ನಾಳೆ ಮುಂಬೈನಲ್ತೆಲಿ ತೆರೆದ ಬಸ್‌ನಲ್ಲಿ ಚಾಂಪಿಯನ್ನರ್ ಮೆರವಣಿಗೆ
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಎರಡನೇ ಬಾರಿ ಐಸಿಸಿ ಟಿ20 ಗೆದ್ದ ಟೀಮ್ ಇಂಡಿಯಾ ಇನ್ನೇನು ಭಾರತಕ್ಕೆ ಮರಳಲು ಸಿದ್ಧವಾಗಿದೆ. ಬಾರ್ಬಡೋಸ್‌ನಲ್ಲಿ ಸುನಾಮಿ ಕಾರಣ ಟೀಮ್ ಇಂಡಿಯಾ ಪ್ಲ್ಯಾನ್‌ನಲ್ಲಿ ಏರು ಪೇರು ಆಗಿದೆ. ಈಗ ಟೀಮ್ ಇಂಡಿಯಾ ಸ್ಪೇಷಲ್ ಫ್ಲೈಟ್ ಮೂಲಕ ತವರಿಗೆ ಆಗಮಿಸುತ್ತಿದೆ.
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಶನಿವಾರ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ರಣ ರೋಚಕ ಪಂದ್ಯದಲ್ಲಿ ಭಾರತ, ಸೋಲಿನ ದವಡೆಯಿಂದ ಗೆಲುವಿನ ದಡ ಸೇರಿದೆ. ಈ ವೇಳೆ ತಂಡದ ಸಂಘಟಿತ ಆಟ ಎದ್ದು ಕಂಡಿದೆ. ಈ ಮೂಲಕ ಟೀಮ್ ಇಂಡಿಯಾ ಪ್ರಶಸ್ತಿ ಬರವನ್ನು ನೀಗಿಸಿರುವ ರೋಹಿತ್ ಪಡೆ ಈಗ ಭಾರತದತ್ತ ಮುಖ ಮಾಡಿದೆ.

ಟೀಮ್ ಇಂಡಿಯಾ ಪ್ಲ್ಯಾನ್ ಏನು?
ಟೀಮ್ ಇಂಡಿಯಾ ಬಾರ್ಬಡೋಸ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ತವರಿನತ್ತ ಹಾರಿದೆ. ಆಟಗಾರರನ್ನು ಹೊತ್ತ ವಿಮಾನ ಇಂದು ತಡ ರಾತ್ರಿ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ.
ತಂಡ ಭಾರತಕ್ಕೆ ಬರುತ್ತಿದ್ದಂತೆ ಕೊಂಚ ಸಮಯ ವಿರಾಮ ಮಾಡಿ ನಂತರ ತನ್ನ ಶೆಡ್ಯೂಲ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದೆ. ಮೂಲಗಳ ಪ್ರಕಾರ ದೇಶಕ್ಕೆ ಕೀರ್ತಿ ತಂದ ಟೀಮ್ ಇಂಡಿಯಾ ಆಟಗಾರರು ನವದೆಹಲಿಯಲ್ಲಿ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಟೀಮ್ ಇಂಡಿಯಾ ಗಣ್ಯರ ಭೇಟಿ ಬಳಿಕ ನವದೆಹಲಿಯಲ್ಲಿ ಒಂದು ರೋಡ್ ಶೋ ನಡೆಸಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಟೀಮ್ ಇಂಡಿಯಾ ತಮ್ಮ ಅಭಿಮಾನಿಗಳಿಗೆ ತಮ್ಮನ್ನು ಬೆಂಬಿಲಿಸದಕ್ಕೆ ಕೃತಜ್ಞತೆ ತಿಳಿಸಲಿದೆ.

ಮುಂಬೈನಲ್ಲೂ ರೋಡ್ ಶೋ
ಎಲ್ಲವೂ ಅಂದುಕೊಂಡಂತೆ ಟೀಮ್ ಇಂಡಿಯಾ ಗುರುವಾರ ವಾಣಿಜ್ಯ ನಗರಿ ಮುಂಬೈನಲ್ಲೂ ಒಂದು ರೋಡ್ ಶೋ ನಡೆಸುವ ಸಾಧ್ಯತೆ ಇದೆ. 2007ರಲ್ಲಿ ಗೆದ್ದ ತಂಡವನ್ನು ತೆರೆದ ಬಸ್‌ನಲ್ಲಿ ಮೆರವಣಿಗೆ ಮಾಡಿದ ಹಾಗೆ ರೋಹಿತ್ ಪಡೆಯನ್ನು ತೆರೆದ ಬಸ್‌ನಲ್ಲಿ ಮೆರವಣಿಗೆ ನಡೆಯಲಿದೆ
🏆🇮🇳 Join us for the Victory Parade honouring Team India's World Cup win! Head to Marine Drive and Wankhede Stadium on July 4th from 5:00 pm onwards to celebrate with us! Save the date! #TeamIndia #Champions @BCCI @IPL pic.twitter.com/pxJoI8mRST
— Jay Shah (@JayShah) July 3, 2024
ಟೀಮ್ ಇಂಡಿಯಾ ಬಾರ್ಬಡೋಸ್‌ನಲ್ಲಿ ವಿಶ್ವಕಪ್‌ಗೆ ಮುತ್ತಿಡುತ್ತಿದ್ದಂತೆ, ಇತ್ತ ಭಾರತದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ದೇಶದ ಎಲ್ಲ ಭಾಗಗಳಲ್ಲೂ ಜನ ಕುಣಿದು ಕುಪ್ಪಳ್ಳಿಸಿದ್ದರು. ಅಹಮದಾಬಾದ್‌ನಲ್ಲಿ ಸಾಧಿಸಲು ಸಾಧ್ಯವಾಗದ್ದನ್ನು ಬಾರ್ಬಡೋಸ್‌ನಲ್ಲಿ ತಂಡ ಸಾಧಿಸದಕ್ಕೆ ದೇಶವಾಸಿಗಳು ಖುಷಿ ಪಟ್ಟರು.












Click it and Unblock the Notifications