ಸೆಡೆ ಆಂಗ್ಲರಿಗೆ ವಡೆ ತಿನ್ನಿಸಿದ ವಿರಾಟ್ ಕೊಹ್ಲಿ! Virat Kohli
ವಿರಾಟ್ ಕೊಹ್ಲಿ ಇವತ್ತು ಮತ್ತೆ ಕ್ರಿಕೆಟ್ ಮೈದಾನದಲ್ಲಿ ಗುಡುಗಿದ್ದು, ತಮ್ಮ ವಿರುದ್ಧ ಕಮೆಂಟ್ ಮಾಡಿದ್ದ ವಿರೋಧಿಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ 3ನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರ ಕಂಡು ಆಂಗ್ಲರ ಪಡೆ ಬೆಚ್ಚಿಬಿದ್ದಿದೆ. ಶುಭಮನ್ ಗಿಲ್ ಜೊತೆ ಸೇರಿಕೊಂಡು ಆಂಗ್ಲರ ಹುಟ್ಟಡಗಿಸಿದ ವಿರಾಟ್ ಕೊಹ್ಲಿ, ಹಲವು ದಿನಗಳ ಬಳಿಕ ಇವತ್ತು ಭರ್ಜರಿ ಅರ್ಧಶತಕ ಬಾರಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ, ಕೇವಲ 6 ರನ್‌ಗೆ ತನ್ನ ಮೊದಲ ವಿಕೆಕ್‌ನ ಕಳೆದುಕೊಂಡು ಆತಂಕದಲ್ಲಿ ಸಿಲುಕಿತ್ತು. ಹೀಗೆ ಮೊದಲ ವಿಕೆಟ್ ಬಿದ್ದ ನಂತರ ವಿರಾಟ್ ಕೊಹ್ಲಿ & ಶುಭಮನ್ ಗಿಲ್ ಜೋಡಿ ಇಂಗ್ಲೆಂಡ್ ಬೌಲಿಂಗ್ ಪಡೆಯ ಬುಡ ಅಲುಗಾಡುವಂತೆ ಮಾಡಿತ್ತು. ಆಂಗ್ಲರ ಬೌಲಿಂಗ್ ದಾಳಿ ಧೂಳಿಪಟ ಮಾಡಿದ ಕೊಹ್ಲಿ ಮತ್ತು ಗಿಲ್ ನೋಡ ನೋಡುತ್ತಲೇ ಅರ್ಧಶತಕ ಬಾರಿಸಿದರು. ಅದರಲ್ಲೂ ವಿರಾಟ್ ಕೊಹ್ಲಿ ಇವತ್ತು ಗಳಿಸಿದ ಹಾಫ್ ಸೆಂಚ್ಯುರಿ ಮತ್ತೆ ಅವರ ಕ್ರಿಕೆಟ್ ವೃತ್ತಿ ಜೀವನಕ್ಕೆ ಹೊಸ ಕಳೆಯನ್ನೇ ನೀಡಿದಂತೆ ಕಾಣುತ್ತಿದೆ.

ವಿರಾಟ್ ಕೊಹ್ಲಿ 52 ರನ್ ಅಬ್ಬರ
ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಅದಕ್ಕಾಗಿ ಪೂರ್ವಸಿದ್ಧತೆ ಕೈಗೊಳ್ಳಲು ಭಾರತಕ್ಕೆ ಇಂಗ್ಲೆಂಡ್ ವಿರುದ್ಧದ ಸರಣಿ ಸಿಕ್ಕಿತ್ತು. ಹೀಗೆ, ತನಗೆ ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಂಡ ಭಾರತ ತಂಡ ಈಗಾಗಲೇ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ತಕ್ಕಪಾಠ ಕಲಿಸಿದೆ. 3ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಔಟ್ ಆದ ನಂತರದಲ್ಲಿ ಬಂದ ವಿರಾಟ್ ಕೊಹ್ಲಿ, 55 ಬಾಲ್ ಆಡಿ 52 ರನ್ ಗಳಿಸಿದ್ದಾರೆ. ಹಾಗೇ ತಮ್ಮ ಆಟದಲ್ಲಿ 7 ಬೌಂಡರಿ & 1 ಸಿಕ್ಸ್ ಕೂಡ ಗಿಫ್ಟ್ ಕೊಟ್ಟಿದ್ದಾರೆ ವಿರಾಟ್ ಕೊಹ್ಲಿ.
ವಿರಾಟ್ ಕೊಹ್ಲಿ ಅವರಿಗೆ ಸಾಥ್ ನೀಡಿದ್ದ ಶುಭಮನ್ ಗಿಲ್ ಭಾರಿ ಅಬ್ಬರ ತೋರಿಸಿದ್ದಾರೆ. ಒಂದೊಂದು ಶಾಟ್ ಕೂಡ ಅದ್ಭುತವಾಗಿ ಬೀಸಿದ ಶುಭಮನ್ ಗಿಲ್, ಇತ್ತೀಚಿನ ವರದಿಗಳು ಬಂದಾಗ 71 ಬಾಲ್ ಆಡಿ 78 ರನ್ ಗಳಿಸಿದ್ದರು. 12 ಬೌಂಡರಿ & 2 ಸಿಕ್ಸರ್ ಬಾರಿಸಿ ಇನ್ನೂ ಆಟ ಆಡುತ್ತಿದ್ದಾರೆ ಶುಭಮನ್ ಗಿಲ್. ಈ ಮೂಲಕ ಶತಕ ಬಾರಿಸಲು ಹತ್ತಿರ ಇದ್ದಾರೆ. ಆದರೆ ವಿರಾಟ್ ಕೊಹ್ಲಿ ಈಗಾಗಲೇ ಔಟ್ ಆಗಿದ್ದಾರೆ.












Click it and Unblock the Notifications