ಯುಎಸ್ ಓಪನ್ ಗೆದ್ದು ದಾಖಲೆ ಬರೆದ ಯುವ ಟೆನಿಸ್ ಪಟು ಕಾರ್ಲೋಸ್
ವಾಷಿಂಗ್ಟನ್, ಸೆ.12: ಸ್ಪೇನ್ ದೇಶದ 19 ವರ್ಷ ವಯಸ್ಸಿನ ಕಾರ್ಲೋಸ್ ಅಲ್ಕರಾಜ್ ಹೊಸ ದಾಖಲೆ ಬರೆದಿದ್ದಾರೆ. ಭಾನುವಾರ ನಡೆದ ಪುರುಷರ ಯುಎಸ್ ಓಪನ್ ಸಿಂಗಲ್ಸ್ ಫೈನಲ್‌ನಲ್ಲಿ ಗೆದ್ದು, ಅತ್ಯಂತ ಕಿರಿಯ ವಯಸ್ಸಿನಲ್ಲೇ ವಿಶ್ವದ ನಂಬರ್ ಎನಿಸಿಕೊಂಡ ಸಾಧನೆ ಮಾಡಿದ್ದಾರೆ.
ಸ್ಪೇನ್‌ನ ಮೂರನೇ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್ ಅವರು ಐದನೇ ಶ್ರೇಯಾಂಕದ ನಾರ್ವೆಯ ಕಾಸ್ಪರ್ ರುಡ್ ಅವರನ್ನು ಸೋಲಿಸಿ ಯುಎಸ್ ಓಪನ್ ತಮ್ಮದಾಗಿಸಿಕೊಂಡರು. ಕಾರ್ಲೋಸ್ ಅಲ್ಕರಾಜ್ ಅವರು ಇದು ಮೊದಲ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಗಿತ್ತು.
ಆರ್ಥ ಆಶ್ ಕ್ರೀಡಾಂಗಣದಲ್ಲಿ ಕಾರ್ಲೋಸ್ ಅಲ್ಕರಾಜ್ ಅವರು 6-4, 2-6, 6-7, 7-6(7/1), 6-3ರಲ್ಲಿ ಕಾಸ್ಪರ್ ರುಡ್ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದರು.

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅಲ್ಕರಾಜ್ ಅಮೆರಿಕದ ಫ್ರಾನ್ಸಿಸ್ ಟಿಯಾಫೋ ವಿರುದ್ಧ ಪ್ರಯಾಸದ ಗೆಲುವು ಕಂಡಿದ್ದರು. ಐದು ಸೆಟ್‌ಗಳ ಹೋರಾಟದಲ್ಲಿ ಎರಡು ಬಾರಿ ಹಿಂದೆ ಬಿದ್ದರೂ ಹೋರಾಟ ಮುಂದುವರೆಸಿ ಗೆಲುವು ಸಾಧಿಸಿ ಅಂತಿಮ ಹಣಾಹಣಿ ತಲುಪಿದ್ದರು.
Carlos Alcaraz has the net game working early!#USOpen pic.twitter.com/ARaqnNQjyC
— US Open Tennis (@usopen) September 11, 2022
ಸ್ಯಾನಿಶ್ ಟೆನಿಸ್ ಆಟಗಾರ ಕಾರ್ಲೋಸ್ ಅಲ್ಕರಾಜ್ ಸೆಮಿಫೈನಲ್ ಗೆಲ್ಲುವ ಮೂಲಕ ತಮ್ಮ 50 ನೇ ಜಯವನ್ನು ಗಳಿಸಿದರು. ರುಡ್ ಅವರು ಯುಎಸ್ ಓಪನ್ ಪ್ರಶಸ್ತಿಯನ್ನು ಗೆದ್ದರೆ ಎಟಿಪಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಕ್ಯಾಸ್ಪರ್ ರುಡ್ ಅವರು ಮತ್ತೊಂದು ಉಪಾಂತ್ಯ ಪಂದ್ಯದಲಿ ಮೂರು ಗಂಟೆಗಳ ಹೋರಾಟದಲ್ಲಿ ಕರೆನ್ ಖಚಾನೋವ್ ಅವರನ್ನು ಸೋಲಿಸಿದ್ದರು.
ಯುಎಸ್ ಓಪನ್ ಅಂತಿಮ ಪಂದ್ಯ ಪ್ರಾರಂಭವಾಗುವುದಕ್ಕೂ ಮೊದಲು ಆರ್ಥರ್ ಆಶ್ ಸ್ಟೇಡಿಯಂ ಪ್ರೇಕ್ಷಕರು ಮೌನಾಚರಣೆಯಲ್ಲಿ ಪಾಲ್ಗೊಂಡರು. ಸೆಪ್ಟೆಂಬರ್ 11 ರ ದಾಳಿಯ 21ನೇ ಕಹಿ ನೆನಪು ಕಾಡುತ್ತಿದ್ದು, ಇದರ ಸ್ಮರಣಾರ್ಥ ಮೌನಾಚರಣೆ ನಡೆಯಿತು.
2005 ರ ಫ್ರೆಂಚ್ ಓಪನ್‌ನಲ್ಲಿ ರಾಫೆಲ್ ನಡಾಲ್ ನಂತರ ಕಾರ್ಲೋಸ್ ಅತಿ ಕಿರಿಯ ಗ್ರ್ಯಾಂಡ್ ಸ್ಲ್ಯಾಮ್ ಪುರುಷರ ಚಾಂಪಿಯನ್ ಆಗಿದ್ದಾರೆ.ಅಲ್ಲದೆ, ಪೀಟ್ ಸಾಂಪ್ರಾಸ್ ನಂತರ ನ್ಯೂಯಾರ್ಕ್‌ನಲ್ಲಿ ಚಾಂಪಿಯನ್ ಆದ ಅತ್ಯಂತ ಕಿರಿಯ ಟೆನಿಸ್ ಪಟು ಎನಿಸಿಕೊಂಡಿದ್ದಾರೆ. 1990ರಲ್ಲಿ ಪೀಟ್ ಈ ಸಾಧನೆ ಮಾಡಿದ್ದರು.












Click it and Unblock the Notifications