RCB VS CSK: ವಿಜಯ್ ಮಲ್ಯ ಸ್ಪೆಷಲ್ ವಿಶ್, ಆರ್‌ಸಿಬಿ ಹುಡುಗರ ಬೆನ್ನುತಟ್ಟಿ ಗ್ರೇಟ್ ಎಂದ ಮದ್ಯದ ದೊರೆ!
ಆರ್‌ಸಿಬಿ ಬೆಂಗಳೂರು ತಂಡ ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿದ್ದು, ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಹೀಗೆ ಆರ್‌ಸಿಬಿ ಗೆದ್ದು ಬೀಗುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮಾಲೀಕ, ವಿಜಯ್ ಮಲ್ಯ ಅವರು RCB ಹುಡುಗರಿಗೆ ಸ್ಪೆಷಲ್ ಸಂದೇಶ ಕಳುಹಿಸಿದ್ದಾರೆ!
ಇಂಡಿಯಾ ಪೂರ್ತಿ ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದ ಮೇಲೆ ಕಣ್ಣಿಟ್ಟು ಕೂತಿತ್ತು. ಯಾಕಂದ್ರೆ ನಿನ್ನೆ ಆರ್‌ಸಿಬಿ & ಸಿಎಸ್‌ಕೆ ನಡುವೆ ಮಹತ್ವದ ಮ್ಯಾಚ್ ನಡೆದಿತ್ತು. ಈ ಕಾರಣಕ್ಕೆ ಕೋಟ್ಯಂತರ ಅಭಿಮಾನಿಗಳು ಆರ್‌ಸಿಬಿ ಬೆಂಗಳೂರು ಟೀಂನ ಗೆಲುವಿಗಾಗಿ ಪ್ರಾರ್ಥನೆ ಮಾಡಿದ್ರು. ಅದರಲ್ಲೂ ಕೋಟಿ ಕೋಟಿ ಅಭಿಮಾನಿಗಳು ಆರ್‌ಸಿಬಿ ಗೆದ್ದ ತಕ್ಷಣ ರೋಡ್ ರೋಡ್‌ನಲ್ಲಿ ಸಂಭ್ರಮಿಸಿ, ತಮ್ಮ ಖುಷಿ ಹೊರಹಾಕಿದ್ದಾರೆ. ಇದೇ ಸಮಯದಲ್ಲಿ ಆರ್‌ಸಿಬಿ ಆಟಗಾರರಿಗೆ ದೂರದ ಲಂಡನ್ ನಗರದಿಂದ ವಿಶೇಷ ಸಂದೇಶವು ಬಂದಿದ್ದು, ಆರ್‌ಸಿಬಿ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಆರ್‌ಸಿಬಿ ಆಟಗಾರರಿಗೆ ವಿಶೇಷ ಸಂದೇಶ ಕಳುಹಿಸಿದ್ದಾರೆ. ಹಾಗಾದರೆ ಮಲ್ಯ ಹೇಳಿದ್ದೇನು? ಮುಂದೆ ಓದಿ.

ಹೃದಯ ಬಾಯಿಗೆ ಬರಿಸಿ ಗೆದ್ದರು!
ಆರ್‌ಸಿಬಿ ಟೀಂ ನೀಡಿದ್ದ 219 ರನ್ ಗುರಿ ಬೆನ್ನುಹತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಟೀಂ ಶುರುವಲ್ಲಿ 2 ವಿಕೆಟ್ ಕಳೆದುಕೊಂಡು ಪರದಾಡಿತ್ತು. CSK ತಂಡದ ಕ್ಯಾಪ್ಟನ್, ರುತುರಾಜ್ ಗಾಯಕ್ವಾಡ್ ಸೊನ್ನೆ ಸುತ್ತಿ ಡಕ್ ಔಟ್ ಆಗಿ ಪೆವಿಲಿಯನ್ ಗೂಡು ಸೇರಿದ್ರು. ನಂತರ ಬಂದ ಡೇರಿಲ್ ಮಿಚೆಲ್ ಕೂಡ ಜಾಸ್ತಿ ಹೊತ್ತು ನಿಲ್ಲಲೇ ಇಲ್ಲ. 4 ರನ್‌ಗೆ ಡೇರಿಲ್ ಮಿಚೆಲ್ ವಿಕೆಟ್ ಒಪ್ಪಿಸಿ ಹೋದರು. ಇದಾದ ನಂತರ ಆರ್‌ಸಿಬಿ ತಂಡಕ್ಕೆ ಒಂದಷ್ಟು ಅಡೆ ತಡೆ ಎದುರಾಗಿ, ಸಂಕಷ್ಟದ ಪರಿಸ್ಥಿತಿ ನಿರ್ಮಾಣ ಆಗಿತ್ತು.
ರಚಿನ್ ರವೀಂದ್ರ ಅಬ್ಬರ ಜೋರು!
ರಚಿನ್ ರವೀಂದ್ರ 37 ಬಾಲ್ ಆಡಿ 61 ರನ್ ಗಳಿಸಿ 3 ಸಿಕ್ಸರ್ ಹಾಗೂ 5 ಬೌಂಡರಿ ಬಾರಿಸಿ ಗಮನ ಸೆಳೆದರು. ರಚಿನ್ ಬಿಟ್ಟರೆ, ರವೀಂದ್ರ ಜಡೇಜಾ 22 ಬಾಲ್‌ಗೆ 42 ರನ್ ಗಳಿಸಿದರು. ಜಡೇಜಾ 3 ಬೌಂಡರಿ & 3 ಸಿಕ್ಸರ್ ಬಾರಿಸಿದರು. ಅಂತಿಮವಾಗಿ ಚೆನ್ನೈ ತಂಡ 191 ರನ್‌ಗೆ ತನ್ನ ಇನ್ನಿಂಗ್ಸ್ ಮುಗಿಸಿತು. ಈ ಮೂಲಕ ಆರ್‌ಸಿಬಿ ತಂಡ 27 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆಗಲೇ, ಇಡೀ ಇಂಡಿಯಾ ಆರ್‌ಸಿಬಿ ತಂಡಕ್ಕೆ ಶುಭಾಶಯ ಕೋರಿತ್ತು. ಇನ್ನು ದೂರದ ಲಂಡನ್‌ನಿಂದ ವಿಜಯ್ ಮಲ್ಯ ಆರ್‌ಸಿಬಿ ತಂಡಕ್ಕೆ ವಿಶ್ ಮಾಡಿದ್ದಾರೆ. ಹಾಗಾದ್ರೆ ವಿಜಯ್ ಮಲ್ಯ ಹೇಳಿದ್ದು ಏನು? ಮುಂದೆ ಓದಿ.
Heartiest congratulations to RCB for qualifying in the top four and reaching the IPL playoffs. Great determination and skill have created a winning momentum after a disappointing start. Onward and upward towards the trophy.
— Vijay Mallya (@TheVijayMallya) May 18, 2024
ಮತ್ತಷ್ಟು ಮೇಲಕ್ಕೆ ಮುನ್ನುಗ್ಗಿ!
ಆರ್‌ಸಿಬಿ ತಂಡಕ್ಕೆ ಶುಭಾಶಯ ಹೇಳಿರುವ ವಿಜಯ್ ಮಲ್ಯ, 'ಅಗ್ರ ನಾಲ್ಕರಲ್ಲಿ ಅರ್ಹತೆಯ ಗಿಟ್ಟಿಸಿ, ಐಪಿಎಲ್ ಪ್ಲೇಆಫ್ ತಲುಪಿದ್ದಕ್ಕೆ ಆರ್‌ಸಿಬಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನಿರಾಶಾದಾಯಕ ಆರಂಭದ ನಂತರ ಕೂಡ ಉತ್ತಮ ನಿರ್ಣಯ ಮತ್ತು ಕೌಶಲ್ಯವು ಈ ಗೆಲುವಿನ ಅದ್ಭುತ ಸನ್ನಿವೇಶ ಸೃಷ್ಟಿಸಿದೆ. ಟ್ರೋಫಿ ಗೆಲ್ಲಲು ಮುನ್ನುಗ್ಗಿ, ಮತ್ತಷ್ಟು ಮೇಲಕ್ಕೆ ಮುನ್ನುಗ್ಗಿ.' ಎಂದು ಆರ್‌ಸಿಬಿ ತಂಡದ ಆಟಗಾರರಿಗೆ ಮದ್ಯದ ದೊರೆ ಎನ್ನಿಸಿಕೊಂಡಿದ್ದ, RCB ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ವಿಶ್ ಮಾಡಿದ್ದಾರೆ.
ಕ್ರಿಸ್ ಜೊತೆ ರಿಷಬ್ ಪಂದ್ಯ ವೀಕ್ಷಣೆ!
ಗ್ಯಾಲರಿಯಲ್ಲಿ ಕೂತು ಮ್ಯಾಚ್ ನೋಡಿದ ರಿಷಬ್ ಶೆಟ್ಟಿ & ಕ್ರಿಸ್ ಗೇಲ್ ಸಖತ್ ಎಂಜಾಯ್ ಮಾಡಿದ್ರು. ಹೀಗಿದ್ದಾಗ, ಮೊಹಮ್ಮದ್ ಸಿರಾಜ್ ಮ್ಯಾಚ್ ಮುಗಿದ ನಂತರ ಬಂದು ಒಂದು ಸಲ್ಯೂಟ್ ಹಾಕಿದ್ರು. ಕ್ರಿಸ್ ಗೇಲ್ ಹಾಗೂ ರಿಷಬ್ ಶೆಟ್ಟಿ ಅವರನ್ನ ಮಾತನಾಡಿಸಿದರು. ಈ ವಿಡಿಯೋ ಈಗ ಫುಲ್ ವೈರಲ್ ಆಗುತ್ತಿದೆ. ಇದರ ಜೊತೆಗೆ ರಿಷಬ್ ಶೆಟ್ಟಿ ಕೂಡ ಕೈಯಲ್ಲಿ ಆರ್‌ಸಿಬಿ ಬಾವುಟ ಹಿಡಿದು ಕ್ರಿಸ್ ಗೇಲ್ ಅವರ ಜೊತೆಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ಈ ಮೂಲಕ ಕಾಂತಾರ ರಿಷಬ್ ಶೆಟ್ಟಿ ಅವರು ಮತ್ತೊಮ್ಮೆ ಹಲ್‌ಚಲ್ ಎಬ್ಬಿಸಿದ್ದಾರೆ. ಈಗ ರಿಷಬ್ ಶೆಟ್ಟಿ ಅವರು ಆರ್‌ಸಿಬಿ ಮ್ಯಾಚ್ ನೋಡಿರುವ ಫೋಟೋಸ್ ವೈರಲ್ ಆಗುತ್ತಿವೆ.












Click it and Unblock the Notifications