ಕನ್ನಡಿಗ ರಾಹುಲ್ & ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ವಾರ್ ಶುರು... Virat Kohli
1... 2... 3... ಹಿಂಗೆ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿಯನ್ನ ಕೆಣಕಿದರೆ ಅದು ಎಂತಹ ಗಟ್ಟಿ ಆಟಗಾರನೇ ಆಗಿದ್ದರೂ ಎಣಿಸಿ ಎಣಿಸಿ ವಾಪಸ್ ಕೊಡೋದು ಗ್ಯಾರಂಟಿ. ಸ್ವತಃ ಕೊಹ್ಲಿ ಕೆಣಕಿ ಆಸ್ಟ್ರೇಲಿಯಾ ತಂಡ ಕೂಡ ನಾಶವಾಗಿ ಹೋಗಿದೆ. ವಿರಾಟ್ ಕೊಹ್ಲಿ ಜೊತೆ ಕ್ರಿಕೆಟ್ ಆಡುವಾಗ ಎಚ್ಚರ ಅನ್ನೋ ಮಾತನ್ನು ದೊಡ್ಡ, ದೊಡ್ಡ ಆಟಗಾರರೇ ಹೇಳುತ್ತಾರೆ. ಇದು ಸಾಲದು ಎನ್ನುವಂತೆ, ಕನ್ನಡಿಗ ರಾಹುಲ್ & ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ವಾರ್ ಶುರು...
ಹೌದು, ವಿರಾಟ್ ಕೊಹ್ಲಿ & ಕೆ.ಎಲ್. ರಾಹುಲ್ ನಡುವೆ ಬೆಂಗಳೂರಿಗೆ ಬಂದಾಗ ದೊಡ್ಡ ಮಾತಿನ ಯುದ್ಧವೇ ನಡೆದು ಹೋಗಿತ್ತು. ಒಂದು ಕಡೆ ಕೆ.ಎಲ್. ರಾಹುಲ್ ಕಾಂತಾರ ಸಿನಿಮಾ ರೀತಿಯಲ್ಲಿ ವೃತ್ತ ಬರೆದು, ಇದು ನನ್ನ ತವರು ಅಂತಾ ಬೆಂಗಳೂರು ಚಿನ್ನಸ್ವಾಮಿ ಪಿಚ್‌ನ ಬಳಿ ಆರ್ಭಟಿಸಿದ್ದರು. ಹಾಗೇ ವಿರಾಟ್ ಕೊಹ್ಲಿಗೂ ಪರೋಕ್ಷವಾಗಿ ಸವಾಲು ಹಾಕಿದ್ದರು. ಆ ಸಮಯದಲ್ಲಿ ಎಲ್ಲವನ್ನೂ ನಿಂತು ನೋಡಿದ್ದ ವಿರಾಟ್ ಕೊಹ್ಲಿ ಇಂದು ಮಾಡಿದ್ದು ಮಾತ್ರ ಇತಿಹಾಸ ಸೃಷ್ಟಿ ಮಾಡಿದೆ...

ಕನ್ನಡಿಗ ರಾಹುಲ್ & ಕೊಹ್ಲಿ ವಾರ್ ಶುರು!
ಬೆಂಗಳೂರು ಹುಡುಗ, ಕನ್ನಡಿಗ ಕೆ.ಎಲ್. ರಾಹುಲ್ ತಮ್ಮ ಅಸಮಾಧಾನ ಹೊರ ಹಾಕಿ & ಆರ್‌ಸಿಬಿ ತಂಡದ ಸೋಲಿಗೆ ಕಾರಣ ಆಗಿದ್ದರು. ಹೀಗಿದ್ದಾಗ ಬೆಂಗಳೂರು ಪಂದ್ಯದಲ್ಲಿ ಸೋಲು ಕಂಡಿದ್ದ ಆರ್‌ಸಿಬಿ ತಂಡ ಅದಕ್ಕೆ ಸೇಡು ತೀರಿಸಿಕೊಳ್ಳಲು ಕಾದು ಕುಳಿತಿತ್ತು. ಹೀಗಾಗಿಯೇ, ಭಾನುವಾರ ನಡೆದ ಆರ್‌ಸಿಬಿ & ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಇಡೀ ಇಂಡಿಯಾ ನೋಡಲು ಕುಳಿತಿತ್ತು. ಹೀಗಿದ್ದಾಗಲೇ, ಕನ್ನಡಿಗ ರಾಹುಲ್ & ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ವಾರ್ ಶುರುವಾಗಿತ್ತು...
ವಿರಾಟ್ ಕೊಹ್ಲಿಯನ್ನ ಕೆಣಕಿದರೆ ಉಳಿಗಾಲ ಇಲ್ಲ ಎನ್ನಬಹುದು. ಈಗಾಗಲೇ ಹಲವು ಕ್ರಿಕೆಟ್ ಪ್ಲೇಯರ್ಸ್ ವಿರಾಟ್ ಕೊಹ್ಲಿ ಸಹವಾಸಕ್ಕೆ ಬಂದು ಕಾಣದಂತೆ ಮಾಯ ಆಗಿ ಹೋಗಿದ್ದಾರೆ. ಹೀಗಿದ್ದರೂ ವಿರಾಟ್ ಕೊಹ್ಲಿ ಸಹವಾಸಕ್ಕೆ ಬಂದಿದ್ದ ಕನ್ನಡಿಗ ಕೆ.ಎಲ್. ರಾಹುಲ್, ನಮ್ಮ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ವೃತ್ತ ಬರೆದಿದ್ದರು, ಅಲ್ಲದೆ ಕೊಹ್ಲಿಗೂ ಸವಾಲು ಹಾಕಿ ಹೋಗಿದ್ದರು.
ಇದೇ ಸವಾಲು ಸ್ವೀಕರಿಸಿದ್ದ ಆರ್‌ಸಿಬಿ ಅಭಿಮಾನಿಗಳ ದೇವರು ವಿರಾಟ್ ಕೊಹ್ಲಿ & ಹುಡುಗರು ಇದೀಗ ನೇರವಾಗಿ ದೆಹಲಿ ಕೋಟೆಗೆ ನುಗ್ಗಿ ಸೇಡು ತೀರಿಸಿಕೊಂಡಿದ್ದಾರೆ. ಇದೇ ಪಂದ್ಯದಲ್ಲೇ ವಿರಾಟ್ ಕೊಹ್ಲಿ ದೆಹಲಿ ಟೀಂನ ಕೆಎಲ್ ರಾಹುಲ್ ವಿರುದ್ಧ ಕೂಡ, ಕ್ರೀಡಾಂಗಣದಲ್ಲೇ ನಿಂತು ಗುಡುಗಿದ್ದಾರೆ. ಹಾಗೇ ರಾಹುಲ್‌ಗೆ ಪ್ರೀತಿ ಕೂಡ ತೋರಿಸಿದ್ದಾರೆ!
ಕೆ.ಎಲ್. ರಾಹುಲ್ & ಕೊಹ್ಲಿ ಲವ್!
ಹೌದು, ವಿರಾಟ್ ಕೊಹ್ಲಿ ಮಗುವಿನ ರೀತಿ ಮನಸ್ಸಿನ ವ್ಯಕ್ತಿ. ಆದರೆ ಕ್ರಿಕೆಟ್ ಅಂತಾ ಮ್ಯಾಚ್ ವಿಚಾರಕ್ಕೆ ಬಂದಾಗ ಯಾರನ್ನೂ ಕೇರ್ ಮಾಡದೇ ಮುಂದೆ ನುಗ್ಗುತ್ತಾರೆ. ಇಂದು ಕೂಡ, ಕೆಎಲ್ ರಾಹುಲ್ ವಿರುದ್ಧ ಸೇಡು ತೀರಿಸಿಕೊಳ್ಳಲು ಆಡಿದ ವಿರಾಟ್ ಕೊಹ್ಲಿ ಭರ್ಜರಿಯಾಗಿ 51 ರನ್ ಬಾರಿಸಿದ್ದರು. ಅಲ್ಲದೆ ಇದೇ ಸಮಯದಲ್ಲಿ ಮ್ಯಾಚ್ ಗೆದ್ದಾಗ ಕುಣಿದಾಡಿದರು.
ಈ ರೀತಿ ವಿರಾಟ್ ಕೊಹ್ಲಿ ಅವರ ಸಂಭ್ರಮಾಚರಣೆ ನೋಡುತ್ತಾ ದೆಹಲಿ ತಂಡದ ಆಟಗಾರರು ಕೂಡ ಸೈಲೆಂಟ್ ಆಗಿ ನಿಂತಿದ್ದರು. ಕೊನೆಗೆ ಎಲ್ಲವನ್ನೂ ಮರೆತ ವಿರಾಟ್ ಕೊಹ್ಲಿ ಅವರು, ನೇರವಾಗಿ ಕೆ.ಎಲ್. ರಾಹುಲ್ ಬಳಿ ಹೋಗಿ ತಬ್ಬಿಕೊಂಡು ನಗು ನಗುತ್ತಾ ಮಾತನಾಡಿದರು. ಅಲ್ಲದೆ ಲೆಕ್ಕ ಚುಕ್ತಾ ಆಯ್ತು ಮಗಾ ಅನ್ನುವಂತೆ ಪ್ರೀತಿಯಿಂದ ರಿಯಾಕ್ಷನ್ ಕೊಟ್ಟರು.












Click it and Unblock the Notifications