ವೈಭವ್ ಸೂರ್ಯವಂಶಿ ಅಂದ್ರೆ ನನ್ನ ಪತ್ನಿಗೂ ತುಂಬಾ ಇಷ್ಟ: ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್
Vaibhav Sooryavanshi: ಟೀಮ್ ಇಂಡಿಯಾ ಕ್ರಿಕೆಟ್‌ನ ಉಯೋನ್ಮುಖ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದಲೇ ಹೆಸರಾಗಿದ್ದಾರೆ. ಈ ವಯಸ್ಸಿನಲ್ಲೇ ಇವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಭಾರತೀಯ ಮಾಜಿ ಸ್ಟಾರ್ ಕ್ರಿಕೆಟರ್ ಪತ್ನಿ ಫಿದಾ ಆಗಿದ್ದು, ವೈಭವ್‌ನ ಪ್ರತಿ ಪಂದ್ಯವನ್ನು ಕೂಡ ವೀಕ್ಷಣೆ ಮಾಡುತ್ತಾರಂತೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಶೈಲಿಯು ಕ್ರಿಕೆಟ್ ದಿಗ್ಗಜರನ್ನೇ ಬೆರಗುಗೊಳಿಸಿದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಆಕ್ರಮಣಕಾರಿ ಆಟದ ಮೂಲಕ ಸಂಚಲನ ಸೃಷ್ಟಿಸಿರುವ ವೈಭವ್‌ನನ್ನ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಪೋಟಕ ಬ್ಯಾಟರ್ ಕೆ.ಶ್ರೀಕಾಂತ್ ಅವರು ಮುಕ್ತಕಂಠದ ಶ್ಲಾಘಿಸಿದ್ದಾರೆ.

ಕೃಷ್ಣಮಾಚಾರಿ ಶ್ರೀಕಾಂತ್ ಅಚ್ಚರಿ ಹೇಳಿಕೆ
ವೈಭವ್ ಸೂರ್ಯವಂಶಿ ಅವರ ನಿರ್ಭಯ ಆಟದ ವೈಖರಿಯನ್ನು ಶ್ರೀಕಾಂತ್ ಅವರು ಕೊಂಡಾಡಿದ್ದಾರೆ. 'ವೈಭವ್ ಅವರ ಬ್ಯಾಟಿಂಗ್ ಕ್ರಿಕೆಟ್‌ಗೆ ಮತ್ತೆ ಅತ್ಯಂತ ರೋಚಕತೆಯನ್ನು ತಂದುಕೊಟ್ಟಿದೆ. ಅವರ ಪ್ರತಿಯೊಂದು ಪಂದ್ಯವನ್ನು ವೀಕ್ಷಿಸುವುದು ಕಣ್ಣಿಗೆ ಹಬ್ಬದಂತಿರುತ್ತದೆ,' ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.
'ನನ್ನ ಪತ್ನಿಯೂ ವೈಭವ್ ಸೂರ್ಯವಂಶಿಯ ಅಭಿಮಾನಿ'
ವೈಭವ್ ಅವರ ಜನಪ್ರಿಯತೆ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ಸಾಮಾನ್ಯ ದಿನಗಳಲ್ಲಿ ಕ್ರಿಕೆಟ್‌ನಿಂದ ದೂರವಿರುತ್ತಿದ್ದವರು ಸಹ ಅವರ ಆಟವನ್ನು ಕಣ್ಣುಂಬಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಶ್ರೀಕಾಂತ್ ಅವರು ತಮ್ಮ ಮನೆಯ ಉದಾಹರಣೆಯನ್ನೇ ನೀಡಿದ್ದಾರೆ. 'ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಗಳನ್ನು ಹೆಚ್ಚು ವೀಕ್ಷಿಸದ ನನ್ನ ಪತ್ನಿ ಕೂಡ ವೈಭವ್ ಬ್ಯಾಟಿಂಗ್‌ಗೆ ಇಳಿದಾಗ ಟಿವಿಯ ಮುಂದೆ ಕುಳಿತು ಪಂದ್ಯ ವೀಕ್ಷಿಸುತ್ತಾಳೆ. ಇಂತಹ ಅತ್ಯದ್ಭುತ ಪ್ರತಿಭೆ ವೈಭವ್ ಅವರಲ್ಲಿದೆ,' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಅಮೋಘ ಸಾಧನೆ ಮಾಡಿದ ವೈಭವ್
ಬ್ಯಾಟಿಂಗ್‌ಗೆ ಇಳಿದಾಗ ಯಾವುದೇ ಭಯವಿಲ್ಲದೆ ನಿರ್ಭೀತವಾಗಿ ಆಟ ಆಡುವ ವೈಭವ್, ಶಾರ್ಟ್ ಪಿಚ್ ಬೌಲಿಂಗ್ ಹಾಗೂ ವೇಗದ ಬೌಲರ್‌ಗಳನ್ನು ಎದುರಿಸುವ ಶೈಲಿ ಕ್ರಿಕೆಟ್ ವಿಶ್ಲೇಷಕರ ಗಮನ ಸೆಳೆದಿದೆ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ತಂತ್ರದಿಂದ ಎದುರಾಳಿ ಬೌಲರ್‌ಗಳ ಮೇಲೆ ಸದಾ ಒತ್ತಡ ಹೇರುವ ಗುಣ ಅವರಲ್ಲಿದೆ.
ಭಾರತೀಯ ಕ್ರಿಕೆಟ್‌ನ ಆಶಾಕಿರಣ ವೈಭವ್ ಸೂರ್ಯವಂಶಿ..
ಮಾಜಿ ಕ್ರಿಕೆಟಿಗ ಶ್ರೀಕಾಂತ್ ಅವರ ಪ್ರಕಾರ, ವೈಭವ್ ಸೂರ್ಯವಂಶಿ ಅವರಂತಹ ಪ್ರತಿಭೆಯು ಭಾರತೀಯ ಕ್ರಿಕೆಟ್‌ಗೆ ಸಿಕ್ಕಿರುವುದು ಅದೃಷ್ಟ. ಇವರಲ್ಲಿರುವ ಸಹಜ ಕ್ರಿಕೆಟ್ ಕೌಶಲ್ಯ ಹಾಗೂ ಆಕ್ರಮಣಕಾರಿ ಮನೋಭಾವ ಮುಂಬರುವ ದಿನಗಳಲ್ಲಿ ಭಾರತೀಯ ಕ್ರಿಕೆಟ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿರು. ಒಟ್ಟಿನಲ್ಲಿ ತಮ್ಮ ವಯಸ್ಸನ್ನೂ ಮೀರಿದ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ 'ವಂಡರ್ ಕಿಡ್' ವೈಭವ್ ಸೂರ್ಯವಂಶಿ, ಅಭಿಮಾನಿಗಳಿಗೆ ಮಾತ್ರವಲ್ಲದೆ ದೇಶದ ಮಾಜಿ ಕ್ರಿಕೆಟ್ ದಿಗ್ಗಜರಿಗೂ ನೆಚ್ಚಿನ ಆಟಗಾರನಾಗಿ ಹೊರಹೊಮ್ಮುತ್ತಿದ್ದಾರೆ.
ವೈಭವ್ ಸೂರ್ಯವಂಶಿ ಅವರು ಚಿಕ್ಕ ವಯಸ್ಸಿನಲ್ಲೇ ಬ್ಯಾಟಿಂಗ್‌ನಲ್ಲಿ ತೋರಿದ ಆಕ್ರಮಣಕಾರಿ ಆಟದ ಶೈಲಿಯಿಂದಲೇ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಅವರು, ಭಾರತದ ಭವಿಷ್ಯದ ಭರವಸೆಯ ಆಟಗಾರರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ವೇಗವಾಗಿ ರನ್ ಗಳಿಸುವ ಸಾಮರ್ಥ್ಯ, ಒತ್ತಡದ ಸಂದರ್ಭದಲ್ಲೂ ಆಕ್ರಮಣಕಾರಿ ಆಟ ಮುಂದುವರಿಸುವ ಗುಣ ಅವರ ಪ್ರಮುಖ ಶಕ್ತಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಸಾಧನೆ ಮಾಡುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications
