ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಫ್ರಾಂಚೈಸಿಗಳನ್ನು ಖರೀದಿಸಿದ ಅದಾನಿ ಗ್ರೂಪ್ ಮತ್ತು ಜಿಎಂಆರ್ ಗ್ರೂಪ್

|
Google Oneindia Kannada News

ಮುಂಬೈ, ಆಗಸ್ಟ್ 26: ಅದಾನಿ ಗ್ರೂಪ್ ಮತ್ತು ಜಿಎಂಆರ್ ಗ್ರೂಪ್ ಎರಡನೇ ಸೀಸನ್‌ಗೆ ಮುಂಚಿತವಾಗಿ ರಾಮನ್ ರಹೇಜಾ ಉತ್ತೇಜಿತ ಲೆಜೆಂಡ್ಸ್ ಲೀಗ್ ಕ್ರಿಕೆಟ್ (LLC) ನಲ್ಲಿ ಫ್ರಾಂಚೈಸಿಗಳನ್ನು ಖರೀದಿ ಮಾಡಿವೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಉದ್ಘಾಟನಾ ಆವೃತ್ತಿಯಲ್ಲಿ ಮೂರು-ತಂಡಗಳು ಮಾತ್ರ ಪಾಲ್ಗೊಂಡಿದ್ದವು, ಅದು ಯಾವುದೇ ಫ್ರ್ಯಾಂಚೈಸ್ ಅನ್ನು ಮಾರಾಟ ಮಾಡಿರಲಿಲ್ಲ, ಎರಡನೇ ಆವೃತ್ತಿಯಲ್ಲಿ ನಾಲ್ಕು ತಂಡಗಳು ಭಾಗವಹಿಸುತ್ತಿವೆ. ಎರಡನೇ ಆವೃತ್ತಿ ಭಾರತದ ಸ್ವಾತಂತ್ರ್ಯದ 75 ನೇ ವರ್ಷದ ಸಂಭ್ರಮಾಚರಣೆಗೆ ಸಮರ್ಪಿತವಾಗಿದ್ದು, ಸೆಪ್ಟೆಂಬರ್ 16 ರಿಂದ ಭಾರತದಲ್ಲಿ ಎರಡನೇ ಸೀಸನ್ ನಡೆಯಲಿದೆ.

"ಪಾಲುದಾರರಾಗಿ ಎರಡು ಅಪ್ರತಿಮ ಕಂಪನಿಗಳು ಬಂದಿರುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ" ಎಂದು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಸ್ಥಾಪಕ ಮತ್ತು ಅಧ್ಯಕ್ಷ ವಿವೇಕ್ ಖುಶಾಲಾನಿ ಹೇಳಿದರು. ಹಲವು ಕ್ರೀಡಾ ಫ್ರಾಂಚೈಸಿಗಳ ಮಾಲಿಕರಾಗಿರುವ ಅವರು ಲೀಗ್‌ನ ಮೌಲ್ಯವನ್ನು ಹೆಚ್ಚಿಸಲಿದ್ದಾರೆ ಎಂದು ಹೇಳಿದರು.

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಎರಡನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ: ನೇರಪ್ರಸಾರ, ಪಂದ್ಯಾವಳಿ ಬಗ್ಗೆ ವಿವರ ತಿಳಿಯಿರಿಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಎರಡನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ: ನೇರಪ್ರಸಾರ, ಪಂದ್ಯಾವಳಿ ಬಗ್ಗೆ ವಿವರ ತಿಳಿಯಿರಿ

ಈ ಹೂಡಿಕೆಯೊಂದಿಗೆ ಜಿಎಂಆರ್ ಗ್ರೂಪ್ ತನ್ನ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮೂರನೇ ಹೂಡಿಕೆಯನ್ನು ಮಾಡಿದೆ ಮತ್ತು ಅದಾನಿ ಗುಂಪು ತನ್ನ ಎರಡನೇ ಹೂಡಿಕೆ ಮಾಡಿದೆ. ಅದಾನಿ ಮತ್ತು ಜಿಎಂಆರ್ ಸ್ಪೋರ್ಟ್ಸ್ ಗುಂಪುಗಳು ಇತ್ತೀಚೆಗೆ ಯುಎಇ ಟಿ20 ಲೀಗ್‌ನಲ್ಲಿ ತಂಡಗಳ ಮಾಲಿಕತ್ವ ಪಡೆದುಕೊಂಡಿವೆ. ಜಿಎಂಆರ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ-ಮಾಲೀಕರಾಗಿದ್ದಾರೆ.

ಎರಡೂ ಕಂಪನಿಗಳು ಪ್ರೊ ಕಬಡ್ಡಿ ಲೀಗ್‌ನಲ್ಲಿ ತಂಡಗಳನ್ನು ಹೊಂದಿವೆ ಮತ್ತು ಪ್ರಸ್ತುತ ನಡೆಯುತ್ತಿರುವ ಅಲ್ಟಿಮೇಟ್ ಖೋ ಖೋದಲ್ಲಿ ಕೂಡ ತಂಡಗಳನ್ನು ಖರೀದಿಸಿವೆ.

 ಯುಎಇ ಟಿ20 ಲೀಗ್‌ನಲ್ಲೂ ಎಂಜಿಆರ್ ಹೂಡಿಕೆ

ಯುಎಇ ಟಿ20 ಲೀಗ್‌ನಲ್ಲೂ ಎಂಜಿಆರ್ ಹೂಡಿಕೆ

ಜಿಎಂಆರ್ ಸುಮಾರು ಎರಡು ದಶಕಗಳಿಂದ ಕ್ರಿಕೆಟ್ ಕ್ರೀಡೆಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್‌ ಮೇಲೆ ಹೂಡಿಕೆ ಮಾಡಿವ ಮೂಲಕ ಕ್ರಿಕೆಟ್‌ನೊಂದಿಗೆ ನಮ್ಮ ಸಂಬಂಧ ಪ್ರಾರಂಭವಾಯಿತು ಎಂದು ಜಿಎಂಆರ್ ಗ್ರೂಪ್ ಮ್ಯಾನೇಜಿಂಗ್ ಡೈರಕ್ಟರ್ ಕಿರಣ್ ಕುಮಾರ್ ಗಾಂಧಿ ಹೇಳಿದರು.

ಇಂಟರ್ನ್ಯಾಷನಲ್ ಲೀಗ್ ಟಿ20ಯಲ್ಲಿ ದುಬೈ ಕ್ಯಾಪಿಟಲ್ಸ್ ಮೇಲೆ ಹೂಡಿಕೆ ಮಾಡುವ ಮೂಲಕ ಮೊದಲ ಸಾಗರೋತ್ತರ ತಂಡದ ಮಾಲಿಕರಾಗಿದ್ದೇವೆ. ಈಗ ಲೆಜೆಂಡ್ಸ್ ಲೀಗ್‌ನಲ್ಲಿ ಹೂಡಿಕೆ ಮಾಡಿದ್ದೇವೆ. ನಮ್ಮ ಕುಟುಂಬದಂತೆಯೇ ಇರುವ ನಮ್ಮ ಅಭಿಮಾನಿಗಳಿಗೆ ಅವರು ಬಯಸುವ ಕೆಲವು ಅನುಭವಗಳನ್ನು ನೀಡಲು ಬಹಳ ಸಮಯದಿಂದ ನಾವು ಪ್ರಯತ್ನಿಸಿದ್ದೇವೆ ಎಂದು ಕಿರಣ್ ಕುಮಾರ್ ಗ್ರಾಂಧಿ ಹೇಳಿದ್ದಾರೆ.

100ನೇ ಟಿ20: ಪಾಕಿಸ್ತಾನ ವಿರುದ್ಧ ವಿಶೇಷ ಬ್ಯಾಟ್‌ ಹಿಡಿದು ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ100ನೇ ಟಿ20: ಪಾಕಿಸ್ತಾನ ವಿರುದ್ಧ ವಿಶೇಷ ಬ್ಯಾಟ್‌ ಹಿಡಿದು ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ

 ಎಲ್‌ಎಲ್‌ಸಿ ಅಭಿಮಾನಿಗಳ ಕನಸು

ಎಲ್‌ಎಲ್‌ಸಿ ಅಭಿಮಾನಿಗಳ ಕನಸು

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಭಾರತದ ಪ್ರತಿಯೊಂದು ಮೂಲೆಯಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಈ ಕ್ರೀಡೆಯನ್ನು ಜನಪ್ರಿಯಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಕೆಲವು ಅತ್ಯುತ್ತಮ ಕ್ರಿಕೆಟಿಗರನ್ನು ಒಳಗೊಂಡಿರುತ್ತದೆ ಎಂಬ ಅಂಶವು ನಮಗೆ ಮೆಚ್ಚಿಗೆಯಾಗಿದೆ.

ವಿಶ್ವದ ಅಗ್ರ ಆಟಗಾರರು ಮೊದಲ ಬಾರಿಗೆ ಭಾರತದಲ್ಲಿ ಒಟ್ಟಿಗೆ ಪ್ರದರ್ಶನ ನೀಡುವುದನ್ನು ನೋಡುವುದು ನಾನು ಸೇರಿದಂತೆ ಅನೇಕ ಅಭಿಮಾನಿಗಳ ಕನಸು ನನಸಾಗಿದೆ. ಈ ದಂತಕಥೆಗಳು ಕ್ರಿಕೆಟ್ ಮೇಲಿನ ನಮ್ಮ ಭಕ್ತಿ ಮತ್ತು ಕ್ರೀಡೆಯ ಮೇಲಿನ ಪ್ರೀತಿಯನ್ನು ರೂಪಿಸಿದವರು ಮತ್ತು ಅವರು ಮತ್ತೆ ಮೈದಾನಕ್ಕಿಳಿಯುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದೇವೆ ಎಂದು ಹೇಳಿದರು.

 ವಿಶ್ವದ ಶ್ರೇಷ್ಠ ಕ್ರಿಕೆಟಿಗರು ಭಾಗಿ

ವಿಶ್ವದ ಶ್ರೇಷ್ಠ ಕ್ರಿಕೆಟಿಗರು ಭಾಗಿ

ಲೀಗ್‌ನಲ್ಲಿ ಮಾಜಿ ಕ್ರಿಕೆಟಿಗರು ಸ್ಪರ್ಧಾತ್ಮಕ ಕ್ರಿಕೆಟ್ ಆಡುತ್ತಿದ್ದಾರೆ. ಮೊದಲ ಋತುವಿನಲ್ಲಿ, ಎಲ್‌ಎಲ್‌ಸಿ ಪಂದ್ಯಾವಳಿಯಲ್ಲಿ ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಮಿಸ್ಬಾ-ಉಲ್-ಹಕ್, ಶೋಯೆಬ್ ಅಖ್ತರ್, ಸನತ್ ಜಯಸೂರ್ಯ, ಡ್ಯಾರೆನ್ ಸಾಮಿ, ಹರ್ಷಲ್ ಗಿಬ್ಸ್, ಬ್ರೆಟ್ ಲೀ, ಕೆವಿನ್ ಪೀಟರ್ಸನ್ ಮತ್ತು ಜಾಂಟಿ ರೋಡ್ಸ್ ಸೇರಿದಂತೆ 59 ಆಟಗಾರರನ್ನು ಹೊಂದಿತ್ತು.

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡನೇ ಸೀಸನ್ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಿಂದ ಪ್ರಾರಂಭವಾಗಲಿದ್ದು, ನಂತರ ಲಕ್ನೋ, ನವದೆಹಲಿ, ಕಟಕ್ ಮತ್ತು ಜೋಧ್‌ಪುರ, ಪ್ಲೇ-ಆಫ್‌ಗಳು ಮತ್ತು ಫೈನಲ್‌ಗಳು ಡೆಹ್ರಾಡೂನ್‌ನಲ್ಲಿ ನಡೆಯುವ ನಿರೀಕ್ಷೆಯಿದೆ.

 ಇನ್ನೆರಡು ತಂಡಗಳಿಗೂ ಶೀಘ್ರದಲ್ಲೇ ಫ್ರಾಂಚೈಸಿ ಘೋಷಣೆ

ಇನ್ನೆರಡು ತಂಡಗಳಿಗೂ ಶೀಘ್ರದಲ್ಲೇ ಫ್ರಾಂಚೈಸಿ ಘೋಷಣೆ

ಅದಾನಿ ಮತ್ತು ಜಿಎಂಆರ್ ಗ್ರೂಪ್‌ಗಳಂತಹ ಉನ್ನತ ಕಾರ್ಪೊರೇಟ್‌ಗಳು ಎಲ್‌ಎಲ್‌ಸಿಯ ಫ್ರಾಂಚೈಸಿಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಸಂತೋಷದ ವಿಚಾರ. ಶೀಘ್ರದಲ್ಲೇ ಇತರ ಎರಡು ಫ್ರಾಂಚೈಸಿಗಳನ್ನು ಸಹ ಘೋಷಿಸಲಿದ್ದೇವೆ ಎಂದು ಸಹ-ಸಂಸ್ಥಾಪಕ ಮತ್ತು ಸಿಇಒ ರಾಮನ್ ರಹೇಜಾ ಹೇಳಿದರು.

ಪ್ರಪಂಚದ ಯಾವುದೇ ಅಗ್ರ ಲೀಗ್‌ಗೆ ಹೋಲಿಸಿದರೆ ಎಲ್‌ಎಲ್‌ಸಿ ಫ್ರಾಂಚೈಸಿ ವೆಚ್ಚ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂದು ರಹೇಜಾ ಹೇಳಿದರು. ಪ್ರತಿ ತಂಡಗಳು ಒಂದು ಮಿಲಿಯನ್ ಡಾಲರ್ ಆಟಗಾರರ ಪರ್ಸ್ ಹೊಂದಿದ್ದು, ಲೀಗ್‌ನ ಆದಾಯ ಹಂಚಿಕೆ ಮಾದರಿಯು ಎಲ್ಲಾ ಫ್ರಾಂಚೈಸಿಗಳು ಲೀಗ್‌ನ ಆರಂಭಿಕ ವರ್ಷಗಳಲ್ಲಿ ಗರಿಷ್ಠ ಆದಾಯವನ್ನು ಪಡೆಯುವ ರೀತಿಯಲ್ಲಿ ರಚನೆಯಾಗಿದೆ. ಅಲ್ಲದೆ, ಇತರ ಟಿ20 ಲೀಗ್‌ಗಳಂತೆ, ಪಂದ್ಯಗಳ ಆತಿಥ್ಯದ ವೆಚ್ಚವು ಫ್ರಾಂಚೈಸಿಯೊಂದಿಗೆ ಇರುವುದಿಲ್ಲ ಎಂದು ಹೇಳಿದರು.

English summary
The Adani Group and the GMR Group have picked up franchises in the Legends League Cricket (LLC), ahead of the second season. the second season will be held in India from September 16. The upcoming edition will have a four team franchise model. Dedicated to the 75th year celebration of Indian Independence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X