14 ವರ್ಷದ ವೈಭವ್ ಸೂರ್ಯವಂಶಿ ಕ್ರಿಕೆಟ್‌ನಿಂದ ಬ್ಯಾನ್ ಆಗುವ ಬಗ್ಗೆ... Vaibhav Suryavanshi
14 ವರ್ಷದ ವೈಭವ್ ಸೂರ್ಯವಂಶಿ ಈಗ ಕ್ರಿಕೆಟ್ ಲೋಕದ ಹೀರೋ ಆಗಿದ್ದು ಭವಿಷ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಸಚಿನ್ ತೆಂಡೂಲ್ಕರ್ ದಾಖಲೆಗಳನ್ನ ಮುರಿಯುತ್ತಾನೆ ಅಂತಾ ಎಲ್ಲರೂ ಹೇಳುತ್ತಿದ್ದಾರೆ. ಐಪಿಎಲ್ ಅಖಾಡದಲ್ಲಿ 100 ರನ್ ಬಾರಿಸಿ ದಾಖಲೆ ಬರೆದಿದ್ದ ಇದೇ ವೈಭವ್ ಸೂರ್ಯವಂಶಿ ಈಗ ಇಂಗ್ಲೆಂಡ್ ತಂಡದ ವಿರುದ್ಧ ಕೇವಲ 78 ಬಾಲ್ ಆಡಿ 143 ರನ್ ಚಚ್ಚಿ ಬಿಸಾಡಿದ್ದಾನೆ. 10 ಸಿಕ್ಸರ್ ಕೂಡ ಬಾರಿಸಿ ಇತಿಹಾಸ ನಿರ್ಮಿಸಿದ್ದಾನೆ ಬಾಲಕ ವೈಭವ್ ಸೂರ್ಯವಂಶಿ. ಹೀಗಿದ್ದಾಗಲೇ, 14 ವರ್ಷದ ವೈಭವ್ ಸೂರ್ಯವಂಶಿ ಕ್ರಿಕೆಟ್‌ನಿಂದ ಬ್ಯಾನ್ ಆಗುವ ಬಗ್ಗೆ...
ವೈಭವ್ ಸೂರ್ಯವಂಶಿ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿದ್ದು, ಈಗಾಗಲೇ ಕೋಟಿ ಕೋಟಿ ರೂಪಾಯಿ ಆಸ್ತಿ 14 ವರ್ಷ ವಯಸ್ಸಿನ ಚಿಕ್ಕ ಹುಡುಗ ವೈಭವ್ ಸೂರ್ಯವಂಶಿ ಪಾಲು ಆಗಿದೆ. ಅದರಲ್ಲೂ ಸೂರ್ಯವಂಶಿ ಪಾಲಿಗೆ ಐಪಿಎಲ್ ದೊಡ್ಡ ಕೊಡುಗೆ ನೀಡಿದ್ದು, ಕ್ರಿಕೆಟ್ ಲೋಕದಲ್ಲಿ ವೈಭವ್ ಸೂರ್ಯವಂಶಿ ಹವಾ ಕೂಡ ಜೋರಾಗಿದೆ. 14 ವರ್ಷ ವಯಸ್ಸಿನ ಚಿಕ್ಕ ಹುಡುಗ ವೈಭವ್ ಸೂರ್ಯವಂಶಿ ಇಷ್ಟೆಲ್ಲಾ ಹೆಸರು ಮಾಡುತ್ತಾ ದುಡ್ಡು ಮಾಡುತ್ತಿರುವ ವಿಚಾರ ಹಲವರಿಗೆ ಕಣ್ಣು ಕುಕ್ಕುತ್ತಿದೆ. ಇಂತಹ ಸಮಯದಲ್ಲೇ, 14 ವರ್ಷದ ವೈಭವ್ ಸೂರ್ಯವಂಶಿ ಅಭಿಮಾನಿಗಳಿಗೆ ದಿಢೀರ್ ಆಘಾತ ಎದುರಾಗಿದೆ...

14 ವರ್ಷದ ವೈಭವ್ ಸೂರ್ಯವಂಶಿ ಬ್ಯಾನ್?
ವೈಭವ್ ಸೂರ್ಯವಂಶಿ ಭವಿಷ್ಯದಲ್ಲಿ ವಿರಾಟ್ ಕೊಹ್ಲಿ ಅಥವಾ ಸಚಿನ್ ತೆಂಡೂಲ್ಕರ್ ಅಂತಾರೆ ತಜ್ಞರು. ಯೆಸ್, ಕ್ರಿಕೆಟ್ ಲೋಕದಲ್ಲಿ ಈಗ ವೈಭವ್ ಸೂರ್ಯವಂಶಿ ಹೆಸರು ದೊಡ್ಡದಾಗಿ ರಾರಾಜಿಸುತ್ತಾ ಇದ್ದು ಅಭಿಮಾನಿಗಳು ಕುಣಿದಾಡುತ್ತಿದ್ದಾರೆ. ಪ್ರಪಂಚದ ಹಲವು ಮಾಧ್ಯಮಗಳು ಕೂಡ ವೈಭವ್ ಸೂರ್ಯವಂಶಿ ಬಗ್ಗೆ ಚರ್ಚೆ ಮಾಡುತ್ತಿವೆ. ಕ್ರಿಕೆಟ್ ಆಟಗಾರನಾಗಿ ಬಂದಿರುವ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಈಗ ಇಂಟರ್ ನ್ಯಾಷನಲ್ ಸ್ಟಾರ್ ಆಗಿದ್ದಾನೆ. ಹೀಗಿದ್ದಾಗಲೇ, ವೈಭವ್ ಸೂರ್ಯವಂಶಿ ಕ್ರಿಕೆಟ್‌ನಿಂದ ಬ್ಯಾನ್ ಆಗುತ್ತಾರಾ?
ವೈಭವ್ ಸೂರ್ಯವಂಶಿ ವಯಸ್ಸು ಮೋಸ..?
ಹೌದು, ವೈಭವ್ ಸೂರ್ಯವಂಶಿ ತನಗೆ 14 ವರ್ಷ ವಯಸ್ಸು ಅಂತಾನೇ ಹೇಳಿಕೊಂಡಿರುವುದು ಇದೀಗ ಇಡೀ ಜಗತ್ತಿನಲ್ಲೇ ವೈರಲ್ ಆಗುತ್ತಿದೆ. ಆದರೆ ದಿಢೀರ್ ಒಂದು ಗಂಭೀರ ಆರೋಪ ಕೇಳಿ ಬಂದಿದ್ದು, ವೈಭವ್ ಸೂರ್ಯವಂಶಿಗೆ 14 ವರ್ಷ ವಯಸ್ಸು ಅಲ್ಲ ಜಾಸ್ತಿ ಆಗಿದೆ ಅನ್ನೋ ಗಂಭೀರ ಆರೋಪ ಮಾಡಲಾಗುತ್ತಿದೆ. ಈ ಆರೋಪಕ್ಕೆ ಸಾಕ್ಷಿಯಾಗಿ 2 ವರ್ಷಗಳ ಹಿಂದೆಯೇ ತನಗೆ 14 ವರ್ಷ ವಯಸ್ಸು ಅಂತಾ ಇದೇ ವೈಭವ್ ಸೂರ್ಯವಂಶಿ ಹೇಳಿಕೊಂಡಿರುವ ಇಂಟರ್ವ್ಯೂವ್ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ಲೆಕ್ಕಾಚಾರ ಹಾಕಿ ನೋಡುವುದಾದರೆ, ವೈಭವ್ ಸೂರ್ಯವಂಶಿ ವಯಸ್ಸು ಈಗ 16 ವರ್ಷ ಆಗಿದೆಯಂತೆ!
ಆದರೆ ತನ್ನದೇ ವಯಸ್ಸಿನ ಬಗ್ಗೆ ವೈಭವ್ ಸೂರ್ಯವಂಶಿ ಸುಳ್ಳು ಹೇಳಿದ್ದಾರೆ ಅಂತಾ ಆಕ್ರೋಶ & ಆರೋಪ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಇದೀಗ 14 ವರ್ಷದ ವೈಭವ್ ಸೂರ್ಯವಂಶಿ ಕ್ರಿಕೆಟ್‌ನಿಂದ ಬ್ಯಾನ್ ಆಗುವ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಮತ್ತೊಂದು ಕಡೆ ವೈಭವ್ ಸೂರ್ಯವಂಶಿ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರನ ಬೆನ್ನಿಗೆ ನಿಂತಿದ್ದಾರೆ. ಅಲ್ಲದೆ ಈ ರೀತಿಯಾಗಿ ಶತ್ರುಗಳು & ವಿರೋಧಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಅಂತಾ ಸಮರ್ಥನೆಯನ್ನೂ ಮಾಡಿಕೊಳ್ಳಲಾಗುತ್ತಿದೆ. ಆದರೆ ವೈಭವ್ ಸೂರ್ಯವಂಶಿ ನಿಜವಾದ ವಯಸ್ಸು ಎಷ್ಟು? ಅಂತಾ ಜನರು ಇದೀಗ ಚರ್ಚೆ ಮಾಡುತ್ತಿದ್ದಾರೆ.












Click it and Unblock the Notifications