USA vs Pak: ರೋಚಕ ಸೂಪರ್ ಓವರ್ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಯುಎಸ್‌ಎ
ಟಿ20 ವಿಶ್ವಕಪ್ 2024ರ ರೋಚಕ ಪಂದ್ಯದಲ್ಲಿ ಯುಎಸ್‌ಎ ಪಾಕಿಸ್ತಾನದ ವಿರುದ್ಧ 5 ರನ್‌ಗಳ ಗೆಲುವು ಸಾಧಿಸಿ ಹೊಸ ಇತಿಹಾಸ ಬರೆಯಿತು. ಡಲ್ಲಾಸ್‌ನ ಗ್ರಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಸೋಲಿನ ಆಘಾತ ಅನುಭವಿಸಿದೆ.
ಟಾಸ್ ಗೆದ್ದು ಯುಎಸ್‌ಎ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು.

ಬಾಬರ್ ಅಜಮ್ 44 ರನ್, ಶದಾಬ್ ಖಾನ್ 40 ರನ್, ಶಹೀನ್ ಅಫ್ರಿದಿ ಅಜೇಯ 23 ರನ್, ಇಫ್ತಿಕರ್ ಅಹಮದ್ 18 ರನ್ ಗಳಿಸುವ ಮೂಲಕ ಪಾಕಿಸ್ತಾನ ಸವಾಲಿನ ಮೊತ್ತ ಕಲೆಹಾಕಲು ಕಾರಣವಾದರು.
ಯುಎಸ್‌ಎ ಪರವಾಗಿ ನಾಸ್ತುಷ್ ಕೆಂಜಿಗೆ 3 ವಿಕೆಟ್ ಪಡೆದರೆ, ನೆತ್ರಾವಲ್ಕರ್ 2 ವಿಕೆಟ್ ಪಡೆದರು. ಆಲಿ ಖಾನ್ ಮತ್ತು ಜಸ್ದೀಪ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.
ರೋಚಕ ಡ್ರಾ
ಈ ಸವಾಲಿನ ಮೊತ್ತ ಬೆನ್ನತ್ತಿದ ಯುಎಸ್‌ಎ ಉತ್ತಮ ಆರಂಭ ಪಡೆಯಿತು. ಸ್ಟೀವ್ ಟೇಲರ್ 12 ರನ್ ಗಳಿಸಿ ಔಟಾದರೆ, ನಾಯಕ ಮೋನಂಕ್ ಪಟೇಲ್ 50 ರನ್ ಗಳಿಸಿ ತಂಡಕ್ಕೆ ಗೆಲುವಿನ ಭರವಸೆ ನೀಡಿದರು. ಆಂಡ್ಯ್ರೂ ಗೌಸ್ 35 ರನ್ ಗಳಿಸಿದರೆ, ಆರೊನ್ ಜೋನ್ಸ್ ಅಜೇಯ 36 ರನ್ ಮತ್ತು ನಿತೀಶ್ ಕುಮಾರ್ 14 ರನ್ ಗಳಿಸಿದರು.
ಕೊನೆಯ ಓವರ್ ನಲ್ಲಿ ಯುಎಸ್‌ಎ ಗೆಲುವಿಗೆ 15 ರನ್ ಬೇಕಿತ್ತು, ಆರೊನ್ ಜೋನ್ಸ್ ಮತ್ತು ನಿತೀಶ್ ಕುಮಾರ್ 14 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಯಿತು. ಅದರಲ್ಲು ಕೊನೆಯ ಮೂರು ಎಸೆತಗಳಲ್ಲಿ ಗೆಲುವಿಗೆ 12 ರನ್ ಬೇಕಿದ್ದಾಗ 6, 1 ಮತ್ತು 4 ರನ್ ಗಳಿಸಿ ಟೈ ಮಾಡಿಕೊಂಡರು.
ಸೂಪರ್ ಓವರ್ ನಲ್ಲಿ ಗೆಲುವು
ಸೂಪರ್ ಓವರ್ ನಲ್ಲಿ ಯುಎಸ್‌ಎ 18 ರನ್ ಗಳಿಸುವ ಮೂಲಕ ಪಾಕಿಸ್ತಾನಕ್ಕೆ ಸವಾಲಿನ ಗುರಿ ನೀಡಿದರು. ಪಾಕಿಸ್ತಾನ 1 ವಿಕೆಟ್ ಕಳೆದುಕೊಂಡು 13 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಈ ಮೂಲಕ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ ಅನುಭವಿಸಿತು.












Click it and Unblock the Notifications