Virat Kohli: ವಿರಾಟ್ ಕೊಹ್ಲಿ ಪಿತ್ತ ಕೆರಳಿಸಿದ ಆಸ್ಟ್ರೇಲಿಯನ್ ಫ್ಯಾನ್ಸ್‌ಗೆ ‘ಥೂ’ ಎಂದು ಉಗಿದ....
ವಿರಾಟ್ ಕೊಹ್ಲಿ ತಾಳ್ಮೆಯಿಂದ ಇದ್ದರೆ ಮಾತ್ರ ಮನುಷ್ಯ, ಅಪ್ಪಿತಪ್ಪಿ ವಿರಾಟ್ ಕೊಹ್ಲಿಯನ್ನ ಯಾರಾದರೂ ಕೆಣಕಿಬಿಟ್ಟರೆ ಮುಗೀತು ಕಥೆ... ಹೌದು, ಹೀಗೆ ವಿರಾಟ್ ಕೊಹ್ಲಿ ಕುರಿತಾಗಿ ಅಭಿಮಾನಿಗಳು ಶತ್ರುಗಳಿಗೆ ಎಚ್ಚರಿಕೆ ನೀಡುತ್ತಾರೆ. ಕಾರಣ ಏನಪ್ಪ ಅಂದ್ರೆ, ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ವಾರ್ ಮಾಡೋದಕ್ಕೆ ನಿಂತರೆ ಎದುರು ನಿಂತು ಗೆಲ್ಲೋದಕ್ಕೆ ಯಾರ ಕೈಯಿಂದಲೂ ಸಾಧ್ಯವೇ ಇಲ್ಲ. ಇಷ್ಟೆಲ್ಲಾ ಗೊತ್ತಿದ್ದರೂ ಆಸ್ಟ್ರೇಲಿಯನ್ ಅಭಿಮಾನಿ ಬಳಗ ವಿರಾಟ್ ಕೊಹ್ಲಿ ಅವರ ಪಿತ್ತ ಕೆರಳಿಸಿತ್ತು!
ಇಂಡಿಯಾ & ಆಸ್ಟ್ರೇಲಿಯಾ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿ 4ನೇ ಟೆಸ್ಟ್ ಪಂದ್ಯ ಈಗ ಆಸ್ಟ್ರೇಲಿಯಾದ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದಲ್ಲಿ ಗೆದ್ದು ಮುಂದೆ ಹೋಗಬೇಕಾದ ಅನಿವಾರ್ಯತೆ ಇಂಡಿಯಾ & ಆಸ್ಟ್ರೇಲಿಯಾ ಎರಡೂ ದೇಶಗಳಿಗೂ ಇದೆ. ಇಂತಹ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಆಟಗಾರ ಕೋನ್‌ಸ್ಟಾಸ್ ನಡುವೆ ದೊಡ್ಡ ಜಗಳ ನಡೆದಿದ್ದು, ಈ ಘಟನೆ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರನ್ನ ಆಸಿಸ್ ಅಭಿಮಾನಿಗಳು ಕೆಣಕಿಬಿಟ್ಟರು!

ಕೆಣಕಿದರೆ ಬಿಡೋದಿಲ್ಲ ನಮ್ಮ ಕೊಹ್ಲಿ!
ಬೌಂಡರಿ ಲೈನ್ ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಅವರು ಕಷ್ಟಪಟ್ಟು ಆಗ ಚಂಡು ತಡೆದರು. ವಿರಾಟ್ ಕೊಹ್ಲಿ ಅವರ ಈ ಫೀಲ್ಡಿಂಗ್ ಕೆಪಾಸಿಟಿ ನೋಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಚಪ್ಪಾಳೆ ತಟ್ಟುವಾಗಲೇ, ಆಸ್ಟ್ರೇಲಿಯಾ ಅಭಿಮಾನಿಗಳು ಸುಮ್ಮನೇ ಇರದೆ ಜೋರಾಗಿ ನಗುತ್ತಾ ವಿರಾಟ್ ಕೊಹ್ಲಿ ಅವರನ್ನು ಕೆಣಕಿಬಿಟ್ಟರು. ಆಗ ಕೂಲಿಂಗ್ ಗ್ಲಾಸ್ ತೆಗೆದುಕೊಳ್ಳುವ ನೆಪದಲ್ಲಿ ಬೌಂಡರಿ ಲೈನ್ ಒಳಗೆ ಬಂದ ವಿರಾಟ್ ಕೊಹ್ಲಿ ಏನು ಮಾಡಿದ್ರು ಗೊತ್ತಾ?
'ಕೊಹ್ಲಿ ಉಗಿದಿದ್ದು ಯಾರಿಗೆ ಅಂತಾ?'
ವಿರಾಟ್ ಕೊಹ್ಲಿ ಅವರನ್ನು ಕೆಣಕಿದರೆ ಅಲ್ಲೇ ಡ್ರಾ & ಅಲ್ಲೇ ಬಹುಮಾನ ಅನ್ನೋದು ಈಗ ಮತ್ತೆ ಪ್ರೂವ್ ಆಗಿದೆ. ಅದು ಹೇಗೆ ಅಂದ್ರೆ, ಬೌಂಡರಿ ಲೈನ್ ಅಲ್ಲಿ ಉತ್ತಮವಾಗಿ ಫೀಲ್ಡಿಂಗ್ ಮಾಡಿದ್ದರೂ ವಿರಾಟ್ ಕೊಹ್ಲಿ ಅವರನ್ನು ಕೆಣಕಿದ ಆಸ್ಟ್ರೇಲಿಯಾ ಅಭಿಮಾನಿಗಳಿಗೆ ಇದೀಗ ಕೊಹ್ಲಿ ಅವರು ಉಗಿದು ಉತ್ತರ ನೀಡಿದ್ದಾರೆ ಅಂತಾ ವಿಡಿಯೋ ಒಂದನ್ನ ವೈರಲ್ ಮಾಡ್ತಾ ಇದ್ದಾರೆ ನೆಟ್ಟಿಗರು.
ಬಾಲ್ ತಡೆದು ನಿಲ್ಲಿಸಿದ ನಂತರ, ಕೂಲಿಂಗ್ ಗ್ಲಾಸ್ ತೆಗೆದುಕೊಳ್ಳುವ ನೆಪದಲ್ಲಿ ಬೌಂಡರಿ ಲೈನ್ ಒಳಗೆ ಬಂದ ವಿರಾಟ್ ಕೊಹ್ಲಿ ಅವರು ನೇರವಾಗಿ ತಮ್ಮ ಬಾಯಿ ಒಳಗಿದ್ದ ಚ್ಯೂಯಿಂಗ್ ಗಮ್ ಹೊರಗೆ ಉಗಿದಿದ್ದಾರೆ. ಆಸ್ಟ್ರೇಲಿಯಾ ಅಭಿಮಾನಿಗಳನ್ನೇ ಟಾರ್ಗೆಟ್ ಮಾಡಿ ಈ ರೀತಿ ರಿವೇಂಜ್ ತೀರಿಸಿಕೊಂಡಿದ್ದಾರೆ ಕೊಹ್ಲಿ ಅವರು ಅಂತಾ ಕೆಲವರು ಹೇಳ್ತಾ ಇದ್ದರೆ, ಮತ್ತೊಂದು ಕಡೆಯಲ್ಲಿ ಇದರಲ್ಲಿ ಏನು ತಪ್ಪಿದೆ? ಅಂತಾ ಕೆಲವರು ಹೇಳುತ್ತಿರುವುದು ಚರ್ಚೆಗೆ ವೇದಿಕೆ ಒದಗಿಸಿದೆ. ಮತ್ತೊಂದು ಕಡೆ ಈ ವಿಡಿಯೋ ಫುಲ್ ವೈರಲ್ ಆಗುತ್ತಿದೆ!












Click it and Unblock the Notifications