ಮೀಲ್ ಉತ್ತಪಮ್, ಆಲೂಗಡ್ಡೆ ವಡಾ ಮತ್ತು ರವೆ ದೋಸೆ ಅಚ್ಚುಮೆಚ್ಚಿನ ಖಾದ್ಯಗಳಾಗಿವೆ.
5. ಊಟದ ಮನೆ
ಮುಂಬೈನ ಅತ್ಯುತ್ತಮ ದಕ್ಷಿಣ ಭಾರತದ ರೆಸ್ಟೋರೆಂಟ್‌ಗಳಲ್ಲಿ ಊಟದ ಮನೆ ಕೂಡ ಸೇರಿದೆ. ಈ ರೆಸ್ಟೋರೆಂಟ್ ಸಮಂಜಸವಾದ ವೆಚ್ಚಗಳಲ್ಲಿ ಆಧುನಿಕ ರುಚಿ ಹೊಂದಿದ ಆಹಾರವನ್ನು ಒದಗಿಸುತ್ತದೆ. ಈ ಉಪಾಹಾರ ಗೃಹ ನಿಜವಾದ ದಕ್ಷಿಣ ಭಾರತದ ಖಾದ್ಯಗಳ ರುಚಿಗಳನ್ನು ಬಯಸುವವರಿಗೆ ಒಂದು ವಿಭಿನ್ನ ರೆಸ್ಟೊರೆಂಟ್ ಆಗಿದೆ. ಇಲ್ಲಿ ಬಗೆ ಬಗೆಯ ರವಾ, ಮಸಾಲೆ ದೋಸೆಗಳು ಸಿಗುತ್ತವೆ.
ಮುಂಬೈನ ಬೆಣ್ಣೆ ರೆಸ್ಟೋರೆಂಟ್‌ನಲ್ಲಿ ಬೆಣ್ಣೆ ದೋಸೆ ಸವಿದ ವಿರುಷ್ಕಾ
ಮುಂಬೈನಲ್ಲಿರುವ ವಿಶೇಷ ದಕ್ಷಿಣ ಭಾರತದ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಮುಂಬೈನ ದಕ್ಷಿಣ ಭಾರತದ 'ಬೆಣ್ಣೆ'ಗೆ ರೆಸ್ಟೋರೆಂಟ್ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇತ್ತೀಚೆಗೆ ಭೇಟಿ ನೀಡಿ ವಿವಿಧ ಖಾದ್ಯಗಳನ್ನು ಸವಿದಿದ್ದಾರೆ. ರೆಸ್ಟೋರೆಂಟ್ ತನ್ನ ಅಧಿಕೃತ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ದಂಪತಿಗಳ ಫೋಟೋಗಳನ್ನು ಹಂಚಿಕೊಂಡಿದೆ.
ಫೋಟೋದಲ್ಲಿ ವಿರಾಟ್ ಮತ್ತು ಅನುಷ್ಕಾ ರೆಸ್ಟೋರೆಂಟ್‌ನ ಕೆಲವು ಉದ್ಯೋಗಿಗಳೊಂದಿಗೆ ಪೋಸ್ ನೀಡಿದ್ದಾರೆ. ಮತ್ತೊಂದು ಫೋಟೋದಲ್ಲಿ ವಿರುಷ್ಕಾ ಬೆಣ್ಣೆ ಮಸಾಲೆ ದೋಸೆ ಮತ್ತು ತುಪ್ಪದ ಪೋಡಿ ಇಡ್ಲಿಯಂತಹ ಆಹಾರ ಒಳಗೊಂಡಿರುವ ಅವರ ಆರ್ಡರ್ನ ರಸೀದಿಯನ್ನು ರೆಸ್ಟೋರೆಂಟ್ ಹಂಚಿಕೊಂಡಿದೆ. ಇನ್ನೂ ಮೂರನೇ ಫೋಟೋದಲ್ಲಿ ಕ್ಯಾಪ್ನಲ್ಲಿ ವಿರಾಟ್ ಅವರ ಆಟೋಗ್ರಾಫ್ ಅನ್ನು ತೋರಿಸಲಾಗಿದೆ.
ಇದು ಮುಂಬೈನಲ್ಲಿ ದಕ್ಷಿಣ ಭಾರತದ ಆಹಾರಗಳ ಮೇಲಿರುವ ಪ್ರೀತಿ ಹಾಗೂ ವಿಶೇಷ ಆಹಾರ ಪದ್ಧತಿಯನ್ನು ತೋರಿಸುತ್ತದೆ. ಒಟ್ಟಿನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಮುಂಬೈನಲ್ಲಿ ಬೆಂಗಳೂರು ಬೆಣ್ಣೆ ಮಸಾಲೆ ದೋಸೆ ಸವಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಜನ ಅದನ್ನು ಮೆಚ್ಚಿಕೊಂಡಿದ್ದಾರೆ.












Click it and Unblock the Notifications