Vaibhav: ತಂದೆ ಕನಸನ್ನ ಪೂರೈಸುವುದೇ ನನ್ನ ಮುಖ್ಯ ಗುರಿ, ಪ್ರತಿಸ್ಪರ್ಧಿಗಳಿಗೆ ವೈಭವ್ ಸೂರ್ಯವಂಶಿ ಖಡಕ್ ಎಚ್ಚರಿಕೆ
Vaibhav Sooryavanshi: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿರುವ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರು ತಮ್ಮ ಅದ್ಭುತ ಬ್ಯಾಟಿಂಗ್ ಶೈಲಿಯಿಂದ ಇಡೀ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ಕ್ರೀಸ್‌ನಲ್ಲಿ ನಿಂತರೆ ಎದುರಾಳಿ ಬೌಲರ್‌ಗಳ ಮೇಲೆ ಆಕ್ರಮಣಕಾರಿ ಸವಾರಿ ಮಾಡುವ ಇವರು, ಬೌಂಡರಿ, ಸಿಕ್ಸರ್‌ಗಳ ಮೂಲಕ ರನ್ ಮಳೆ ಹರಿಸುತ್ತಿದ್ದಾರೆ. ಈ ನಡುವೆಯೇ ಅವರು ತಮ್ಮ ತಂದೆಯ ಕನಸ್ಸಿನ ಬಗ್ಗೆ ಮಾಹಿತಿಯೊಂದನ್ನು ರಿವೀಲ್ ಮಾಡುವ ಮೂಲಕ ಪ್ರತಿಸ್ಪರ್ಧಿಗಳಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.
ವಿಶೇಷವಾಗಿ ವಿಶ್ವಪ್ರಸಿದ್ಧ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಅಂತಹ ದಿಗ್ಗಜ ಬೌಲರ್‌ಗಳ ಎಸೆತಗಳನ್ನು ಲೀಲಾಜಾಲವಾಗಿ ಸಿಕ್ಸರ್‌ಗೆ ಅಟ್ಟುವ ಇವರ ಧೈರ್ಯ ಮತ್ತು ಆತ್ಮವಿಶ್ವಾಸವು ಕ್ರಿಕೆಟ್ ಪಂಡಿತರನ್ನು ಬೆರಗುಗೊಳಿಸಿದೆ. ಇವರ ಸ್ಫೋಟಕ ಸ್ಟ್ರೈಕ್ ರೇಟ್ ಮತ್ತು ಭಯವಿಲ್ಲದ ಆಟವು ರಾಜಸ್ಥಾನ್ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿಕೊಡುತ್ತಿದೆ.

ಐಪಿಎಲ್‌ನಲ್ಲಿ ದಾಖಲೆ ಸೃಷ್ಟಿಸುತ್ತಿರುವ ವೈಭವ್
ಬಿಹಾರ ಮೂಲದ ಈ ಪ್ರತಿಭಾನ್ವಿತ ಎಡಗೈ ಬ್ಯಾಟರ್, ಅತಿ ಕಿರಿಯ ವಯಸ್ಸಿನಲ್ಲೇ ಐಪಿಎಲ್‌ನಲ್ಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಇವರ ಸಾಮರ್ಥ್ಯವು ಸಚಿನ್ ತೆಂಡೂಲ್ಕರ್ ಅವರ ಆರಂಭಿಕ ದಿನಗಳನ್ನು ನೆನಪಿಸುತ್ತಿದೆ ಎಂದು ಬಹುತೇಕ ಮಂದಿ ಹೇಳುತ್ತಿದ್ದಾರೆ.
ಅದ್ಭುತ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ವೈಭವ್
ವೈಭವ್ ಸೂರ್ಯವಂಶಿ ಅವರ ಈ ಆಕ್ರಮಣಕಾರಿ ಆಟವು ಕೇವಲ ಒಂದು ಫ್ರಾಂಚೈಸಿಯ ಯಶಸ್ಸಿಗೆ ಸೀಮಿತವಾಗದೆ, ಭಾರತೀಯ ಕ್ರಿಕೆಟ್‌ನ ಭವಿಷ್ಯದ ಭರವಸೆಯ ತಾರೆಯಾಗಿ ಹೊರಹೊಮ್ಮುವ ಸೂಚನೆ ನೀಡಿದೆ. ಇನ್ನೂ ತಮ್ಮ ತಂದೆಯ ಕನಸಿನಂತೆ ಭಾರತ ತಂಡದ ಪರ ವಿಶ್ವಕಪ್ ಗೆಲ್ಲುವ ಗುರಿಯನ್ನು ಹೊಂದಿರುವ ಇವರು, ಪ್ರಸ್ತುತ ಐಪಿಎಲ್ ಸೀಸನ್‌ನ ಅದ್ಭುತ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ.
ಎದುರಾಳಿ ತಂಡಗಳಿಗೆ ಎಚ್ಚರಿಕೆ
ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಇತ್ತೀಚಿನ ಹೇಳಿಕೆ ಮತ್ತು ಸುದ್ದಿ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. "ನಾನು ಕ್ರೀಸ್‌ನಲ್ಲಿರುವವರೆಗೆ ಪಂದ್ಯವನ್ನು ಕಸಿದುಕೊಳ್ಳಬಲ್ಲೆ," ಎಂದು ಹೇಳುವ ಮೂಲಕ ಎದುರಾಳಿ ತಂಡಗಳಿಗೆ ವೈಭವ್ ಸೂರ್ಯವಂಶಿ ಎಚ್ಚರಿಕೆ ನೀಡಿದ್ದಾರೆ.
ಸಂದರ್ಶನವೊಂದಲ್ಲಿ ಮಾತನಾಡಿದ ವೈಭವ್ ಸೂರ್ಯವಂಶಿ, "ನಾನು ಎಷ್ಟು ಸಮಯ ಮೈದಾನದಲ್ಲಿ ಇರುತ್ತೇನೋ, ಅಲ್ಲಿಯವರೆಗೆ ನನ್ನ ಕೌಶಲ್ಯ ಬಳಸಿ ಪಂದ್ಯದ ಗತಿಯನ್ನೇ ಬದಲಿಸಬಲ್ಲೆ ಮತ್ತು ಎದುರಾಳಿಗಳ ಕೈಯಿಂದ ಪಂದ್ಯವನ್ನು ಕಸಿದುಕೊಳ್ಳಬಲ್ಲೆ," ಎಂದು ಹೇಳಿದ್ದಾರೆ.
'ತಂದೆಯ ಕನಸು ನನಸಾಗಿದುವುದೇ ನನ್ನ ಮುಖ್ಯ ಗುರಿ'
ಮುಂದುವರೆದು ಮಾತನಾಡಿದ ಅವರು, "ಐಪಿಎಲ್‌ನಲ್ಲಿ ಆಡುತ್ತಿರುವುದು ತಮ್ಮ ತಂದೆಯ ಅರ್ಧ ಕನಸನ್ನು ನನಸು ಮಾಡಿದಂತೆ. ಭಾರತ ಸೀನಿಯರ್ ತಂಡದ ಪರ ವಿಶ್ವಕಪ್ ಗೆಲ್ಲುವುದು ಅಂತಿಮ ಗುರಿ ಮತ್ತು ತಂದೆಯ ಪೂರ್ಣ ಕನಸಾಗಿದೆ," ಎಂದು ತಿಳಿಸಿದ್ದಾರೆ. ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಇವರು, ಕೇವಲ 15 ವರ್ಷದವರಾಗಿದ್ದರೂ ಅನುಭವಿ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರ ಎಸೆತಗಳಿಗೆ ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ವಿಶೇಷವಾಗಿ ಪವರ್‌ಪ್ಲೇನಲ್ಲಿ ಪ್ರತಿ 2 ಎಸೆತಗಳಿಗೊಮ್ಮೆ ಬೌಂಡರಿ ಬಾರಿಸುತ್ತಿರುವುದು ಇವರ ಸ್ಫೋಟಕ ಆಟಕ್ಕೆ ಸಾಕ್ಷಿ. ಮಾಜಿ ಕ್ರಿಕೆಟಿಗ ಸಬಾ ಕರೀಮ್ ಅವರು, ವೈಭವ್ ಅವರ ಬ್ಯಾಟ್ ವೇಗ ಮತ್ತು ಶಕ್ತಿಯನ್ನು ಸಚಿನ್ ತೆಂಡೂಲ್ಕರ್ ಅವರ ಆರಂಭಿಕ ದಿನಗಳಿಗೆ ಹೋಲಿಸಿದ್ದಾರೆ. ಮತ್ತೊಂದೆಡೆ, ಕೆಲವರು, ಈ ಯುವ ಆಟಗಾರ ತನ್ನ ಸುತ್ತಲಿರುವ ಜನರ ಬಗ್ಗೆ ಎಚ್ಚರದಿಂದಿರಬೇಕು ಮತ್ತು ಕೇವಲ ಜಾಹೀರಾತುಗಳ ಹಿಂದೆ ಹೋಗದೆ ಆಟದ ಮೇಲೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರೂ ವೈಭವ್ ಸೂರ್ಯವಂಶಿ ಅವರ ಭಯವಿಲ್ಲದ ಆಟದ ಶೈಲಿ ಕ್ರಿಕೆಟ್ ದಿಗ್ಗಜರನ್ನ ದಿಗ್ಭ್ರಮೆಗೊಳಿಸಿದೆ.












Click it and Unblock the Notifications